ಗುತ್ತಿಗಾರು : ಶಾಲಾ ಪೋಷಕರ ಸಭೆ

0

ಸ.ಮಾ.ಹಿ.ಪ್ರಾ.ಶಾಲೆ ಗುತ್ತಿಗಾರು ಇಲ್ಲಿ ಶಾಲಾ ಮಕ್ಕಳ ಪೋಷಕರ ಸಭೆಯು ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ವಹಿಸಿದ್ದರು. ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ, ಸದಸ್ಯರಾದ ಜಗದೀಶ ಬಾಕಿಲ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ ಉಪಸ್ಥಿತರಿದ್ದರು.

 


ಸಭೆಯಲ್ಲಿ ಮುಖ್ಯಶಿಕ್ಷಕಿ ಉಮಾವತಿಯವರು ಈ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಅದಕ್ಕೆ ಪೂರಕವಾಗಿ ಮಕ್ಕಳಲ್ಲಿ ಕಲಿಕಾ ಚೇತರಿಕೆಯಂತಹ ಕಾಯಕ್ರಮಗಳು ನಡೆಯುತ್ತಿದೆ. ಪೋಷಕರು ಮಕ್ಕಳಿಗೆ ತಮ್ಮ ಮನೆಗಳಲ್ಲಿ ಓದು ಹಾಗೂ ಬರವಣಿಗೆಯ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು. ವೆಂಕಟ್ ದಂಬೆಕೋಡಿ ಮಾತನಾಡಿ, ಶಾಲಾಭಿವೃದ್ಧಿಗಾಗಿ ಶೌಚಾಲಯ, ಹೊಸ ಕಟ್ಟಡಕ್ಕೆ ಸರಕಾರದಿಂದ ಅನುದಾನ ಬಿಡಗಡೆಗೊಂಡ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮಕ್ಕಳ ಪೋಷಕರು ಶೈಕ್ಷಣಿಕ ಪ್ರಗತಿಯ ಬಗ್ಗೆ ಸಲಹೆ ಸೂಚನೆ ನೀಡಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಲೋಕೇಶ್‌ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. (ವರದಿ : ಡಿ.ಎಚ್.)

LEAVE A REPLY

Please enter your comment!
Please enter your name here