ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ವಿದುಷಿ ನಯನಾ ವಿ.ರೈಯವರಿಗೆ ಕರ್ನಾಟಕ `ಕಲಾಶ್ರೀ ಪ್ರಶಸ್ತಿ’ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿನ ಸಾಧಕರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020-21 ಮತ್ತು 2021-22ನೇ ಸಾಲಿನ `ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಜ.14 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು, ಪುತ್ತೂರಿನ ವಿದುಷಿ ನಯನಾ ವಿ.ರೈಯವರು ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಸಾಧಕರ ಪೈಕಿ
ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಪುತ್ತೂರು, ಪದಡ್ಕ ತುಳುನಾಡು ಇದರ ಸ್ಥಾಪಕರಾದ ಕರ್ನಾಟಕ ಕಲಾಶ್ರೀ ವಿಜೇತ ದಿ.ಕುದ್ಕಾಡಿ ವಿಶ್ವನಾಥ ರೈಯವರ ಪತ್ನಿ ವಿದುಷಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ನಯನಾ ವಿ.ರೈಯವರು ನೃತ್ಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮರವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸಂಗೀತ, ಹಿಂದೂಸ್ಥಾನಿ, ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ ೧೬ ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ರೂ.೫೦ ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿಯು ರೂ.೨೫ ಸಾವಿರ ನಗದು ಬಹುಮಾನ ಹೊಂದಿದೆ. ಸಮಾರಂಭದಲ್ಲಿನ ಅನೇಕ ಗಣ್ಯರ ಸಮೂಹ ಹಿರಿಯ ಗಾಯಕ ಗರ್ತಿಕೆರೆ ರಾಘವೇಂದ್ರರವರು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿರುತ್ತಾರೆ.

ಕಳೆದ ವರ್ಷ ಕರ್ನಾಟಕ ರಾಜ್ಯ ಕೊಡಲ್ಪಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಯನಾ ವಿ.ರೈಯವರು ಭಾಜನರಾಗಿದ್ದಾರೆ. ೬೪ ವರ್ಷಗಳ ಹಿಂದೆ ಪದಡ್ಕ-ಕುದ್ಕಾಡಿ, ಸುಳ್ಯಪದವು ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿಯನ್ನು ಹೊಂದಿರುವ ಕುದ್ಕಾಡಿ ವಿಶ್ವನಾಥ ರೈರವರು ಎರಡು ವರ್ಷದ ಹಿಂದೆ ನಿಧನರಾಗಿದ್ದು, ಅವರ ಸ್ಮರಣಾರ್ಥವಾಗಿ ದ.ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಳೆದ ೬೪ ವರ್ಷಗಳಿಂದ `ನೃತ್ಯ ಸಂಭ್ರಮ’ವನ್ನು ನಯನಾ ವಿ.ರೈಯವರು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ನೃತ್ಯಗುರು ವಿದುಷಿ ನಯನಾ ವಿ.ರೈರವರ ನೃತ್ಯ ಕಲಾರಂಗದಲ್ಲಿನ ಸಾಧನೆಯನ್ನು ಗುರುತಿಸಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭರತಮುನಿ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ನಯನಾ ರೈಯವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಗಿತ್ತು.

ವಿದುಷಿ ನಯನಾ ವಿ.ರೈಯವರು ಪ್ರಸ್ತುತ ಪದಡ್ಕ-ಕುದ್ಕಾಡಿ ಎಂಬಲ್ಲಿ ವಾಸವಾಗಿದ್ದು, ಪುತ್ರಿಯರಾದ ಸ್ವಸ್ತಿಕಾ ಆರ್.ಶೆಟ್ಟಿ, ಆಸ್ತಿಕಾ ಎಸ್.ಶೆಟ್ಟಿ, ಅಳಿಯಂದಿರಾದ ರಾಜ್‌ಕುಮಾರ್ ಶೆಟ್ಟಿ, ಸುನೀಲ್ ಶೆಟ್ಟಿ, ಮೊಮ್ಮಕ್ಕಳಾದ ವಿದುಷಿ ಡಾ.ಅಕ್ಷಿ ಶೆಟ್ಟಿ, ಸಾಕ್ಷರ್ ಶೆಟ್ಟಿ, ಆಂಗಿಕಾ ಶೆಟ್ಟಿರವರನ್ನು ಹೊಂದಿರುತ್ತಾರೆ.

ಅನೇಕ ಪ್ರಶಸ್ತಿಗಳ ಸರಮಾಲೆ…
ನಯನಾ ವಿ.ರೈಯವರಿಗೆ ಮೈಸೂರು ಭಾರತೀಯ ನೃತ್ಯಕಲಾ ಪರಿಷತ್‌ನಿಂದ ನರ್ತನಾ ಚತುರೆ ಪ್ರಶಸ್ತಿ, ಕಲಾಶ್ರಯ ಪ್ರಶಸ್ತಿ, ಸುಮ ಸೌರಭ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಗಡಿನಾಡ ಕನ್ನಡಿಗ ಪ್ರಶಸ್ತಿ, ಮೈಸೂರು ದಸರಾ ನಾಡಹಬ್ಬ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕ್ಥತಿ ಇಲಾಖೆಯಿಂದ ಗೌರವ, ತುಳು ಅಕಾಡೆಮಿಯ ಗೌರವ, ಕನ್ನಡ ಮತ್ತು ಸಂಸ್ಕ್ಯತಿ ಇಲಾಖೆಯಿಂದ ತಾಲೂಕು ಸಾಹಿತ್ಯ ಪ್ರಶಸ್ತಿ, ಕಲಾ ವೈಭವ ಪ್ರಶಸ್ತಿ, ಭರತ ಪ್ರಶಸ್ತಿ, ನರ್ತನ ಜಗತ್ತಿನ ಭಲೇ ಜೋಡಿ ಪ್ರಶಸ್ತಿ, ಕಲಾ ವಿಶಾರದಾ ಪ್ರಶಸ್ತಿ, ಬೆಂಗಳೂರು ಭಾರತೀಯ ನೃತ್ಯ ಕಲಾ ಪರಿಷತ್‌ನಿಂದ ಕಲಾ ಪೋಷಕ ಪ್ರಶಸ್ತಿ ಅಲ್ಲದೆ ಕುವೈಟ್, ಬಹರೈನ್‌ನಲ್ಲಿಯೂ ಗೌರವ ಸಮ್ಮಾನಕ್ಕೆ ನಯನಾ ವಿ.ರೈಯವರು ಭಾಜನರಾಗಿದ್ದಾರೆ. ಜೊತೆಗೆ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯಗುರು ನಯನಾ ವಿ.ರೈರವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸನ್ಮಾನ, ಅಭಿನಂದನೆಯನ್ನು ಮಾಡಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.