ಪೆರಾಜೆ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಗಾಂಧಿ ಪ್ರಸಾದ್ ಬಂಗಾರಕೋಡಿಯವರಿಗೆ ಶ್ರದ್ಧಾಂಜಲಿ

0

ಪೆರಾಜೆ ಪ್ರಾ.ಕೃ.ಪ ಸಹಕಾರ ಸಂಘದ ನಿರ್ದೇಶಕರೂ ಹಾಗೂ ಪೆರಾಜೆ ಗ್ರಾಮ ಪಂಚಾಯ್ತಿ ಸದಸ್ಯರೂ ಆಗಿದ್ದ ಗಾಂಧಿಪ್ರಸಾದ್ ಬಂಗಾರಕೋಡಿಯವರ ನಿಧನಕ್ಕೆ ಸಂಸ್ಥೆಯ ವತಿಯಿಂದ ಶೃದ್ದಾಂಜಲಿ ಸಭೆ ನಡೆಸಲಾಯಿತು. ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿಯವರು ಮಾತನಾಡಿ, ಗಾಂಧಿ ಪ್ರಸಾದ್ ಅಪಾರ ಸ್ನೇಹಿತರನ್ನು ಹೊಂದಿ ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಸಂಸ್ಥೆಯ ನಿರ್ಧೇಶಕರಾಗಿದ್ದು ಸಂಘದ ಅಭಿವೃದ್ದಿಯ ಯೋಜನೆಗಳಿಗೆ ನಮ್ಮೊಂದಿಗೆ ಸಹಕಾರ ನೀಡುತಿದ್ದರು. ಇಂತಹ ವ್ಯಕ್ತಿ ಇಂದು ನಮ್ಮೊಂದಿಗಲ್ಲ. ‘ಇವರ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ. ಅವರ ತಂದೆ ತಾಯಿ ಪತ್ನಿ ಮಕ್ಕಳಿಗೆ ದುಃಖ ತಡೆಯುವ ಶಕ್ತಿ ಭಗವಂತ ಕರುಣೆಸಲಿ ಸಂಸಾರ ಮುನ್ನಡೆಸುವ ಶಕ್ತಿ ಅವರ ಪತ್ನಿಗೆ ಲಭಿಸಲಿ ಎಂದು ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪೆರುಮುಂಡ ರವರು ಹಾಗೂ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೆಚ್ ಕೆ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here