ಕುಂಬ್ರ : ಬಾಡಿಗೆ ಬಾಕಿ ವಿಚಾರ; ಅಂಗಡಿಕೋಣೆಗೆ ಬೀಗ

0

ಪುತ್ತೂರು: ಕುಂಬ್ರ ಪೇಟೆಯಲ್ಲಿರುವ ಒಳಮೊಗ್ರು ಗ್ರಾಪಂ ಗೆ ಸೇರಿದ ಎರಡು ಅಂಗಡಿ ಕೋಣೆಗೆ ಅಂಗಡಿ ಕೋಣೆಯನ್ನು ಬಾಡಿಗೆ ನೀಡಿದ್ದ ಕುಂಬ್ರದ ಸಲಾಮುದ್ದೀನ್ ಎಂಬವರು ಬಾಡಿಗೆ ಬಾಕಿ ಇರುವ ಕಾರಣಕ್ಕೆ ಕೋಣೆಗೆ ಬೀಗ ಜಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಕುಂಬ್ರದಲ್ಲಿರುವ ಪಂಚಾಯಿತಿ ಕಟ್ಟಡದಲ್ಲಿ ಬೇಕರಿ ವ್ಯವಹಾರ ಮಾಡುತ್ತಿದ್ದ ಅಂಗಡಿ ಮತ್ತು ಹೊಟೇಲ್ ವ್ಯವಹರ ನಡೆಸುತ್ತಿದ್ದ ಎರಡೂ ಕೋಣೆಗಳಿಗೆ ಬೀಗ ಜಡಿಯಲಾಗಿದೆ. ಇವರಿಬ್ಬರಿಂದ ಒಟ್ಟು ೨ ಲಕ್ಷದ ೮೦ ಸಾವಿರ ಬಾಡಿಗೆ ಮೊತ್ತವನ್ನು ಪಂಚಾಯಿತಿಗೆ ಬಾಕಿ ಇದೆ. ಎರಡೂ ಕೋಣೆಯು ಸಲಾಮುದ್ದೀನ್ ಅವರ ಹೆಸರಿನಲ್ಲಿದ್ದು ಬೇಕರಿ ಮತ್ತು ಹೊಟೇಲ್‌ಗೆ ಬಡಿಗೆ ನೀಡಿದ್ದಾರೆ. ಇಬ್ಬರೂ ಬಡಿಗೆ ಪಾವತಿಸದ ಕಾರಣ ಗ್ರಾಪಂನಿಂದ ಸಲಾಮುದ್ದೀನ್ ಅವರಿಗೆ ಬಾಡಿಗೆ ಪಾವತಿ ಮಾಡುವಂತೆ ಗ್ರಾಪಂ ನೊಟೀಸ್ ಜಾರಿ ಮಾಡಿತ್ತು. ಮೂರನೇ ನೊಟೀಸ್‌ನಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ ಬಳಿಕ ಸಲಾಮುದ್ದೀನ್ ಕೋಣೆಗೆ ಬೀಗ ಜಡಿದಿದ್ದರು. ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಕೋಣೆಯ ಮಾಲಕರಾದ ಅಬ್ದುಲ್‌ರಹಿಮಾನ್ ಹಾಜಿ ಉಜಿರೋಡಿಯವರು ಸ್ವಲ್ಪ ಮೊತ್ತವನ್ನು ಪಔತಿಸಿದ ಕಾರಣ ಅವರ ಹೊಟೇಲ್ ಬೀಗವನ್ನು ತೆರವು ಮಾಡಲಾಗಿದ್ದು ದಿನಾಂಕದ ಗಡುವು ವಿಧಿಸಿ ಬೀಗವನ್ನು ತೆರವು ಮಾಡಲಾಗಿದೆ. ಬೇಕರಿಯ ಮಾಲಕರ ಮೊತ್ತ ಬಾಕಿ ಇರುವ ಕಾರಣ ಬೀಗ ತೆರವು ಮಾಡಿಲ್ಲ ಎಂದು ಸಲಾಮುದ್ದೀನ್ ತಿಳಿಸಿದ್ದಾರೆ. ಅಂಗಡಿ ಕೋಣೆಯಲ್ಲಿ ವ್ಯವಹಾರ ಮಾಡುತ್ತಿದ್ದವರು ಸರಿಯಾಗಿ ಪಂಚಾಯಿತಿಗೆ ಬಾಡಿಗೆ ಪಾವತಿಸಿದ ಕಾರಣ ನನ್ನ ವಿರುದ್ದ ಕಾನೂನು ಕ್ರಮಕೈಗೊಳ್ಳುವ ನೊಟೀಸ್ ಗ್ರಾಪಂ ಕಳುಹಿಸಿದ್ದು ಈ ಕಾರಣಕ್ಕೆ ಬೀಗ ಹಾಕಿದ್ದು ಬಾಡಿಗೆ ಬಾಕಿಯನ್ನು ಪಾವತಿಸಿದರೆ ಬೀಗ ತೆರವು ಮಾಡಲಾಗುತ್ತದೆ ಎಂದು ಸಲಾಮುದ್ದೀನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here