ಮಾಡಾವು: ದೇವಿ ಇಲೆಕ್ಟ್ರೀಕಲ್ಸ್ ಸ್ಥಳಾಂತರಗೊಂಡು ಸ್ವಂತ ಕಟ್ಟಡ ಬ್ರಾಹ್ಮರಿಯಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸತತ ಪರಿಶ್ರಮ ಮತ್ತು ಛಲದಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ: ರೊ.ವಿಶ್ವನಾಥ ನಡುತೋಟ

ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿಗೆ ಜಗತ್ತೇ ಪೈಪೋಟಿಯಲ್ಲಿರುವ ಸಮಯದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಏನೂ ಅಲ್ಲ ಇದು, ಈ ಶಿಕ್ಷಣದಿಂದ ಇವತ್ತು ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಕಷ್ಟವಿದೆ. ಏಕೆಂದರೆ ಇವತ್ತು ಭವಿಷ್ಯದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿ ಬಯಸುತ್ತಿರುವುದು ಉದ್ಯೋಗವನ್ನು ಆದರೆ ಇಂದು ಉದ್ಯೋಗ ಅನ್ನುವುದು ಮರೀಚಿಕೆಯಾಗುತ್ತಿದೆ. ಆದ್ದರಿಂದ ಸ್ವಉದ್ಯೋಗದ ಅವಶ್ಯಕತೆ ಇಂದು ತುಂಬಾ ಇದೆ. ವೃತ್ತಿಪರ ಶಿಕ್ಷಣದ ಅವಶ್ಯಕತೆ ಇದೆ. ಇಂತಹ ಸ್ವಉದ್ಯೋಗದ ಮೂಲಕ ಇಂದು ಯಶಸ್ಸನ್ನು ಕಂಡ ಸುಬ್ರಾಯ ಗೌಡರವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಹಿರಿಯ ಶ್ರೇಣಿ ಉಪನ್ಯಾಸಕ ರೊ.ವಿಶ್ವನಾಥ ನಡುತೋಟ ಹೇಳಿದರು.


ಅವರು ಮಾಡಾವು ಬ್ರಾಹ್ಮರಿಯಲ್ಲಿ ದೇವಿ ಇಲೆಕ್ಟ್ರೀಕಲ್ಸ್‌ನವರ ನೂತನ ಮಳಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಇದನ್ನು ಜ.14 ರಂದು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಿ ಉದ್ಯೋಗ ಸಿಗಬೇಕಾದರೆ ಸಂಸ್ಕಾರ,ಸಂಘಟನೆ, ಸೇವೆಗಳಿಂದ ಕೂಡಿದ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ಸೇವೆಯನ್ನು ಕಲಿಸಿಕೊಡುವ ಶಿಕ್ಷಣ ಬೇಕು, ತಮ್ಮ ಜೀವನಕ್ಕೆ ಅನುಗುಣವಾದ ಶಿಕ್ಷಣದ ಅವಶ್ಯಕತೆ ಇದೆ ಎಂದು ವಿಶ್ವನಾಥ ನಡುತೋಟ ಹೇಳಿದರು. ಯಾವುದೇ ಶಿಕ್ಷಣ ಪಡೆದರೂ ಇಂದು ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ, ಇದನ್ನು ಕಡಿಮೆಯಾಗಬೇಕಾದರೆ ಸ್ವಉದ್ಯೋಗದ ಕಡೆಗೆ ಜನರು ಮನಸ್ಸು ಮಾಡಬೇಕು ಎಂದು ಹೇಳಿದರು.


ಸುಬ್ರಾಯ ಗೌಡರು ಎಲ್ಲರಿಗೂ ಮಾದರಿ
ಸುಮಾರು 40 ಕಿ.ಮೀ ದೂರ ಬಂದ ವೃತ್ತಿ ಶಿಕ್ಷಣವನ್ನು ಕಲಿತು ಇಲೆಕ್ಟ್ರೀಕಲ್ಸ್ ಶಾಫ್ ತೆರೆದು ಸ್ವಉದ್ಯೋಗವನ್ನು ಆರಂಭಿಸಿ ತನ್ನ ಶ್ರಮ ಮತ್ತು ಛಲದ ಮೂಲಕ ಜೀವನದಲ್ಲಿ ಯಶಸ್ಸು ಕಂಡ ಸುಬ್ರಾಯ ಗೌಡರವರು ಇಂದು ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಇಂದು ಸುಮಾರು 25 ಕ್ಕೂ ಅಧಿಕ ಮಂದಿಗೆ ಉದ್ಯೋಗ ಕೊಡುತ್ತಿರುವ ಸುಬ್ರಾಯರವರನ್ನು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ವಿಶ್ವನಾಥ ನಡುತೋಟ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕಾಣಿಯೂರು ಹೈಸ್ಕೂಲ್‌ನ ನಿವೃತ್ತ ಮುಖ್ಯಗುರು ಮೋನಪ್ಪ ಗೌಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ನೂರಾರು ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.


