ವಿಟ್ಲ: ಕಂಬಳಬೆಟ್ಟು ಸರಕಾರಿ ಶಾಲೆಗೆ ಅದೇ ಶಾಲೆಯ ಹಳೆ ವಿದ್ಯಾರ್ಥಿ ಅಬ್ದುಲ್ ಬಶೀರ್ ರವರು ಆರು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಂಬಳಬೆಟ್ಟು ನಿವಾಸಿ ಪ್ರಸ್ತುತ ಹಾಸನದ ಜನಪ್ರಿಯ ಆಸ್ಪತ್ರೆಯ ವೈದ್ಯರಾಗಿರುವ ಅಬ್ದುಲ್ ಬಶೀರ್ ರವರು ಕಂಬಳಬೆಟ್ಟು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ವೈದ್ಯಕೀಯ ಲೋಕದ ಇವರ ನಿಸ್ವಾರ್ಥ ಸೇವೆಗಾಗಿ
ಹಾಸನ ಜಿಲ್ಲಾ ಸ್ವಾತಂತ್ರೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಹಾಗೂ ವೈದ್ಯಶ್ರೇಷ್ಠ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಅಬ್ದುಲ್ ಬಶೀರ್ ರವರು ಕಂಬಳಬೆಟ್ಟು ಸರಕಾರಿ ಶಾಲೆಗೆ ಭೇಟಿ ನೀಡಿ, ಶಾಲೆಯ ಪರಿಸ್ಥಿತಿ ಗಮನಿಸಿ ವಿದ್ಯೆ ನೀಡಿದ ವಿದ್ಯಾಲಯಕ್ಕೆ ಆರು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರ ಸಹೋದರರಾದ ವಿ.ಕೆ ಅಬ್ದುಲ್ ಖಾದರ್, ಶಾಲಾ ಮುಖ್ಯ ಶಿಕ್ಷಕಿ ವಾರಿಜ ಟೀಚರ್ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದಿಕ್ ಕಂಬಳಬೆಟ್ಟು ಉಪಸ್ಥಿತರಿದ್ದರು.