ಪುತ್ತೂರು: ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ವಿಟ್ಲ, ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಭರತನಾಟ್ಯ ಕಾರ್ಯಕ್ರಮ ನೆರವೇರಿತು.
ಹಿಮ್ಮೇಳದ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಹಾಡುಗಾರಿಕೆಯಲ್ಲಿ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ ಕೊಳಲುನಲ್ಲಿ ರಾಹುಲ್ ಕಣ್ಣೂರು ಸಹಕರಿಸದರು. ವಿದ್ಯಾರ್ಥಿನಿಯರಾದ ಸಾನ್ವಿ ಜೆ.ಪಿ, ವಂಶಿ ಬಿ.ಆರ್, ಮೇಘಶ್ರೀ, ಇಂಚರ, ಸೌಜನ್ಯ, ಪ್ರಣ್ವಿ ಕಾಮತ್, ಪ್ರಾಪ್ತಿ, ಪ್ರತ್ಯೂಷ, ಧೃತಿ, ಹಂಸಿಕಾ, ನೇಹಾ, ಭೂಮಿಕ್ಷಾ, ಸಾನ್ವಿ, ಪೂರ್ವಿಕಾ, ತೃಷಾ, ಭಾರ್ಗವಿ ಬಾಯಾರು, ಪ್ರಣೀತಾ ಬಾಯಾರು, ವಿದುಷಿ ಹರ್ಷಿತಾ ಬದಿಯಡ್ಕ, ವಿದುಷಿ ರೂಪಾ ಕನಕಪ್ಪಾಡಿ, ಅಭಿಷೇಕ್ ಮಂಡೆಕೋಲು, ಶಮಾ ವಳಕ್ಕುಂಜ, ಸಮನ್ವಿತಾ ವಳಕ್ಕುಂಜ, ಭಾಗವಹಿಸಿದರು. ಪ್ರೇಮ್ರಾಜ್ ಆರ್ಲಪದವು ಮುಖ ಅಲಂಕಾರದಲ್ಲಿ ಸಹಕರಿಸಿದರು.