ಪಂಚಾಯತ್ ರಸ್ತೆಗಳ ಅಭಿವೃದ್ಧಿ, ನಾಮಫಲಕ ಅಳವಡಿಕೆಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಪಂಚಾಯತ್ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ರಸ್ತೆಗಳಿಗೆ ನಾಮಫಲಕ ಅಳವಡಿಸುವ ಬಗ್ಗೆ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯತ್ ರಸ್ತೆಗಳು 6ಮೀಟರ್ ಅಗಲ ಇರಬೇಕಾಗಿದ್ದು ಈ ಬಗ್ಗೆ ಗ್ರಾಮಕರಣಿಕರು ಮತ್ತು ಸರ್ವೇಯರ್‌ಯರನ್ನು ಕರೆದುಕೊಂಡು ಹೋಗಿ ಕಾನೂನು ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ನಿರ್ಣಯ ಮಾಡಲಾಯಿತು.

ಸಭೆಯು ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಾರ್ವಜನಿಕ ಅರ್ಜಿಯೊಂದರ ಹಿನ್ನೆಲೆಯಲ್ಲಿ ಮಹೇಶ್ ರೈ ಕೇರಿ ವಿಷಯ ಪ್ರಸ್ತಾಪಿಸಿ ಹಲವು ಕಡೆಗಳಲ್ಲಿ ಪಂಚಾಯತ್ ರಸ್ತೆಗಳು ನಾದುರಸ್ತಿಯಲ್ಲಿವೆ ಅಲ್ಲದೆ ಕೆಲವು ಕಡೆಗಳಲ್ಲಿ ರಸ್ತೆ ಒತ್ತುವರಿ ಕೂಡ ನಡೆಯುತ್ತಿದೆ ಎಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆಸಲಾಯಿತು. ಪಂಚಾಯತ್ ರಸ್ತೆಗಳು ೬ ಮೀಟರ್ ಅಗಲ ಇರಬೇಕಾಗಿದ್ದು ಎಲ್ಲಿ ೬ ಮೀಟರ್ ಅಗಲ ಇಲ್ಲವೋ ಆಯಾ ಕಡೆಗಳಲ್ಲಿ ಅಳತೆ ಮಾಡಿಸುವುದು ಅಲ್ಲದೆ ಪಂಚಾಯತ್ ರಸ್ತೆಯ ಬದಿಗಳಲ್ಲಿ ಮನೆ ಮತ್ತು ಮನೆಯ ಕೌಂಪೌಂಡ್ ಕಟ್ಟುವಾಗ ೬ ಮೀಟರ್ ರಸ್ತೆ ಬಿಟ್ಟೇ ಕಟ್ಟಬೇಕು ಎಂದು ನಿರ್ಣಯಿಸಲಾಯಿತು. ಅಕ್ರಮ ಸಕ್ರಮದಲ್ಲಿ ಕೃಷಿಜಮೀನು ಮಂಜೂರು ಮಾಡುವಾಗ ಗ್ರಾಪಂ ರಸ್ತೆ ೬ ಮೀಟರ್ ಅಗಲ ಬಿಟ್ಟೇ ಮಂಜೂರು ಮಾಡಬೇಕು ಎಂದು ಮೇಲಾಧಿಕಾರಿಗಳಿಗೆ ಕೇಳಿಕೊಳ್ಳುವುದು ಎಂದು ನಿರ್ಣಯಿಸಲಾಯಿತು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾನೂನು ಕ್ರಮಗಳನ್ನು ಅನುಸರಿಸಿಕೊಂಡೇ ರಸ್ತೆ ಅಭಿವೃದ್ಧಿ ಪಡಿಸುವುದು ಮತ್ತು ಪಂಚಾಯತ್ ರಸ್ತೆಗಳಿಗೆ ನಾಮಫಲಕ ಅಳವಡಿಸುವುದು ಎಂದು ನಿರ್ಣಯಿಸಲಾಯಿತು. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರುಗಳು ಸಹಮತ ಸೂಚಿಸಿದರು.

