- ಅಭೂತಪೂರ್ವ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ
ಪುತ್ತೂರು: ಖರಾಸುರ ಪ್ರತಿಷ್ಠೆಯ ಜಿಲ್ಲೆಯಲ್ಲೇ ಅತೀ ಎತ್ತರದ ಶಿವಲಿಂಗವನ್ನು ಹೊಂದಿರುವ ಅತ್ಯಂತ ಕಾರಣಿಕತೆಯಿಂದ ಕೂಡಿದ ಶಿವ ದೇವಸ್ಥಾನಗಳಲ್ಲಿ ಒಂದಾಗಿರುವ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜ.19 ರಂದು ವೈಭವದಿಂದ ಆರಂಭವಾಯಿತು. ಜ.24 ರವರೇಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಜ.19 ರಂದು ಹಸಿರು ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಿ ಉಗ್ರಾಣ ಮುಹೂರ್ತ ಮಾಡುವ ಮೂಲಕ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ಕೆದಂಬಾಡಿ ಗ್ರಾಮದ ಭಕ್ತರಿಂದ ಸಂಗ್ರಹಿಸಲ್ಪಟ್ಟ ಹಸಿರು ಹೊರೆಕಾಣಿಕೆಯ ಮೆರವಣಿಗೆಯನ್ನು ತಿಂಗಳಾಡಿಯಲ್ಲಿ ಉದ್ಘಾಟಿಸಲಾಯಿತು. ಆರಂಭದಲ್ಲಿ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ತಿಂಗಳಾಡಿ ಜಂಕ್ಷನ್ನಲ್ಲಿ ಧ್ವಾರದ ಬಳಿ ಕೆದಂಬಾಡಿ ಗ್ರಾಪಂ ಅಧ್ಯಕ್ಷ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರತನ್ ರೈ ಕುಂಬ್ರರವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮುಂಡೂರು ಗ್ರಾಮದ ಭಕ್ತಾಧಿಗಳಿಂದ ಸಂಗ್ರಹವಾದ ಹಸಿರು ಹೊರೆಕಾಣಿಕೆಯ ಮೆರವಣಿಗೆಯ ಮುಂಡೂರು ಸೇವಾ ಸಹಕಾರಿ ಸಂಘದ ವಠಾರದಲ್ಲಿ ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾರವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ವೈಭವದ ಮೆರವಣಿಗೆ
ಮುಂಡೂರು, ಕೆದಂಬಾಡಿ, ಸರ್ವೆ ಗ್ರಾಮದ ಭಕ್ತಾಧಿಗಳಿಂದ ಸಂಗ್ರಹವಾದ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಫೆ.೧ ರಿಂದ ಬ್ರಹ್ಮಕಲಶೋತ್ಸವ ನಡೆಯಲಿರುವ ಎಲಿಯ ಶ್ರೀ ಕ್ಷೇತ್ರದ ವತಿಯಿಂದಲೂ ಹಸಿರು ಹೊರೆಕಾಣಿಕೆಯನ್ನು ದೇವಳಕ್ಕೆ ಸಲ್ಲಿಸಲಾಯಿತು. ಕಾರು,ಜೀಪು,ಓಮ್ನಿ ಇತ್ಯಾದಿಗಳಲ್ಲಿ ಹಸಿರುವಾಣಿಯನ್ನು ಮೆರವಣಿಗೆಯ ಮೂಲಕ ದೇವಳಕ್ಕೆ ಕೊಂಡೊಯ್ಯಲಾಯಿತು. ತಿಂಗಳಾಡಿಯಿಂದ ಹೊರಟ ಮೆರವಣಿಗೆ ದರ್ಬೆ,ಗುತ್ತು, ಚಾವಡಿ, ಪೊಟ್ಟಮೂಲೆ, ಕೊಡಂಕೀರಿ, ಬಾಳಯ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಿತು. ಮೆರವಣಿಗೆಯಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಹರಿದು ಬಂದ ಹಸಿರುವಾಣಿ ಹೊರೆಕಾಣಿಕೆ
ಮುಂಡೂರು, ಕೆದಂಬಾಡಿ ಮತ್ತು ಸರ್ವೆ ಗ್ರಾಮ ಹಾಗೂ ಊರಪರವೂರ ಭಕ್ತಾಧಿಗಳಿಂದ ಶ್ರೀ ದೇವರಿಗೆ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಿದೆ. ದೇವಳದಲ್ಲಿ ಹೊರಾಂಗಣದಲ್ಲಿ ಹಸಿರುವಾಣಿ ಹೊರೆಕಾಣಿಕೆಯನ್ನು ಇಡಲಾಗಿದೆ. ಊರ ಪರವೂರ ಭಕ್ತಾಧಿಗಳಿಂದ ನಿರೀಕ್ಷೆಗೂ ಮೀರಿ ವಿವಿಧ ಸಾಮಾಗ್ರಿಗಳು ಬಂದು ಸೇರಿದ್ದು ಶ್ರೀ ದೇವರ ಕಾರಣಕತೆಯನ್ನು ಎತ್ತಿ ತೋರಿಸುತ್ತಿದೆ.
