ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ – ವಿವಿಧ ಕಾಮಗಾರಿಗಳ ಉದ್ಘಾಟನೆ, ಆಲದ ಗಿಡ ನೆಡುವ ಕಾರ್ಯಕ್ರಮ

0

ಪುತ್ತೂರು: ಖರಾಸುರ ಪ್ರತಿಷ್ಠೆಯ, ಜಿಲ್ಲೆಯಲ್ಲೆ ಅತೀ ಎತ್ತರದ ಶಿವಲಿಂಗವನ್ನು ಹೊಂದಿರುವ ಬಹಳ ಕಾರಣಿಕತೆಯ ಶಿವ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜ.೧೯ ರಿಂದ ೨೪ ರವರೇಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಸರಕಾರ ಮತ್ತು ದಾನಿಗಳ, ಭಕ್ತಾಧಿಗಳ ಸಹಕಾರದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಆಲದ ಗಿಡ ನೆಡುವ ಕಾರ್ಯಕ್ರಮ ಜ.೧೮ ರಂದು ನಡೆಯಿತು.

ಮುಖ್ಯಧ್ವಾರವನ್ನು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬೋಳೋಡಿ ಚಂದ್ರಹಾಸ ರೈಯವರು ರಿಬ್ಬನ್ ಕತ್ತರಿಸಿ, ದಾನಿ ಶ್ರೀರಂಗ ಶಾಸ್ತ್ರೀ ಮಣಿಲರವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಎರಡನೇ ಧ್ವಾರವನ್ನು ದಾನಿ ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯರವರು ರಿಬ್ಬನ್ ಕತ್ತರಿಸಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ,ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರತನ್ ರೈ ಕುಂಬ್ರ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಸ್ವಾಗತ ಸಮಿತಿ ಸಂಚಾಲಕ ಕಡಮಜಲು ಸುಭಾಷ್ ರೈ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ದೇವಾಲಯ ಪ್ರವೇಶಿಸುವ ಮೆಟ್ಟಿಲಿನ ಇಕ್ಕೆಲಗಳಲ್ಲಿ ನಿರ್ಮಿಸಿದ ತಡೆಬೇಲಿಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ದೇವಾಲಯದ ಆವರಣದಲ್ಲಿ ನಿರ್ಮಿಸಿದ ತಡೆಬೇಲಿಯನ್ನು ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ ಉದ್ಘಾಟಿಸಿದರು. ಇನ್ನೊಂದು ಭಾಗದ ತಡೆಬೇಲಿಯನ್ನು ದಾನಿ ವೀಣಾ ಕೆ.ರೈ ಬೋಳೋಡಿಗುತ್ತು ರಿಬ್ಬನ್ ತುಂಡರಿಸಿ ಉದ್ಘಾಟಿಸಿದರು. ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ದೇವಾಲಯದ ಮೇಲ್ಛಾವಣಿ ವ್ಯವಸ್ಥೆಯನ್ನು ದಾನಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಬುದಾದಿ ಉದ್ಘಾಟಿಸಿ ಮಾತನಾಡಿ, ದೇವರ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿದೆ. ಬ್ರಹ್ಮಕಲಶೋತ್ಸವಾಧಿ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದು ಹೇಳಿ ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಕಣ್ಣಾರಾಯ ಬನೇರಿ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಪಾಕಶಾಲೆಯನ್ನು ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಿಬ್ಬನ್ ತುಂಡರಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ದೇವಾಲಯದ ಹೊರಾಂಗಣದ ಎದುರು ಭಾಗದ ಇಂಟರ್‌ಲಾಕ್ ವ್ಯವಸ್ಥೆಯನ್ನು ದಾನಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ವಿ.ಶಗ್ರಿತ್ತಾಯ ಬಾಳಯ ಮತ್ತು ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಪುತ್ತೂರಾಯ ಆಲಡ್ಕ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ರಾಮಯ್ಯ ರೈ ಎನ್.ತಿಂಗಳಾಡಿ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಹೋರಾಂಗಣದಿಂದ ದೇವಸ್ಥಾನಕ್ಕೆ ಹೋಗುವ ಮುಖ್ಯಧ್ವಾರದ ತಡೆಬೇಲಿಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿ ಮತ್ತು ಪದ್ಮಾವತಿ ಶೀನಪ್ಪ ರೈ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ದೇವಾಲಯದ ಒಳಗೆ ಅಳವಡಿಸಿ ವಿದ್ಯುತ್ ಸ್ವಿಚ್ ಅನ್ನು ದಾನಿ ಕೊಡಂಕೀರಿ ಪ್ರಸಾದ್ ರೈ ಮತ್ತು ಧನಲಕ್ಷ್ಮೀ ಇಲೆಕ್ಟ್ರೀಕಲ್ಸ್ ಮಾಲಕ ಧನಂಜಯ ಕುಲಾಲ್ ಮುಂಡೂರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮ, ದೀಪ ಬೆಳಗಿಸಿ ಉದ್ಘಾಟನೆ
ವಿವಿಧ ಕಾಮಗಾರಿಗಳ ಉದ್ಘಾಟನೆಯ ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಎಲ್ಲಾ ದಾನಿಗಳನ್ನು ಶಾಲು ಮತ್ತು ಹೂ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮವನ್ನು ದಂಬೆಕ್ಕಾನ ಸದಾಶಿವ ರೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದೇವರ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದರು. ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ನಮ್ಮನ್ನು ದೈವ ದೇವರುಗಳು ಕೈಬಿಡುವುದಿಲ್ಲ, ದೇವರ ಕೆಲಸವನ್ನು ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದರು. ಶ್ರೀ ಸದಾಶಿವ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ದೇವರ ಆಶೀರ್ವಾದ ಪಡೆದುಕೊಳ್ಳುವ ಎಂದು ಹೇಳಿ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ಕೋವಿಡ್ ೧೯ ನಿಯಮಗಳನ್ನು ಪಾಲನೆ ಮಾಡಿಕೊಂಡು ಕಾರ್ಯಕ್ರಮಗಳ ಯಶಸ್ವಿಗೆ ನಾವೆಲ್ಲರೂ ಪ್ರಯತ್ನ ಪಡೋಣ ಎಂದು ಎಲ್ಲರ ಸಹಕಾರ ಕೋರಿದರು. ವೇದಿಕೆಯಲ್ಲಿ ಕೇನ್ಯ ರವೀಂದ್ರನಾಥ ಶೆಟ್ಟಿ, ರಾಮಯ್ಯ ರೈ ನಂಜೆ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಶಿನಪ್ಪ ರೈ ಕೊಡಂಕೀರಿ, ಕಡಮಜಲು ಸುಭಾಷ್ ರೈ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಅನಿತಾ ಹೇಮನಾಥ ಶೆಟ್ಟಿ, ಅರುಣ್ ಕುಮಾರ್ ಆಳ್ವ ಬೋಳೋಡಿ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಶ್ರೀರಂಗ ಶಾಸ್ತ್ರೀ ಮಣಿಲ, ವೀಣಾ ಕಿಟ್ಟಣ್ಣ ರೈ ಬೋಳೋಡಿಗುತ್ತು, ಸುರೇಶ್ ಕಣ್ಣಾರಾಯ ಬನೇರಿ, ಪ್ರಕಾಶ್ ಪುತ್ತೂರಾಯ ಉಪಸ್ಥಿತರಿದ್ದರು. ಇವರುಗಳನ್ನು ಶಾಲು ಹಾಕಿ ಗೌರವಿಸಲಾಯಿತು. ಇದಲ್ಲದೆ ಆಹಾರ ಸಮಿತಿ ಸಂಚಾಲಕ ವಿಶ್ವನಾಥ ರೈ ಕುಕ್ಕುಂಜೋಡು, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ರುಕ್ಮ ನಾಯ್ಕ ಮಜಲುಮೂಲೆ, ಪದ್ಮಾವತಿ ಶೀನಪ್ಪ ರೈ, ಸದಾಶಿವ ರೈ ಪೊಟ್ಟಮೂಲೆರವರುಗಳನ್ನು ಶಾಲು ಹಾಕಿ ಗೌರವಿಸಲಾಯಿತು. ಸಾಂಸ್ಕೃತಿಕ ಮತ್ತು ವೇದಿಕೆ ಸಮಿತಿ ಸಂಚಾಲಕ ಮೋಹನ್ ಆಳ್ವ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು.

