ನೆಲ್ಯಾಜೆ ತರವಾಡು ಮನೆಯ ಯಾಜಮಾನ ಮರುವಂತಿಲ ನಾರಾಯಣ ರೈರವರಿಗೆ ನುಡಿ ನಮನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು : ಪಾಲ್ತಡಿ ಗ್ರಾಮದ ನೆಲ್ಯಾಜೆ ತರವಾಡು ಮನೆಯ ಯಾಜಮಾನ ಪೆರಾಬೆ ಗ್ರಾಮದ ಪಟ್ಟೆ ಮರುವಂತಿಲದ ನಾರಾಯಣ ರೈ ಮರುವಂತಿಲ ಜ.4 ರಂದು ಸ್ವರ್ಗಸ್ಥರಾಗಿದ್ದು ಅವರ ಶ್ರದ್ದಾಂಜಲಿ ಕಾರ್ಯಕ್ರಮ ಪೆರಾಬೆ ಗ್ರಾಮದ ನೇಸರ ಮರುವಂತಿಲ ಮನೆಯಲ್ಲಿ ನಡೆಯಿತು.

ಬಂಟರಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾದ ದಯಾನಂದ ರೈ ಮನವಳಿಕೆಗುತ್ತುರವರು ನುಡಿನಮನ ಸಲ್ಲಿಸಿ ಸ್ವರ್ಗಸ್ಥರಾದ ನಾರಾಯಣ ರೈಗಳು ಸಮಾಜದಲ್ಲಿ ಚಿರಪರಿಚಿತರಾಗಿ ದೈವಿಕತೆಯಲ್ಲಿ ಹಾಗು ಸಮಾಜದಲ್ಲಿರುವ ಸಂಪ್ರದಾಯದ ಬಗ್ಗೆ ಅಪಾರ ಅನುಭವ ಹೊಂದಿದ್ದರು, ಪ್ರಗತಿಪರ ಕೃಷಿಕರಾಗಿ,ಹೈನುಗಾರಿಕೆಯಲ್ಲಿ ಅನುಭವ ಹೊಂದಿದ್ದರು. ಸ್ಥಳಿಯ ದೈವಾಸ್ಥಾನದ ಅಡಳಿತ ಸಮಿತಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಸಮಾಜದಲ್ಲಿ ತನ್ನ ಮಕ್ಕಳನ್ನು ಗುರುತಿಸುವ ವ್ಯಕ್ತಿಗಳಾಗಿ ರೂಪಿಸಿದವರು ಎಂದು ಹೇಳಿ ಮೃತರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು.

ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ .ಕೆ ರಾಮಕುಂಜ ಮಾತನಾಡಿ ದಿ.ನಾರಾಯಣ ರೈಗಳು ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದರು ಸಂಸಾರಿಕವಾಗಿ ಹಾಗು ಕೃಷಿಯಲ್ಲಿ ಅದರ್ಶ ಜೀವನ ನಡೆಸಿದವರು ಅವರ ಅದರ್ಶ ವನ್ನು ಎಲ್ಲರೂ ಪಾಲನೆ ಮಾಡುವಂತೆ ತಿಳಿಸಿದರು. ದಿ.ನಾರಾಯಣ ರೈಯವರ ತಮ್ಮ ಜಗನ್ನಾಥ ರೈ ಯವರು ಮಾತನಾಡಿ ನಮ್ಮ ಕುಟುಂಬದ ಯಾಜಮಾನನಾಗಿ ನಮ್ಮ ತರವಾಡು ಮನೆಯ ದೈವ ದೇವರ ಕೆಲಸ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದವರು.ಅವರ ಅಗಲಿಕೆಯಿಂದ ನಮ್ಮ ಕುಟುಂಬ ವರ್ಗಕ್ಕೆ ಅಪಾರ ದು:ಖವಾಗಿದೆ ಅವರ ಅತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸಿದರು ಆನಂತರ ಒಂದು ನಿಮಿಷ ಮಾನ ಪ್ರಾರ್ಥನೆ ಸಲ್ಲಿಸಲಾಯಿತು.ಅಗಮಿಸಿದ ಕುಟುಂಬ ವರ್ಗದವರು ಹಾಗು ಬಂಧುಮಿತ್ರರು,ಹಿತೈಷಿಗಳು ದೀ.ನಾರಾಯಣ ರೈಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು ಆರುವಾರ ಬಾಳಿಕೆ ಸಂತೋಷ ರೈ ಕಾರ್ಯಕ್ರಮ ನಿರೂಪಿಸಿ,ಪ್ರಶಾಂತ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು.

ಮೃತರ ಪತ್ನಿ ಕುಸುಮ ಎನ್ ರೈ ಮನವಳಿಕೆ ಮಕ್ಕಳಾದ ಮನವಳಿಕೆಯ ರಾಧಾಕೃಷ್ಣ ರೈ, ಸುಭಾನು ರೈ, ಸುದೀರ್ ರೈ, ಸವಿತಾ.ಜಿ, ಅಡ್ಯಂತ್ತಾಯ,ಪ್ರಕಾಶಿ‌ನಿ ಶೆಟ್ಟಿ, ಸೊಸೆಯಂದಿರಾದ ನವೀನಾಕ್ಷಿ ರೈ,ನಂದಿನಿ .ಪಿ.ರೈ, ಅಶಾ ಎಸ್ ರೈ,ಗೀತಾ ಎಸ್ ರೈ ಹಾಗು ಅಳಿಯ ಗೋಪಾಲಕೃಷ್ಣ ಅಡ್ಯಂತ್ತಾಯ ಮತ್ತು ಮೊಮ್ಮಕ್ಕಳು ಹಾಗು ನೆಲ್ಯಾಜೆ ತರವಾಡು ಮನೆಯ ಕುಟುಂಬಸ್ಥರು ಹಾಗು ಮನವಳಿಕೆ ಗುತ್ತು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.