ಕೋಡಿಂಬಾಳ: ನಾಪತ್ತೆಯಾಗಿದ್ದ ಯುವತಿ ಮದುವೆಯಾಗಿ ಪತ್ತೆ ಜೋಡಿಯನ್ನು ಕರೆತಂದ ಪೊಲೀಸರು

0

ಕಡಬ: ಕೋಡಿಂಬಾಳ ಗ್ರಾಮದ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯಾ(22) ಬುಧವಾರ ನಾಪತ್ತೆಯಾಗಿದ್ದು ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾರೆ.

ಮಗಳು ನಾಪತ್ತೆಯಾಗಿದ್ದ ಕುರಿತು ಆಕೆಯ ತಂದೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಡಬ ಠಾಣಾಎಸ್.ಐ ರುಕ್ಮ ನಾಯ್ಕ್ ಅವರ ನಿರ್ದೇಶನದಂತೆ ಪಿಸಿಗಳಾದ ಶಿವಪ್ರಸಾದ್ ಮತ್ತು ಶ್ರೀಶೈಲ ಎಂಬವರು ಹುಡುಕಾಟ ಕಾರ್ಯಾಚರಣೆ ನಡೆಸಿ, ಧರ್ಮಸ್ಥಳದಲ್ಲಿ ಯುವತಿ ಮತ್ತು ಆಕೆಯ ಪ್ರಿಯಕರ ರುಕ್ಮಯ್ಯ ಮುಗೇರ ಎಂಬವರು ಜೊತೆಯಾಗಿ ಇದ್ದುದನ್ನು ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದಾರೆ.

LEAVE A REPLY

Please enter your comment!
Please enter your name here