ಗುಡ್ಡಪ್ಪ ಪೂಜಾರಿ ಕುದ್ಕುಳಿ ನಿಧನ

0

 

ಆಲೆಟ್ಟಿ ಗ್ರಾಮದ ಕುದ್ಕುಳಿ ನಿವಾಸಿ ಗುಡ್ಡಪ್ಪ ಪೂಜಾರಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆ‌.8 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಯಶೋಧ, ಒರ್ವ ಪುತ್ರ ಮಂಗಳೂರಿನ‌ ಸೈಬರ್ ಕ್ರೈಮ್ ಠಾಣೆಯಲ್ಲಿ ಪೋಲಿಸ್ ಹೆಡ್ ಕಾನ್ಸ್ ಟೇಬಲ್ ಲಕ್ಷ್ಮಣ ಪೂಜಾರಿ ಕುದ್ಕುಳಿ, ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಕುಮುದಾ, ಸೊಸೆ ಶ್ರೀಮತಿ ಪುಷ್ಪಾ, ಅಳಿಯಂದಿರಾದ ಪದ್ಮನಾಭ ಪೂಜಾರಿ, ಮೋನಪ್ಪ ಪೂಜಾರಿ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ದೇವಿಯ ದರ್ಶನ ಪಾತ್ರಿಯಾಗಿ ಗುರುತಿಸಿಕೊಂಡಿದ್ದರು. ತನ್ನ ಜಮೀನಿನಲ್ಲಿ ಸ್ವಂತ ಖರ್ಚಿನಲ್ಲಿ ದೇವಿಯ ಭಜನಾ ಮಂದಿರವನ್ನು ಸ್ಥಾಪಿಸಿ ನವರಾತ್ರಿ ಸಮಯದಲ್ಲಿ ನವರಾತ್ರಿ ಪೂಜೆ ಹಾಗೂ ಭಜನಾ ಕಾರ್ಯಕ್ರಮದೊಂದಿಗೆ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದ್ದರು.

LEAVE A REPLY

Please enter your comment!
Please enter your name here