ಯೋಗ ಶಿಕ್ಷಕ ಪರೀಕ್ಷೆಯಲ್ಲಿ ಡಾ.ದಾಮ್ಲೆ ಉತ್ತೀರ್ಣ

0

 

ಉಚಿತ ಯೋಗ ತರಬೇತಿ ‌ನೀಡಲು ಯೋಜನೆ ರೂಪಿಸಿದ ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷರು

 

ಯೋಗ ಶಿಕ್ಷಕನಾಗಿ ಯೋಗ ಪ್ರಸಾರ ಮಾಡಲು ಅರ್ಹತೆ ನೀಡುವ ಕೇಂದ್ರ ಸರಕಾರದ ಆಯುಶ್ ಮಂತ್ರಾಲಯದ ಯೋಗ ಸರ್ಟಿಫಿಕೇಶನ್ ಬೋರ್ಡ್ ನವರು ಇದೇ ೨೦೨೨ ಅಗೋಸ್ತು ತಿಂಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆಯವರು ತೇರ್ಗಡೆಯಾಗಿದ್ದಾರೆ.
ಈ ಪರೀಕ್ಷೆಯ ಪಾಸ್ ಮಾರ್ಕ್ ೭೦%. ಈಗ ಡಾ.ದಾಮ್ಲೆಯವರು ೭೧ ನೇ ವಯಸ್ಸಿನಲ್ಲಿ ಅವರು ೭೧% ಗಳಿಸಿದ್ದಾರೆ.

ಈ ಕುರಿತು ಸಂತೋಷ ಹಂಚಿಕೊಂಡಿರುವ ಡಾ.ಚಂದ್ರಶೇಖರ ದಾಮ್ಲೆಯವರು “ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಈಗಾಗಲೇ ಯೋಗ ತರಬೇತಿ ಆರಂಭಿಸಿದ್ದು ಮುಂದೆ ಸಾರ್ವಜನಿಕರಿಗೂ ನಮ್ಮ ಸೂರ್ಯಾಲಯದಲ್ಲಿ ಉಚಿತವಾಗಿ ತರಗತಿಗಳನ್ನು ನಡೆಸುವ ಯೋಜನೆ ಇದೆ. “ಆರೋಗ್ಯಕ್ಕಾಗಿ ಯೋಗ” ಎಂಬ ಧ್ಯೇಯದಡಿಯಲ್ಲಿ ಹಿರಿಯ ವಯಸ್ಸಿನವರಿಗೆ ಪ್ರತ್ಯೇಕ ಅವಧಿಗಳಲ್ಲಿ ತರಬೇತಿ ನೀಡುವ ಉದ್ದೇಶವಿದೆ. ಯೋಗವು ಜನರಲ್ಲಿ ನಿತ್ಯಾಭ್ಯಾಸವಾಗಿ ಹಬ್ಬಬೇಕೆಂಬುದು ನನ್ನ ಬಯಕೆಯಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here