ಎರಡು ತಾಲೂಕಿಗೆ ಸಂಪರ್ಕ ಸಾಧಿಸಬಲ್ಲ ಬಿಳಿಯೂರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾರ್ಯ ಪ್ರಗತಿಯಲ್ಲಿ ಶಾಸಕ ಸಂಜೀವ ಮಠಂದೂರುರವರಿಂದ ಸ್ಥಳ ಪರಿಶೀಲನೆ

0

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲ್ಲೂಕು ಬಿಳಿಯೂರು ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ರೂ.46.70 ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಜ.15 ರಂದು ಶಾಸಕ ಸಂಜೀವ ಮಠಂದೂರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ,ಮಾಜಿ ತಾ.ಪಂ ಸದಸ್ಯ ಮಂಜುನಾಥ ಸಾಲ್ಯಾನ್,ತೆಕ್ಕಾರು ಶಕ್ತಿ ಕೇಂದ್ರ ಅಧ್ಯಕ್ಷ ನವೀನ್ ಕುಮಾರ್ ರೈ,ಪೆರ್ನೆ ಬಿಳಿಯೂರು ಶಕ್ತಿ ಕೇಂದ್ರದ ಅಧ್ಯಕ್ಷ ಕಿರಣ್ ಶೆಟ್ಟಿ ಪೆರ್ನೆ ಪಂಚಾಯತ್ ಸದಸ್ಯ ನವೀನ್ ಪದಬರಿ,ಮುತ್ತಪ್ಪ ಸಾಲ್ಯಾನ್,ಕೇಶವ ಸುನ್ನಾನ, ಪ್ರಕಾಶ್ ನಾಯಕ್,ಜಯಂತಿ,ಸುಮತಿ ಮಹೇಶ್ ಪಡಿವಾಳ್,ಗೋಪಾಲ್ ಸಪಲ್ಯ,ಶಿವಪ್ಪ ನಾಯ್ಕ,ಪ್ರಕಾಶ್ ಮುಂಡನಕೋಡಿ,ಜೀವನ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here