ಸಮಾಜ ಸೇವಾ ಸಹಕಾರಿ ಸಂಘ ಸಿದ್ಧಕಟ್ಟೆ ಶಾಖೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ೧೪ನೇ ಸಿದ್ಧಕಟ್ಟೆ ಶಾಖೆಯನ್ನು ಇಲ್ಲಿನ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.

 

ದೇಶದ ಅಸ್ತಿತ್ವ ಸಹಕಾರಿ ತತ್ವದಲ್ಲಿದೆ. ಸಹಕಾರಿಯ ಸ್ಥಾಪಕ ಕೀರ್ತಿಶೇಷ ಡಾ| ಅಮ್ಮೆಂಬಳ ಬಾಳಪ್ಪ, ಹೂವಯ್ಯ ಮೂಲ್ಯ ಜನ ಸಾಮಾನ್ಯರಿಗೂ ಸ್ವಾಭಿಮಾನದ ಬದುಕಿಗೆ ಸಹಕಾರಿಯ ಮೂಲಕ ನಾಂದಿ ಹಾಡಿದ್ದರು.

ಸಿದ್ದಕಟ್ಟೆ ಕಲ್ಕುರಿ ಜುಮ್ಮಾ ಮಸೀದಿ ಧರ್ಮಗುರು ಗೌಸ್ ಮೊಯ್ಯದ್ದಿನ್ ಪೈಝಿ, ಮಾತನಾಡಿ ಸಹಕಾರ ತತ್ವದಲ್ಲಿ ಉದಯಗೊಂಡಿರುವ ಸಹಕಾರಿಯಿಂದ ಎಲ್ಲರಿಗೂ ಒಳಿತಾಗಲಿ ಎಂದು ಶುಭಹಾರೈಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಮಾಜ ರತ್ನ, ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪ ಅವರ ಸಾಮಾಜಿಕ ಚಿಂತನೆಯ ಕಾಳಜಿಯು ನನ್ನ ಮೇಲೆ ಪ್ರಭಾವ ಬೀರಿತ್ತು. ಅವರ ಮತ್ತು ನನ್ನ ರಾಜಕೀಯ ಚಿಂತನೆ ಬೇರೆಯಾದರು, ಸಾಮಾಜಿಕ ಚಿಂತನೆ ಒಂದಾಗಿತ್ತು ಎಂದರು. ಸಿದ್ಧಕಟ್ಟೆಯ ಜನರು ಪ್ರಾಮಾಣಿಕರು. ಇಲ್ಲಿ ಸಕಾಲದಲ್ಲಿ ಸಾಲ ಪಾವತಿಸುವ ಮತ್ತು ಬ್ಯಾಂಕ್‌ಗಳಿಗೆ ಶಕ್ತಿ ನೀಡುವ ಊರಾಗಿದೆ ಎಂದರು.

ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವನೆ ನೀಡಿದರು. ಅಮೂಲ್ಯ ಸ್ವಸಹಾಯ ಸಂಘಗಳ ವಿವರವನ್ನು ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎನ್.ಕೆ. ನೀಡಿದರು.

ವೇದಿಕೆಯಲ್ಲಿ ಸಂಗಬೆಟ್ಟು ವೀರಭದ್ರೇಶ್ವರ ದೇವಸ್ಥಾನದ ಚಂದ್ರಹಾಸ ಗುರಿಕಾರ, ಸಿದ್ದಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್ ಪ್ರಭು, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ , ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ಮೋಹನ್, ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಕಟ್ಟಡದ ಮಾಲಕ ದುರ್ಗಾದಾಸ್, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಆಡಳಿತ ಮಂಡಳಿ ನಿರ್ದೇಶಕರಾದ ವಿಶ್ವನಾಥ ಕೆ.ಬಿ., ಅರುಣ್ ಕುಮಾರ್ ಕೆ., ರಮೇಶ್ ಸಾಲ್ಯಾನ್, ನಾಗೇಶ್ ಬಿ., ಎಂ. ವಾಮನ ಟೈಲರ್, ಸುರೇಶ್ ಎನ್, ಸತೀಶ, ವಿ. ವಿಜಯ ಕುಮಾರ್, ಜಯಂತಿ, ವಿದ್ಯಾ, ಜನಾರ್ಧನ ಬೊಂಡಾಲ, ಜಗನ್ನಿವಾಸ ಗೌಡ, ಎಂ. ಕೆ. ಗಣೇಶ ಸಮಗಾರ, ವಿಜಯಲಕ್ಷ್ಮೀ, ಶಾಖಾ ವ್ಯವಸ್ಥಾಪಕಿ ಶೀಲಾವತಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪದ್ಮನಾಭ ವಿ. ಸ್ವಾಗತಿಸಿದರು. ನಿರ್ದೇಶಕ ಬಿ. ರಮೇಶ್ ಸಾಲ್ಯಾನ್ ವಂದಿಸಿದರು. ಎಚ್ಕೆ. ನಯನಾಡು ಕಾರ್ಯಕ್ರಮ ನಿರ್ವಹಿಸಿದರು. “ನೂತನ ಶಾಖೆ ಉದ್ಘಾಟನೆ ಸಂದರ್ಭ ದಾಖಲೆ ಮೊತ್ತದ ರೂ. ೨.೧೦ ಕೋಟಿ ಠೇವಣಿ ಸಂಗ್ರಹ ಆಗಿತ್ತು”

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.