ರೋಟರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಂದ ಗೌರವಾರ್ಪಣೆ

0

 

ರೋಟರಿ ಆಂಗ್ಲಮಾದ್ಯಮ ಪ್ರೌಢಶಾಲೆ ಸುಳ್ಯ, ಇಂಟರಾಕ್ಟ್ ಕ್ಲಬ್ ಹಾಗೂ ಭಗತ್ ಸಿಂಗ್ ಸ್ಕೌಟ್ಸ್ & ರಾಣಿ ಅಬ್ಬಕ್ಕ ಗೈಡ್ಸ್ ರೋಟರಿ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕ ದಿನಾಚರಣೆಯನ್ನು ಜು.6 ರಂದು ಆಚರಿಸಲಾಯಿತು.


ಕು.ಸಾನಿಕಾ, ಅನನ್ಯ ಕೆ.ಬಿ ಹಾಗೂ ಅವನಿ ಎನ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಕು.ಸಿಂಚನ ಶಿಕ್ಷಕ ದಿನಾಚರಣೆಯ ಕುರಿತು ಮಾತನಾಡಿದರು.
ಸಹಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಮಾತನಾಡುತ್ತಾ , ಪಠ್ಯ ಬೋಧನೆ ಜೊತೆ ಜೊತೆಗೆ ಮಕ್ಕಳಲ್ಲಿ ಆದರ್ಶ ಗುಣಗಳನ್ನು ತುಂಬುವವರೇ ಶಿಕ್ಷಕರು. ಮಕ್ಕಳು ಅತ್ಯುನ್ನತ ಶಿಕ್ಷಣ ಪಡೆದು ಸರ್ಟಿಫಿಕೇಟ್ ಪಡೆದರೆ ಸಾಲದು ತಂದೆ – ತಾಯಿಯನ್ನು, ಗುರು ಹಿರಿಯರನ್ನು ಗೌರವಿಸುವ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.ಸಮಾಜದ,ದೇಶದ ಸೇವೆ ಮಾಡುವ ವ್ಯಕ್ತಿತ್ವ ರೂಪಿಸಿಕೊಂಡಾಗ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಶಿಕ್ಷಕಿ ಜಯಶ್ರೀ. ಕೆ. ಜನಪದ ಗೀತೆ ಹಾಡಿದರೆ, ಕು. ರಮ್ಯ ಭಕ್ತಿಗೀತೆ ಹಾಡಿ ಮಕ್ಕಳನ್ನು ರಂಜಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ನಂತರ ಮಕ್ಕಳು ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ಹೂವು, ಸ್ಮರಣಿಕೆ ನೀಡಿ ಗೌರವಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟಿಸಿದ ಮಕ್ಕಳನ್ನು ಅಭಿನಂದಿಸಿದರು. ಇಂಟರಾಕ್ಟ್ ಅಧ್ಯಕ್ಷೆ ಸನಿಹ ಶೆಟ್ಟಿ ಸ್ವಾಗತಿಸಿ, ಸಾನಿಕಾ .ರೈ ವಂದಿಸಿದರು. ಕು. ವೈಷ್ಣವಿ ಶೆಟ್ಟಿ ಹಾಗೂ ಕು.ಮನಸ್ವಿ ಯು.ಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here