ಗುರುವಂದನೆ/ಗೌರವಾರ್ಪಣೆ
ಸುಬ್ರಾಯ ಗೌಡರ ವೃತ್ತಿ ಪರ ಶಿಕ್ಷಣದ ಗುರುಗಳಾಗಿದ್ದ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಹಿರಿಯ ಶ್ರೇಣಿ ಉಪನ್ಯಾಸಕ ರೊ.ವಿಶ್ವನಾಥ ನಡುತೋಟರವರಿಗೆ ಸುಬ್ರಾಯ ಗೌಡ ದಂಪತಿಗಳಿಂದ ಗುರುವಂದನೆ ನಡೆಯಿತು. ಫಲಪುಷ್ಪ ಕೊಟ್ಟು, ಪೇಟಾ ತೊಡಿಸಿ, ಶಾಲು ಹಾಕಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗುರುಗಳಿಂದ ಶಿಷ್ಯನಿಗೆ ಗೌರವಾರ್ಪಣೆ ನಡೆಯಿತು. ವಿಶ್ವನಾಥ ನಡುತೋಟರವರು ಸುಬ್ರಾಯ ಗೌಡರಿಗೆ ಶಾಲು,ಹಾರ ಹಾಗೂ ಸುಬ್ರಹ್ಮಣ್ಯ ದೇವರ ಫೋಟೋ ನೀಡಿ ಗೌರವಿಸಿದರು.


ಗೌರವಾರ್ಪಣೆ/ಸನ್ಮಾನ
ಕಟ್ಟಡ ನಿರ್ಮಾಣದ ಕಾರ್ಮಿಕರಾಗಿ ದುಡಿದ ಕೃಷ್ಣಪ್ಪ ಗೌಡ, ದಿನೇಶ್ ಕಾಪುತ್ತಡ್ಕ, ಚಿದಾನಂದ ಮತ್ತು ಅಜಿತ್‌ರವರುಗಳಿಗೆ ಗೌರವಾರ್ಪಣೆ ನಡೆಯಿತು. ಕಟ್ಟಡ ಗುತ್ತಿಗೆದಾರ ಶರತ್ ಕುಮಾರ್ ಗುತ್ತು, ಈ ಹಿಂದೆ ದೇವಿ ಇಲೆಕ್ಟ್ರೀಕಲ್ಸ್ ಕಾರ್ಯನಿರ್ವಹಿಸುತ್ತಿದ್ದ ಕಾಂಪ್ಲೆಕ್ಸ್ ಮಾಲಕ ಡಾ.ರಾಮಚಂದ್ರ ಭಟ್ ಇವರನ್ನು ಸನ್ಮಾನಿಸಲಾಯಿತು. ಇದಲ್ಲದೆ ಸಂಸ್ಥೆಯ ಸಿಬ್ಬಂದಿಗಳಾದ ಅಬ್ದುಲ್ ಖಾದರ್, ಸುಭಾಷ್,ದಿನೇಶ್, ಜಗದೀಶ್, ಗಣೇಶ್, ಸೀತಾರಾಮ, ಲೋಕೇಶ್ ಕಲ್ಲಕಟ್ಟ, ಮಹೇಶ್, ಹರೀಶ್, ಉಸ್ಮಾನ್, ರುಕ್ಮಯ್ಯ, ಲೋಕೇಶ್ ಅಂಬುಲ, ಭಾಸ್ಕರ್, ಶಾನು, ಚೇತನ್, ವಿನೋದ್, ಜಯಶ್ರೀ, ಶೋಭಿತ್, ಶುಭಾ ಮತ್ತು ಅಪೂರ್ವರವರುಗಳಿಗೆ ಶಾಲು ಹಾಕಿ ಗೌರವಿಸಲಾಯಿತು.


