ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಶಿಬಿರ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಹಾಗೂ ಲಿಯೋ ಕ್ಲಬ್ ಪುತ್ತೂರ್‍ದ ಮುತ್ತು ಇವರ ಸಂಯೋಜಕತ್ವದಲ್ಲಿ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಶಿಬಿರ ಕಾರ್‍ಯಕ್ರಮವು ಜ.11ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಯನ್ ಡಾ|| ಗೀತಪ್ರಕಾಶ್ PMJF ರವರು ವಿದ್ಯಾರ್ಥಿನಿಯರಿಗೆ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ನಾವು ಏನೇ ಗುರಿಯನ್ನು ಇಟ್ಟುಕೊಂಡರೂ ವರ್ತಮಾನದಲ್ಲಿ ತೃಪ್ತಿಯನ್ನು ಕಾಣಬೇಕು. ‘ಹರೆಯ’ ಎಂಬುದು ಒಂದು ಪರಿವರ್ತನೆಯ ಘಟ್ಟ, ಈ ಸಮಯದಲ್ಲಿ ಬೆಳವಣಿಗೆ ಹೊಂದುವುದರ ಮೂಲಕ ನಮ್ಮ ಜೀವನ ಒಳ್ಳೆಯ ದಾರಿಯತ್ತ ಸಾಗಬಹುದು ಅಥವಾ ಕೆಟ್ಟ ನಿರ್ಧಾರಗಳಿಂದ ಜೀವನ ಹಾಳಾಗುವ ಸಾಧ್ಯತೆಯಿದೆ. ಹಾಗಾಗಿ ಜೀವನವನ್ನು ಎಚ್ಚರಿಕೆಯಿಂದ ಈ ಸಂದರ್ಭದಲ್ಲಿ ನಡೆಸಲು ಪ್ರಮುಖ ನಿರ್ಧಾರವನ್ನು ಕೈಗೊಳ್ಳಬೇಕು. ಎಂದರು. ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷರಾದ ಲಯನ್ ಹೇಮನಾಥ ಶೆಟ್ಟಿ ಕಾವು ಮಾತನಾಡುತ್ತಾ, ಪ್ರೌಢಾವ್ಯವಸ್ಥೆಯ ಸಮಯದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಮಕ್ಕಳು ಹೇಳಿಕೊಳ್ಳಲಾಗದೆ ಗುಪ್ತವಾಗಿ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಇಂತಹ ಕಾರ್‍ಯಕ್ರಮಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದರು.

 ಲಯನ್ಸ್ ಕ್ಲಬ್ ಪುತ್ತೂರ್‍ದ ಮುತ್ತು ಇದರ ಅಧ್ಯಕ್ಷರು ಲಯನ್ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಮಾತನಾಡಿ  ಲಯನ್ಸ್ ಕ್ಲಬ್‌ನ ಮುಖಾಂತರ ಜನರೊಂದಿಗೆ ಜನಸೇವೆ ಮಾಡಲು ದೊರಕಿದ್ದು, ನನ್ನ ಜೀವನದ ಭಾಗ್ಯ ಎಂದು ಹೇಳಿ ಕಾರ್‍ಯಕ್ರಮಕ್ಕೆ ಶುಭಹಾರೈಸಿದರು. ವಲಯ ಅಧ್ಯಕ್ಷರಾದ ಲಯನ್ ಶಿವಪ್ರಸಾದ್ ಶೆಟ್ಟಿಯವರು ಕಾರ್‍ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ  ರೋಸಲಿನ್ ಲೋಬೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್‍ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಇದರ ಕಾರ್‍ಯದರ್ಶಿಗಳು ಹಾಗೂ ಸದಸ್ಯರು ಹಾಜರಿದ್ದರು.

ಕಾರ್‍ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊರವರು ಸ್ವಾಗತಿಸಿ,  ಭವ್ಯ ವಂದಿಸಿದರು.  ರೂಪ ಡಿಕೊಸ್ಟ ಕಾರ್‍ಯಕ್ರಮವನ್ನು ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.