ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಗೂ ತಾನು‌ ಸಮಾಜದಲ್ಲಿ ಹೇಗೆ ಬದುಕಬೇಕೆಂಬುವುದಕ್ಕೆ ಒಂದು ಕಲಾತ್ಮಕ ಆಯಾಮವಿದೆ. ಹಾಗಾಗಿ ನಮ್ಮ ಬದುಕಿಗೆ ಒಂದು ಸುಂದರವಾದ ಕಲಾತ್ಮಕವಾದ ಆಯಾಮ ನೀಡುವುದು ಹಾಗೂ ನಮ್ಮೊಳಗಿನ ಆಸಕ್ತಿಗಳನ್ನು ಜಾಗೃತಗೊಳಿಸುವ ವೇದಿಕೆಯೇ ಈ ಲಲಿತಾ ಕಲಾ ಸಂಘ.ಹಾಗಾಗಿ ವಿದ್ಯಾರ್ಥಿಗಳು ಈ ಲಲಿತಾ ಕಲಾ ಸಂಘದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.

 

ಅವರು ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಇದರ ಸಹಯೋಗದಲ್ಲಿ ಆಯೋಜಿಸಿದ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಯ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.

ಮನಸ್ಸು ಹಾಗೂ ದೇಹಕ್ಕೆ ಅವಿನಾಭಾವ ಸಂಬಂಧವಿದೆ.ದೇಹ ಮತ್ತು ಮನಸ್ಸು ಬೇರೆ ಬೇರೆಯಾಗಿ ಯೋಚಿಸಲು ಅಸಾಧ್ಯ. ದೇಹಕ್ಕೆ ಶ್ರಮ ಹೆಚ್ಚಾದಾಗ ಮನಸ್ಸು ಯೋಚಿಸುವುದನ್ನು ಕಡಿಮೆ ಮಾಡುತ್ತದೆ. ಇವೆರಡನ್ನು ಸಾಮರಸ್ಯದಿಂದ ಸೂಕ್ಷ್ಮತೆಯಿಂದ ಗಮನಿಸಿ, ಮನಸ್ಸಿಗೆ ಮಾನಸಿಕ ತರಬೇತಿ ನೀಡಿ ಪ್ರಭಾವಶಾಲಿಯಾಗಿಸುವುದು ಈ ಲಲಿತ ಕಲಾ ಸಂಘಗಳ ಉದ್ದೇಶವಾಗಬೇಕು. ವಿದ್ಯಾರ್ಥಿಗಳನ್ನು ಮತ್ತೆ ಮತ್ತೆ ಸಮಾಜದ ಬೆಳಕಾಗಿ ರೂಪುಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ , ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಹೋಗುವುದು ಮುಖ್ಯವಲ್ಲ, ಅವಕಾಶಗಳನ್ನು ಬಾಚಿಕೊಳ್ಳುವ ಮಟ್ಟಿಗೆ ಬೆಳೆಯಬೇಕು. ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಈ ಲಲಿತ ಕಲಾಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ಲಲಿತಕಲೆ ಹಾಗೂ ಜಾನಪದ ಕಲೆಗಳನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಯಬೇಕು ಹಾಗೂ ನಾವೆಲ್ಲರೂ ಕಲಾಪ್ರಜ್ಞೆ ಇರುವ ಶೋತೃಗಳಾಗಬೇಕಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಶುಭಾ ಅಡಿಗ ಮಾತನಾಡಿ,ಲಲಿತ ಕಲೆ ಎಂಬುದು ಜೀವನ ಕಲೆ.ಪ್ರತಿಯೊಬ್ಬರಲ್ಲಿಯೂ ಒಬ್ಬ ಕಲಾವಿದ ಇರುತ್ತಾನೆ. ಇದರ ಅನಾವರಣ ಮುಖ್ಯ ಎಂದು ತಿಳಿಸಿದರು.

ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಲಲಿತಕಲಾ ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಮಾತನಾಡಿ,ಸಾಂಸ್ಕೃತಿಕ ಲೋಕದಲ್ಲಿ ವಿವೇಕಾನಂದ ಕಾಲೇಜಿನ ಲಲಿತಕಲಾ ಸಂಘದ ಹೆಸರು ಶಾಶ್ವತ. 64 ಕಲೆಗಳ ಪರಿಕಲ್ಪನೆ ಹಾಗೂ ಬೆಳವಣಿಗೆಗೆ ಕಾಲೇಜು ಶ್ರಮಿಸುತ್ತಿದೆ ಎಂದು ಪ್ರಸ್ತಾವನೆಗೈದು, ಉದ್ಘಾಟಕರ ಕಿರು ಪರಿಚಯವನ್ನು ನೀಡಿದರು.

ಗೆಜ್ಜೆ,ತಾಳವನ್ನು ಪ್ರದಾನ ಮಾಡುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ವಿಕಸನ ವಿಶೇಷ ಸಂಚಿಕೆಯನ್ನು ಉದ್ಘಾಟಕರಾದ ರಾಧಾಕೃಷ್ಣ ಕಲ್ಚಾರ್ ಬಿಡುಗಡೆ ಮಾಡಿದರು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ರಸಪ್ರಶ್ನೆಯ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ , ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ವಿದ್ಯಾರ್ಥಿಗಳಾದ ವಿಭಾಶ್ರೀ, ಅನುಷಾ, ಶಿಲ್ಪಾ ಪ್ರಾರ್ಥಿಸಿದರು.ವಿದ್ಯಾರ್ಥಿನಿ ನಿಧಿ ಸ್ವಾಗತಿಸಿ, ಕಾರ್ಯದರ್ಶಿ ಅನನ್ಯ.ಟಿ ವಂದಿಸಿದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಲಲಿತಕಲಾ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಭಕ್ತಿಶ್ರೀ.ಎಸ್.ಶರ್ಮಾ.ಐ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಲಲಿತಕಲಾ ಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.