ಆಲದ ಗಿಡ ನೆಡುವ ಕಾರ್ಯಕ್ರಮ
ಆಲಡ್ಕ ಹೆಸರನ್ನು ಗಮನಿಸಿದರೆ ಇಲ್ಲಿ ಆಲ+ಅಡ್ಕ=ಆಲಡ್ಕ ಆಗಿದೆ. ಆಲದ ಮರಗಳಿಂದ ಕೂಡಿದ ಪ್ರದೇಶವೇ ಆಲಡ್ಕ ಆಗಿತ್ತು. ಆಲದಲ್ಲಿ ಮರದಲ್ಲಿ ದೇವರ ಅಂಶ ಇದೆ ಎಂಬುದನ್ನು ನಾವು ಶ್ಲೋಕಗಳಿಂದ ತಿಳಿದುಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆಲದ ಮರಗಳು ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಆಲದ ಗಿಡ ನೆಡುವ ಮೂಲಕ ಕ್ಷೇತ್ರದ ಸಾನ್ನಿಧ್ಯ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಡೆಯಿತು. ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು ಗಿಡ ನೆಟ್ಟುಮ ನೀರು ಹಾಕುವ ಮೂಲಕ ಮುಂದಿನ ದಿನಗಳಲ್ಲಿ ಆಲದ ಮರಕ್ಕೆ ಕಟ್ಟೆಯನ್ನು ಕಟ್ಟಿಕೊಡಲಾಗುವುದು ಎಂದು ಹೇಳಿ ಶುಭ ಹಾರೈಸಿದರು.

` ಆಲಡ್ಕ ಶ್ರೀ ಸದಾಶಿವ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಶಾಸಕರ ಮತ್ತು ದಾನಿಗಳ, ಭಕ್ತಾಧಿಗಳ ಸಹಕಾರದೊಂದಿಗೆ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಾಗಿದೆ. ಜ.೧೯ ರಿಂದ ೨೪ ರವರೇಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಸರಕಾರದ ಕೋವಿಡ್ ೧೯ ನಿಯಮಗಳ ಪಾಲನೆಯೊಂದಿಗೆ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮಗಳ ಯಶಸ್ವಿಗೆ ಭಕ್ತಾಧಿಗಳ ಸಹಕಾರ ಅಗತ್ಯ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ – ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ

LEAVE A REPLY

Please enter your comment!
Please enter your name here