ಮನರಂಜಿಸಿದ ಸಂಗೀತ ರಸಮಂಜರಿ
ಸಭಾಕಾರ್ಯಕ್ರಮದ ಬಳಿಕ ಬಾಲಕೃಷ್ಣ ನೆಟ್ಟಾರು ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು. ಹಲವು ಮಂದಿ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು. ಸಂಸ್ಥೆಯ ಸಿಬ್ಬಂದಿಗಳಾದ ಶುಭಾ, ಅಪೂರ್ವ ಮತ್ತು ಜಯಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಮಾಲಕ ಸುಬ್ರಾಯ ಗೌಡ ಪಾಲ್ತಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸುಬ್ರಾಯ ಗೌಡರ ಪತ್ನಿ ಜಯಶ್ರೀ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಸದಾಶಿವ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.

ಒಂದೇ ಸೂರಿನಡಿ ಇಲೆಕ್ಟ್ರೀಕಲ್ಸ್, ಇಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಕೃಷಿ ಉಪಕರಣ ಲಭ್ಯ
ಮಾಡಾವು ಬ್ರಾಹ್ಮರಿಯಲ್ಲಿ ಆರಂಭವಾಗಿರುವ ದೇವಿ ಇಲೆಕ್ಟ್ರೀಕಲ್ಸ್‌ನ ವಿಸ್ತೃತ ಮಳಿಗೆಯು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಇದೆ. ಇಲ್ಲಿ ಇಲೆಕ್ಟ್ರೀಕಲ್ಸ್, ಇಲೆಕ್ಟ್ರಾನಿಕ್ಸ್ ಐಟಂಗಳು ಅಲ್ಲದೆ ಕೃಷಿ ಉಪಕರಣಗಳು ಹಾಗೂ ಹಾರ್ಡ್‌ವೇರ್ ಐಟಂಗಳು ಒಂದೇ ಸೂರಿನಡಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ವಸ್ತುಗಳು ಇಲ್ಲಿವೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿಗಳ ಮತ್ತು ಕಾರ್ಮಿಕರ ನಗುಮೊಗದ ಸೇವೆ ಸಂಸ್ಥೆಯ ವಿಶೇಷತೆಯಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9902694349 ಗೆ ಸಂಪರ್ಕಿಸಬಹುದಾಗಿದೆ.

` ಬಹಳ ಬಡತನದಿಂದ ಮೇಲೆ ಬಂದವ ನಾನು, ನನ್ನ ಗೆಳೆಯರ, ಗುರುಗಳ, ಸಿಬ್ಬಂದಿಗಳ ಅಲ್ಲದೆ ಹೆಚ್ಚಾಗಿ ನನ್ನ ಎಲ್ಲಾ ಗ್ರಾಹಕ ಬಂಧುಗಳ ಸಹಕಾರ, ಪ್ರೋತ್ಸಾಹದಿಂದಲೇ ಉದ್ಯೋಗ ಕ್ಷೇತ್ರದಲ್ಲಿ ನನಗೆ ಯಶಸ್ಸು ಸಿಕ್ಕಿದೆ. ನಾನು ಇಂದು ನೆಮ್ಮದಿಯಾಗಿದ್ದೇನೆ ಎಂದರೆ ಇದಕ್ಕೆ ನನ್ನ ಎಲ್ಲಾ ಗ್ರಾಹಕ ಮಿತ್ರರು ಕಾರಣರಾಗಿದ್ದಾರೆ. ನನ್ನನ್ನು ಹರಸಿ ಹಾರೈಸಿದ ಎಲ್ಲಾ ಗ್ರಾಹಕರಿಗೆ, ಹಿರಿಯರಿಗೆ, ಅಧಿಕಾರಿ ವರ್ಗದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ’ ಸುಬ್ರಾಯ ಗೌಡ ಪಾಲ್ತಾಡಿ, ಮಾಲಕರು ದೇವಿ ಇಲೆಕ್ಟ್ರೀಕಲ್ಸ್ ಬ್ರಾಹ್ಮರಿ ಮಾಡಾವು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.