ಉಗ್ರಾಹ ಮುಹೂರ್ತ
ಮೊದಲಿಗೆ ದೇವರ ಎದುರು ಅರ್ಚಕ ಸುಬ್ರಹ್ಮಣ್ಯ ಎನ್.ಕೆರವರು ಪ್ರಾರ್ಥನೆ ಮಾಡಿದರು. ಆ ಬಳಿಕ ಉಗ್ರಾಣ ಮುಹೂರ್ತ ನಡೆಯಿತು. ಉದ್ಯಮಿ ಜಯಗುರು ಆಚಾರ್ ಹಿಂದಾರ್ರವರು ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಉಗ್ರಾಣ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಕಣ್ಣಾರಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಬೋಳೋಡಿ ಚಂದ್ರಹಾಸ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿ, ದಾನಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕರವರುಗಳು ದೀಪ ಬೆಳಗಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರುಗಳಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಪ್ರಕಾಶ್ ಪುತ್ತೂರಾಯ ಆಲಡ್ಕ, ಉಪಾಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಾನಂದ ರೈ ಮಿತ್ರಂಪಾಡಿ, ಬೇಬಿ ಶೀನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು, ಕೋಶಾಧಿಕಾರಿ ರತನ್ ರೈ ಕುಂಬ್ರ, ಜತೆ ಕಾರ್ಯದರ್ಶಿಗಳಾದ ಬಾಲಚಂದ್ರ ರೈ ಚಾವಡಿ, ಮೋಹನ್ ಶೆಟ್ಟಿ ಕೆದಂಬಾಡಿಗುತ್ತು, ರಾಮಕೃಷ್ಣ ರೈ ಕುಕ್ಕುಂಜೋಡು, ರಘುನಾಥ ರೈ ಚಾವಡಿ, ರಾಕೇಶ್ ರೈ ಬೋಳೋಡಿಗುತ್ತು, ಲಿಂಗಪ್ಪ ನಾಯ್ಕ ಕೊಡಂಕೀರಿ, ಆರ್ಥಿಕ ಸಮಿತಿ ಸಂಚಾಲಕ ರಾಘವ ಗೌಡ ಕೆರೆಮೂಲೆ, ಹಸಿರುವಾಣಿ ಮತ್ತು ಉಗ್ರಾಣ ಸಮಿತಿ ಸಂಚಾಲಕ ಭಾಸ್ಕರ ಬಲ್ಲಾಳ್ ಕೆದಂಬಾಡಿಬೀಡು, ಆಹಾರ ಸಮಿತಿಯ ಸಂಚಾಲಕರುಗಳಾದ ವಿಶ್ವನಾಥ ರೈ ಕುಕ್ಕುಂಜೋಡು, ಸದಾಶಿವ ಶೆಟ್ಟಿ ಪಟ್ಟೆ, ವ್ಯವಸ್ಥಾಪನ ಸಮಿತಿ ಸದಸ್ಯರಗಳಾದ ರುಕ್ಮ ನಾಯ್ಕ ಮಜಲುಮೂಲೆ, ಪದ್ಮಾವತಿ ಶೀನಪ್ಪ ರೈ ಕೊಡಂಕೀರಿ, ಜಯಲಕ್ಷ್ಮೀ ಬಾಳಯ, ಸದಾಶಿವ ರೈ ಪೊಟ್ಟಮೂಲೆ, ಜೀರ್ಣೋದ್ಧಾರ ಸಮಿತಿಯ ಜತೆ ಕಾರ್ಯದರ್ಶಿಗಳಾದ ಲೋಕೇಶ್ ನಾಯ್ಕ ಬೋಳೋಡಿ, ಮಹಾಬಲ ರೈ ಕುಕ್ಕುಂಜೋಡು, ಸಮಿತಿ ಸದಸ್ಯರುಗಳಾದ ಆನಂದ ರೈ ಮಠ, ರಮೇಶ್ ಗೌಡ ಪಜಿಮಣ್ಣು, ಉಮೇಶ್ ಗೌಡ ಅಂಬಟ, ಮೇಲುಸ್ತುವಾರಿ ಸಮಿತಿ ಸಂಚಾಲಕ ಧನಂಜಯ ಕುಲಾಲ್ ಮುಂಡೂರು, ಪಾರ್ಕಿಂಗ್ ಸಮಿತಿಯ ಸಂಚಾಲಕ ಅವಿನಾಶ್ ಬೋಳೋಡಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.