ಗಾಂಧೀಜಿಯವರ ಕುರಿತ ಎಲ್ಲ ರೂಪದ ಪ್ರಶ್ನೆಗಳಿಗೆ ಗಾಂಧಿ ವಿಚಾರ ವೇದಿಕೆಯಿಂದ ಆಹ್ವಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾತ್ಮಾ ಗಾಂಧಿಯವರ ಮೇಲಿನ ಹಲವು ಸಂದೇಹಗಳು, ತಾತ್ವಿಕ ವಿರೋಧಗಳು, ಚಾರಿತ್ರ್ಯ ಹನನದ ಸುಳ್ಳುಗಳು ಇರುವ ಸಮಾಜದಲ್ಲಿ ಗಾಂಧೀಜಿಯವರ ಕುರಿತ ಸಂದೇಹಗಳಿಗೆ ಸಮರ್ಪಕ ವಿವರಣೆಯನ್ನೊಳಗೊಂಡ ಕೃತಿಯನ್ನು ಪ್ರಕಟಿಸಲು ಗಾಂಧಿ ವಿಚಾರ ವೇದಿಕೆಯು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಗಾಂಧೀಜಿಯವರ ಕುರಿತ ಎಲ್ಲ ರೂಪದ ಪ್ರಶ್ನೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.

ಸಾರ್ವಜನಿಕರಿಂದ ಬಂದ ಪ್ರಶ್ನೆಗಳಿಗೆ ರಾಜ್ಯದ ಇತಿಹಾಸ ತಜ್ಞರು, ರಾಜಕೀಯ ಶಾಸ್ತ್ರಜ್ಞರು, ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಅವರಿಂದ ಉತ್ತರವನ್ನು ಪಡೆದು ಪ್ರಕಟಿಸಲಾಗುತ್ತದೆ. ಅಧಿಕೃತ ದಾಖಲೆಗಳ ಆಧಾರದಲ್ಲೆ ಬರಲಿರುವ ವಿವರಣೆಯ ಈ ಕೃತಿಯು ಇಂಗ್ಲಿಷ್ ಗೂ ಅನುವಾದಗೊಳ್ಳಲು ಅರ್ಹವಾಗುವಂತಿದ್ದು ಗಾಂಧೀಜಿಯವರ ಮೇಲಿನ ಪ್ರಶ್ನೆಗಳಿಗೆ ಉತ್ತರಗಳ ಅಧಿಕೃತ ದಾಖಲೆಯಾಗಬೇಕೆಂಬ ಉದ್ದೇಶದಿಂದ ಈ ಮಹತ್ಕಾರ್ಯದ ನಿರ್ವಹಣೆಗಾಗಿ ಸಂಪಾದಕ ಮಂಡಳಿಯನ್ನು ರಚಿಸಲಾಗಿದೆ. ಸಾರ್ವಜನಿಕರು ಪ್ರಶ್ನೆಗಳನ್ನು [email protected] ಗೆ ಕಳುಹಿಸಬಹುದು. ಜ.30ಕೊನೆಯ ದಿನಾಂಕವಾಗಿದ್ದು, ಲೇಖನಗಳ ರೂಪದಲ್ಲಿರುವ ಪ್ರಶ್ನೇ ಸ್ವೀಕರಿಸುವುದಿಲ್ಲ, ಒಬ್ಬರು ಎಷ್ಟು ಪ್ರಶ್ನೆ ಬೇಕಾದರೂ ಕಳಿಸಬಹುದು. ಪ್ರಶ್ನೆ ಕಳುಹಿಸುವವರು ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಬೇಕು ಎಂದು ಗಾಂಧಿ ವಿಚಾರ ವೇದಿಕೆ ಮಂಗಳೂರು ಘಟಕದ ಕಾರ್ಯಕಾರಿ ಸಮಿತಿ ಪ್ರಧಾನ ಸಂಪಾದಕ ಎಮ್. ಜಿ. ಹೆಗಡೆ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.