ಪುತ್ತೂರು ವಲಯದಿಂದ ಸ್ವರ್ಣ ಕಳಸ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬಾ ದೇವಿಯ ಗರ್ಭಗುಡಿಗೆ ಚಿನ್ನದ ಕಳಸ (ಮುಗುಳಿ)ಯನ್ನು ಜ. ೧೯ರಂದು ಸಮರ್ಪಿಸಲಾಯಿತು.

ಇದಕ್ಕೆ ಮೊದಲು ಪುತ್ತೂರಿನ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಸ್ಬರ್ಣ ಕಳಸವನ್ನು ವೀಕ್ಷಣೆಗೆ ಇಡಲಾಯಿತು. ಬೆಳಿಗ್ಗೆ ೧೦ರಿಂದ ೧೨ರವರೆಗೆ ವೀಕ್ಷಣೆ ಅವಕಾಶ ಮಾಡಿಕೊಟ್ಟಿದ್ದು, ನಂತರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು. ಬಳಿಕ ಕೋರ್ಟ್ ರಸ್ತೆ ಮೂಲಕ ಸ್ವರ್ಣ ಕಳಸವನ್ನು ಕೊಂಡೊಯ್ದು, ಮಂಗಳೂರಿಗೆ ತೆರಳಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮುಂಗ್ಲಿಮನೆ, ರಾಮ್ ದಾಸ್ ಹಾರಾಡಿ ಮೊದಲಾದವರು ಸ್ವರ್ಣಕಳಸ ವೀಕ್ಷಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯೆ ವೀಣಾ ಬಾಲಕೃಷ್ಣ ಆಚಾರ್ಯ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ್ ಆಚಾರ್ಯ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ್, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ವಿ. ಪುರುಷೋತ್ತಮ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಪುತ್ತೂರು ವಲಯ ಅಧ್ಯಕ್ಷ ಜಗದೀಶ್ ಎಸ್.ಎನ್., ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗೌರವ ಸಲಹೆಗಾರ ಉದಯ ಕುಮಾರ್ ಆಚಾರ್ಯ, ಕಾರ್ಯದರ್ಶಿ ಕೆ. ಸಂಜೀವ ಆಚಾರ್ಯ, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೊಕ್ಕಡ, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಆಚಾರ್ಯ, ಕಡಬ ವಿಶ್ವಕರ್ಮ ಸಮಾಜದ ಅಧ್ಯಕ್ಷೆ ಸರೋಜಿನಿ ಆಚಾರ್ಯ, ಸ್ವರ್ಣ ಕಳಸ ಸಮರ್ಪಣಾ ಸಮಿತಿಯ ಸದಸ್ಯರಾದ ಜಗದೀಶ್ ಆಚಾರ್ಯ ಹಾರ್ದಿಕ್ ಡೈವರ್ಕ್ಸ್, ವಿಶ್ವಕರ್ಮ ಯುವ ಮಿಲನದ ಅಧ್ಯಕ್ಷ ಹರೀಶ್, ಪುತ್ತೂರು ವಲಯದ ಕೂಡುವಳಿಕೆ ಮೊಕ್ತೇಸರರು, ಪ್ರಮುಖರಾದ ರತ್ನಾಕರ ಆಚಾರ್ಯ, ರವಿ ಆಚಾರ್ಯ ಸಂಪ್ಯ, ಎಂ. ಉಮೇಶ್ ಆಚಾರ್ಯ, ವಿಜಿತ್ ಜ್ಯುವೆಲ್ಲರ್ಸ್ ನ ಅಚ್ಯುತ ಆಚಾರ್ಯ, ಶ್ರೀ ರತ್ನ ಜ್ಯುವೆಲ್ಲರ್ಸ್ ನ ರಾಜೇಶ್ ಎನ್., ಆಶಾ ಜ್ಯುವೆಲ್ಲರ್ಸ್ ನ ಸಂತೋಷ್ ಆಚಾರ್ಯ, ರಾಜ್ ಜ್ಯುವೆಲ್ಲರ್ಸ್ ನ ರಾಜಶೇಖರ್ ಆಚಾರ್ಯ, ಜಿಗಾಂಟಿಕ್ ಇಂಡಸ್ಟ್ರೀಸ್ ನ ಪ್ರವೀಣ್ ಎನ್., ಗುರುಪ್ರಸಾದ್ ಬನ್ನೂರು ಮೊದಲಾದವರು‌ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.