ಪುತ್ತೂರು: ಕೆದಂಬಾಡಿ ಗ್ರಾಮದ ಕೆದಂಬಾಡಿ ಗ್ರಾಮದೈವ ಶ್ರೀ ಶೀರಾಡಿ ದೈವಸ್ಥಾನ ಇದುಪ್ಪಾಡಿ ಮಂಜಕೊಟ್ಯ ಮುಂಡಾಳಗುತ್ತು ಇಲ್ಲಿ ಪೂರ್ವಶಿಷ್ಠ ಸಂಪ್ರದಾಯದಂತೆ ವಾರ್ಷಿಕ ನೇಮೋತ್ಸವವು ಜ.16 ಮತ್ತು 17 ರಂದು ಜರಗಲಿದೆ. ಜ.16 ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ನಾಗತಂಬಿಲ ಬಳಿಕ ದೈವಗಳ ತಂಬಿಲ ನಡೆದು ಪುಳಿಮರಡ್ಕ ಸ್ಥಾನದಲ್ಲಿ ತಂಬಿಲ ಸೇವೆ ನಡೆಯಲಿದೆ.
ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪನೆ ನಡೆಯಲಿದೆ. ಸಂಜೆ ಕೆದಂಬಾಡಿಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಕೆಂಚಿರಾಯ ಸೇವೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಜ.17 ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮ ಬಳಿಕ ಕೆದಂಬಾಡಿ ಗ್ರಾಮದೈವ ಶ್ರೀ ಶೀರಾಡಿ ದೈವದ ನೇಮೋತ್ಸವ ನಡಾವಳಿ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸರಕಾರದ ಕೋವಿಡ್ 19 ನಿಯಮದಂತೆ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾಧಿಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಂಡಾಳಗುತ್ತು ಯಜಮಾನ, ನಿವೃತ್ತ ಡಿವೈಎಸ್ಪಿ ಮುಂಡಾಳಗುತ್ತು ಶಾಂತರಾಮ ರೈ, ಹದಿನೆಂಟು ವರ್ಗ ಮತ್ತು ಊರ ಸಮಸ್ತರ ಪ್ರಕಟಣೆ ತಿಳಿಸಿದೆ.