ನಿಡ್ಪಳ್ಳಿ; ಜ. 22 ರಿಂದ 28 ರವರೆಗೆ ನಡೆಯುವ ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ಆರ್ಲಪದವು ಕಿನ್ನಿಮಾಣಿ-ಪೂಮಾಣಿ ಹಾಗೂ ಪಿಲಿಭೂತ ದೈವಗಳ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪೂರ್ವ ಸಂಪ್ರದಾಯದಂತೆ ಪಾಣಾಜೆ ಬಿಲ್ಲವ ಸಮುದಾಯದವರು ಕಿನ್ನಿಮಾಣಿ-ಪೂಮಾಣಿ ದೈವಗಳ ಹಾಗೂ ಪಿಲಿಭೂತ ದೈವದ ಗುಡಿಯ ಒಳಾಂಗಣ ಹಾಗೂ ದೈವಸ್ಥಾನದ ಹೊರಾಂಗಣದ ಸ್ವಚ್ಚತಾ ಶ್ರಮದಾನ ಜ. 16 ರಂದು ಮಾಡಿದರು. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಉಪಸ್ಥಿತರಿದ್ದರು.
