ವಿ.ಹಿಂ.ಪ.ಕಡಬ ಪ್ರಖಂಡ ವತಿಯಿಂದ ಅಶಕ್ತ ಗೋವುಗಳನ್ನು ಗೋಶಾಲೆಗೆ ರವಾನೆ

0

ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ 80 ಅಶಕ್ತ ಗೋವುಗಳನ್ನು ಮೈಸೂರು ಗೋ ಶಾಲೆಗೆ ರವಾನೆ

ಕಡಬ: ಕಡಬ ಪ್ರಖಂಡ ವಿ.ಹಿಂ.ಪ.ವತಿಯಿಂದ ಕಡಬ ಭಾಗದ ಸುಮಾರು 80 ಅಶಕ್ತ ಜಾನುವಾರುಗಳ ನ್ನು ಮೈಸೂರಿನ ಪಿಂಜರಪೂಲೆ ಗೋ ಶಾಲೆಗೆ ಜ.16 ರಂದು ರವಾನಿಸಲಾಯಿತು.
ಕಡಬದ ಸರಸ್ವತಿ ವಿದ್ಯಾಸಂಸ್ಥೆ ಯ ಆವರಣದಿಂದ ಜಾನುವಾರುಗಳನ್ನು ಐದು ಲಾರಿಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲಾಯಿತು. ಸರಸ್ವತಿ ವಿದ್ಯಾಸಂಸ್ಥೆ ಯ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಚಾಲನೆ ನೀಡಿದರು. ಕಡಬ ಪಶುವೈದ್ಯಾಧಿಕಾರಿ ಡಾ.ಅಜಿತ್ ಅವರು ಜಾನುವಾರುಗಳನ್ನು ಪರೀಕ್ಷೆ ನಡೆಸಿದರು.ಈ ಸಂದರ್ಭದಲ್ಲಿ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದ ಸಾಪ್ತಾಹಿಕ ಪ್ರಮುಖ್ ತಿಲಕ್ ರೈ ಕಡಬ , ರಘುರಾಮ ನಾಯ್ಕ್ ಕಡಬ , ಜಯಂತ ಕುತ್ಯಾಡಿ , ರಕ್ಷಿತ್ ದೋಳ , ತಿರ್ಥೇಶ್ ಮೀನಾಡಿ , ಸಂತೋಷ್ ದೋಳ, ಗುರುಮೂರ್ತಿ ವಿದ್ಯಾನಗರ , ಹರ್ಷಿತ್ ವಿದ್ಯಾನಗರ , ಸಂಕೇತ್ ಹೊಸಮಠ , ಹರ್ಷಿತ್ ಗಣಾದ ಕೊಟ್ಟಿಗೆ, ಪವಿತ್ ರಾಜ್ ಹೊಸಮಠ ,
ಮಾ| ಚಿರಾಗ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here