ಜ.14ರ ರಾತ್ರಿಯಿಂದ ಮತ್ತೆ ವೀಕೆಂಡ್ ಕರ್ಫ್ಯೂ – ಪುತ್ತೂರು ಪೇಟೆಯಲ್ಲಿ ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದೆಲ್ಲ ವ್ಯವಹಾರ ಸ್ಥಗಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜ.14 ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಪುತ್ತೂರು ಪೇಟೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿಗಳ ವ್ಯವಹಾರ ಸ್ಥಗಿತಗೊಂಡಿತ್ತು.


ಪುತ್ತೂರಿನಲ್ಲಿ ಸರಕಾರಿ ಬಸ್‌ಗಳು ಅಗತ್ಯಕ್ಕೆ ತಕ್ಕಂತೆ ಓಡಾಟ ನಡೆಸುತ್ತಿದ್ದರೂ ಖಾಸಗಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಆಟೋ ರಿಕ್ಷಾಗಳು ಮಾತ್ರ ಎಂದಿನಂತೆ ಸಂಚಾರ ನಡೆಸುತ್ತಿದ್ದವು. ಒಟ್ಟಿನಲ್ಲಿ ಕಳೆದ ವಾರದ ವೀಕೆಂಡ್ ಕರ್ಫ್ಯೂಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆ ಪೇಟೆಯಲ್ಲಿ ಸ್ವಲ್ಪ ಅಧಿಕವಾಗಿತ್ತು. ಅದೇ ರೀತಿ ಜನ ಸಂಚಾರ ಯಥಾಸ್ಥಿತಿಯಲ್ಲಿತ್ತು. ಪೇಟೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಜೊತೆಗೆ ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು. ವಿವಿಧ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.