ಕಾವು: ತುಡರ್ ಯುವಕ ಮಂಡಲದಿಂದ ಕುಟುಂಬ ಮಿಲನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕುಟುಂಬ ಉಳಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ-ಗಜಾನನ ಪೈ

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಯುವ ಸಪ್ತಾಹದ ೩ನೇ ಕಾರ್ಯಕ್ರಮದಂಗವಾಗಿ ಕುಟುಂಬ ಮಿಲನ ಕಾರ್ಯಕ್ರಮವು ಜ.೧೪ರಂದು ಬೆಳಿಗ್ಗೆ ನನ್ಯ ಜನಮಂಗಲ ಸಭಾಭವನದಲ್ಲಿ ನಡೆಯಿತು.


ಕುಟುಂಬ ಮಿಲನದಿಂದ ಆದರ್ಶ ಕುಟುಂಬದ ನಿರ್ಮಾಣ ಸಾಧ್ಯ-ನನ್ಯ
ಕಾರ್ಯಕ್ರಮದಲ್ಲಿ ಆಶಯದ ಭಾಷಣ ಮಾಡಿದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಆಧುನಿಕತೆಯ ಬೆಳವಣಿಗೆಯಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಕಡಿಮೆಯಾಗಿ ಕುಟುಂಬ ವ್ಯವಸ್ಥೆಯಲ್ಲಿ ಜೀವನ ಮೌಲ್ಯ ಶಿಕ್ಷಣದ ಕೊರತೆ ಕಾಣುತ್ತಿದೆ, ಹಾಗಾಗಿ ಸಂಸ್ಕಾರಯುತ ಕುಟುಂಬಕ್ಕಾಗಿ ಜೀವನ ಶಿಕ್ಷಣ ಪಡೆಯಲು ಕುಟುಂಬ ಮಿಲನ ಕಾರ್ಯಕ್ರಮ ಅನುಕೂಲವಾಗಲಿದೆ, ಈ ಕಾರ್ಯಕ್ರಮದಿಂದ ನಮ್ಮ ಹಿಂದೂ ಸಮಾಜದಲ್ಲಿ ಆದರ್ಶ ಕುಟುಂಬ ನಿರ್ಮಾಣದ ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತೆಂಕಿಲ ವಿವೇಕಾನಂದ ಕ.ಮಾ ಶಾಲಾ ಸಂಚಾಲಕ ರಮೇಶ್ಚಂದ್ರ ಮುಂಡಕೊಚ್ಚಿರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕುಟುಂಬ ಉಳಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ-ಗಜಾನನ ಪೈ ಕಾರ್ಯಕ್ರಮದಲ್ಲಿ ಮುಖ್ಯ ಬೌದ್ಧಿಕ್ ನಡೆಸಿಕೊಟ್ಟ ಆರ್‌ಎಸ್‌ಎಸ್‌ನ ಮಂಗಳೂರು ವಿಭಾಗದ ಕುಟುಂಬ ಪ್ರಭೋಧನ್‌ನ ಸಂಯೋಜಕ ಗಜಾನನ ಪೈಯವರು ಮಾತನಾಡಿ ತುಡರ್ ಯುವಕ ಮಂಡಲದವರು ಯುವ ಸಪ್ತಾಹದಲ್ಲಿ ಕುಟುಂಬ ಮಿಲನ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮಾಜಕ್ಕೆ ಶಕ್ತಿ ಕೊಡುವ ಕಾರ್ಯವನ್ನು ಮಾಡಿದ್ದಾರೆ. ಕುಟುಂಬ ಉಳಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯವಿದೆ, ಕುಟುಂಬವನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ಜವಾಬ್ದಾರಿಯೇ ಆಗಿದೆ, ಪ್ರತಿ ಕುಟುಂಬವು ವಾರಕ್ಕೊಮ್ಮೆ ಮನೆಯಲ್ಲಿಯೇ ಗೃಹಮಿಲನ್ ಕಾರ್ಯಕ್ರಮ ನಡೆಸಿ ಕೌಟುಂಬಿಕ ಮೌಲ್ಯವನ್ನು, ಕುಟುಂಬದ ಗೌರವವನ್ನು ಹೆಚ್ಚಿಸಿ ಸಂಸ್ಕಾರಯುತ ಕುಟುಂಬವನ್ನಾಗಿ ಮಾಡುವುದೇ ಕುಟುಂಬ ಮಿಲನ್‌ನ ಉದ್ದೇಶವಾಗಿದೆ ಎಂದು ಹೇಳಿದರು. ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ ಮತ್ತು ಶ್ರೀಮತಿ ಪ್ರಭಾ ಎಸ್ ಬಲ್ಯಾಯರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾವು ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಬಲ್ಯಾಯರವರು ಕಾರ್ಯಕ್ರಮ ಸಂಯೋಜಕರಾಗಿ ಸಹಕರಿಸಿದರು. ಮಧ್ಯಾಹ್ನ ಸಹಭೋಜನ ಕೂಟ ಏರ್ಪಡಿಸಲಾಗಿತ್ತು.

ರಾಷ್ಟ್ರೀಯ ಯುವ ಸಪ್ತಾಹದ 3ನೇ ಕಾರ್ಯಕ್ರಮ

ಇಂದು ಸಪ್ತಾಹದಲ್ಲಿ
ರಾಷ್ಟ್ರೀಯ ಯುವ ಸಪ್ತಾಹದ ನಾಲ್ಕನೇ ದಿನವಾದ ಜ.15ರಂದು ಬೆಳಿಗ್ಗೆ ಗಂಟೆ 10 ಗಂಟೆಗೆ ಮದ್ಲ ನಿನಾದ ನಿವಾಸದಲ್ಲಿ ತುಡರ್ ಮಹಿಳಾ ಮಂಡಲದ ಆಶ್ರಯದಲ್ಲಿ ಸ್ವ ಉದ್ಯೋಗ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.