ಪಾಣಾಜೆ; ಒಡ್ಯ ಪ್ರಾಥಮಿಕ ಶಾಲೆಗೆ ಶಾಸಕ ಮಠಂದೂರು ಭೇಟಿ –  ಕಾಮಗಾರಿಗಳ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ;  ಪುತ್ತೂರು  ಶಾಸಕ ಸಂಜೀವ ಮಠಂದೂರು ಜ.13 ರಂದು ಒಡ್ಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ನಡೆಯುವ ಶಾಲಾಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಗಡಿನಾಡ ಗ್ರಾಮೀಣ ಶಾಲೆಯ ಕುರಿತು ಸಂಪೂರ್ಣ ವಿವರ ಪಡೆದುಕೊಂಡು, ಮಕ್ಕಳ ಹಾಜರಾತಿ ಹೆಚ್ಚಿಸಲು ಹೆಚ್ಚಿನ ಶ್ರಮ ವಹಿಸುವಂತೆ ಶಿಕ್ಷಕರಿಗೂ ಮತ್ತು ಶಾಲಾಭಿವೃದ್ಧಿ ಸಮಿತಿಯವರಿಗೂ ಸಲಹೆ ನೀಡಿದರು, ಶಾಸಕನಾಗಿ  ಗಡಿನಾಡ ಗ್ರಾಮೀಣ ಶಾಲೆಯ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗಾಗಿ,ಒಂದು ಸ್ಮಾರ್ಟ್ ಕ್ಲಾಸ್  ರಚನೆಗೆ ಸರಕಾರದಿಂದ 3.50ಲಕ್ಷ ರೂಗಳನ್ನು ಮುಂದಿನ ದಿನಗಳಲ್ಲಿ ಒದಗಿಸುವ ಬಗ್ಗೆ ಭರವಸೆ ನೀಡಿದರು, ಮ ಬಡ ಗ್ರಾಮೀಣ ಮಕ್ಕಳನ್ನೂ  ಮಾತನಾಡಿಸಿ ಒಮಿಕ್ರಾನ್,ಕೊರೋನಾ ದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಯಾವುದೇ ಧೈರ್ಯಗೆಡದೇ  ಜಾಗರೂಕತೆಯಿಂದ  ಇರಬೇಕು ಮತ್ತು ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನೀವೆಲ್ಲರೂ ಚೆನ್ನಾಗಿ ಕಲಿತು ಈ ಶಾಲೆಗೂ ಕೀರ್ತಿ ತಂದು ಉತ್ತಮ ಪ್ರಜೆಗಳಾಗಬೇಕು ,ನಿಮ್ಮನ್ನು ನೋಡಲು ತಾನು ಖಂಡಿತಾ ಆಗಾಗ ಶಾಲೆಗೆ ಭೇಟಿ ನೀಡಿ,ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು. ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ  ಶ್ರೀಕೃಷ್ಣ ಭಟ್ ಬಟ್ಯಮೂಲೆ ಮತ್ತು ಶಾಲಾ ಮುಖ್ಯ ಗುರು ಉಸ್ಮಾನ್,ದಿವ್ಯಾ,ಊರವರಾದ ಶಂಕರ ರೈ ಬಾಳೆಮೂಲೆ,ಯಶೋದಾ ಮಾಯಿಲಕಾನ, ಪೋಷಕರಾದ ಸುಮಿತ್ರಾ, ಈಶ್ವರನಾಯ್ಕ,ಮತ್ತಿತರರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.