ಕೋಡಿಂಬಾಡಿಯಲ್ಲಿ ಜ.15ರಿಂದ ಫೆ.6ರವರೆಗೆ 15ನೇ ವರ್ಷದ ನಗರ ಭಜನೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಫೆ.5ರಂದು 4ನೇ ವರ್ಷದ ಅಶ್ವತ್ಥ ಪೂಜೆ, 44ನೇ ವರ್ಷದ ಸತ್ಯನಾರಾಯಣ ಪೂಜೆ

ಪುತ್ತೂರು: ಧರ್ಮಶ್ರೀ ಭಜನಾ ಮಂದಿರ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ನೇತೃತ್ವದಲ್ಲಿ 15ನೇ ವರ್ಷದ ನಗರ ಭಜನೋತ್ಸವ ಜ.15ರಿಂದ ಫೆ.6ರವರೆಗೆ ನಡೆಯಲಿದೆ.

ಜ.15ರಂದು ಬೆಳಿಗ್ಗೆ ಭಜನಾ ಮಂದಿರದಲ್ಲಿ ಮಹಾಗಣಪತಿ ಹೋಮ, ಸಂಜೆ ಮಂದಿರದಿಂದ ಮನೆ ಮನೆಗೆ ಭಜನೆ ಹೊರಡುವುದು, ಬಳಿಕ ಪ್ರತೀ ದಿನ ಸಂಜೆ ಗ್ರಾಮದ ಪ್ರತೀ ಬೈಲುವಾರು ಮನೆ ಮನೆಗಳಲ್ಲಿ ಭಜನೆ, ಫೆ.4ರಂದು ಮನೆ ಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವುದು, ಫೆ.5ರಂದು ಪ್ರಾತಃಕಾಲ ಏಕಾಹ ಭಜನೆ ಆರಂಭ, ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಫೆ.6ರಂದು ಪ್ರಾತಃಕಾಲ ಏಕಾಹ ಭಜನೆಯ ಮಂಗಳ ನಡೆಯಲಿದೆ ಎಂದು ಧರ್ಮಶ್ರೀ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್, ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ, ಕಾರ್ಯದರ್ಶಿ ದಯಾನಂದ ಗೌಡ ಬೋಳಾಜೆ, ಪ್ರಧಾನ ಅರ್ಚಕ ಅನಂತೇಶ ಮಯ್ಯ ಮತ್ತು ಅರ್ಚಕ ದೀಪಕ್ ಮಣಿಯಾಣಿ ತಿಳಿಸಿದ್ದಾರೆ.

ಫೆ.5ರಂದು ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯ ನೇತೃತ್ವದಲ್ಲಿ ಕೋಡಿಂಬಾಡಿಯ ಅಶ್ವತ್ಥಕಟ್ಟೆಯಲ್ಲಿ ನಾಲ್ಕನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ ಹಾಗೂ ಸಂಜೆ 44 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ವೇದಮೂರ್ತಿ ಶ್ರೀವತ್ಸ ಕೆದಿಲಾಯರವರಿಂದ ಕಥಾವಾಚನ, ಪೂಜೆಯ ಬಳಿಕ ಅನ್ನಸಂತರ್ಪಣೆ ಜರಗಲಿದೆ ಎಂದು ಪೂಜಾ ಸಮಿತಿಯ ಗೌರವಾಧ್ಯಕ್ಷ ಕೇಶವ ಭಂಡಾರಿ ಕೈಪ, ಅಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ ಮತ್ತು ಅರ್ಚಕ ಬಾಲಕೃಷ್ಣ ಐತಾಳ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.