ಅನಧಿಕೃತ ಕಟ್ಟಡ/ಒತ್ತುವರಿ ತೆರವಿಗೆ ಮನವಿ
ರಸ್ತೆಗೆ ತೊಂದರೆಯಾಗುವಂತಹ ಅನಧಿಕೃತ ಕಟ್ಟಡ ಮತ್ತು ಇತರ ಒತ್ತುವರಿಯನ್ನು ತೆರವು ಮಾಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಬರೆದುಕೊಳ್ಳುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಪೊಲೀಸ್/ಗ್ರಾಮಕರಣಿಕರಿಗೆ ಅಭಿನಂದನೆ
ಗ್ರಾಪಂ ೧೫ ನೇ ಹಣಕಾಸು ಯೋಜನೆಯಡಿ ಕೈಕಾರ ಕೆದುವಡ್ಕದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವಾಗ ಸ್ಥಳೀಯರು ಕೆಲಸಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು. ಈ ವೇಳೆ ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಗ್ರಾಮಕರಣಿಕರಿಗೆ ಮಾಹಿತಿ ನೀಡಿದಾಗ ತಕ್ಷಣವೇ ಸ್ಥಳಕ್ಕೆ ಬಂದು ರಕ್ಷಣೆ ಒದಗಿಸಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮತ್ತು ಗ್ರಾಮಕರಣಿಕರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಅಭಿವೃದ್ಧಿ ಅಧಿಕಾರಿ ಅವಿನಾಶ್‌ರವರು ವಿಷಯ ಪ್ರಸ್ತಾಪಿಸಿದರು.

ಅವಧಿ ಮುಗಿದ ಅಂಗಡಿ ಕೋಣೆಗಳ ಏಲಂ
ಈಗಾಗಲೇ ಅವಧಿ ಮುಗಿಯುತ್ತಾ ಬಂದಿರುವ ಗ್ರಾಪಂ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಬಗ್ಗೆ ಶೀಘ್ರದಲ್ಲಿ ಸ್ಥಾಯಿ ಸಮಿತಿ ಸಭೆ ಕರೆದು ಚರ್ಚಿಸುವುದು ಎಂದು ನಿರ್ಣಯಿಸಲಾಯಿತು.

ರಿಯಾಯಿತಿ ದರದಲ್ಲಿ ಮರಳು ಒದಗಿಸಿ
ಗ್ರಾಪಂ ವಸತಿ ಯೋಜನೆಯಡಿ ಈಗಾಗಲೇ ಮನೆ ಕಟ್ಟುತ್ತಿರುವು ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಮರಳು ಒದಗಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಬರೆದುಕೊಳ್ಳುವ ಎಂದು ಬಿ.ಸಿ ಚಿತ್ರಾ ತಿಳಿಸಿದರು. ಮರಳಿಗೆ ದಿನದಿಂದ ದಿನಕ್ಕೆ ದರ ಏರಿಕೆಯಾಗುತ್ತಿದ್ದು ಇದರಿಂದ ಮನೆ ಕಟ್ಟಲು ತೊಂದರೆಯಾಗುತ್ತಿದೆ. ಗ್ರಾಪಂ ವಸತಿ ಯೋಜನೆಯಡಿ ಮನೆ ಕಟ್ಟುತ್ತಿರುವ ಫಲಾನುಭವಿಗಳಿಗೆ ಸರಕಾರದ ವತಿಯಿಂದ ಕಡಿಮೆ ದರದಲ್ಲಿ ಮರಳು ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ಕೇರಿ, ಲತೀಫ್, ಅಶ್ರಫ್, ಬಿ.ಸಿ ಚಿತ್ರಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಅಶ್ರಫ್, ಮಹೇಶ್ ರೈ ಕೇರಿ, ಲತೀಫ್ ಕುಂಬ್ರ, ಪ್ರದೀಪ್, ಬಿ.ಸಿ ಚಿತ್ರಾ, ಶಾರದಾ, ನಿಮಿತಾ, ನಳಿನಾಕ್ಷಿ, ರೇಖಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಸರಕಾರದ ಸುತ್ತೋಲೆ ಮತ್ತು ಸಾರ್ವಜನಿಕ ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ಬರೆದುಕೊಂಡರು. ಸಿಬ್ಬಂದಿ ಜಾನಕಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಗುಲಾಬಿ, ಕೇಶವ ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.