ಪುತ್ತೂರು: ಬೂಡಿಯಾರ್ ರಾಧಾಕೃಷ್ಣ ರೈರವರ ನಿವಾಸದಲ್ಲಿ ಮೀನುಗಾರಿಕೆ ಬಗ್ಗೆ ಕಾರ್ಯಾಗಾರ, ಮೀನು ಕೃಷಿ ತರಬೇತಿ ಕಾರ್ಯಕ್ರಮ ಜ.19 ರಂದು ನಡೆಯಿತು. ರಾಜ್ಯ ಮೀನುಗಾರಿಕ ಸಚಿವ ಎಸ್ ಅಂಗಾರರವರು ಕಾರ್ಯಕ್ರಮ ಉದ್ಘಾಟಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾ.ಪಂ, ಅಧ್ಯಕ್ಷೆ ಸರಸ್ವತಿ, ಪುತ್ತೂರು ತಾ.ಪಂ, ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಾರ್ಯಕ್ರಮದ ಸಂಘಟಕ ಬೂಡಿಯಾರ್ ರಾಧಾಕೃಷ್ಣ ರೈ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಚಾರಿ, ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಶಿವ ಕುಮಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿತಿನ್ ಕುಮಾರ್, ಕೃಷಿ ವಿಜ್ಞಾನಿ ರಮೇಶ್, ವಿಶ್ವನಾಥ ರೆಡ್ಡಿ, ಇಲಾಖೆಯ ಉಪ ನಿರ್ದೇಶಕಿ ಡಾ.ಸುಶ್ಮಿತಾ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಸಹಿತ ಅನೇಕ ಮಂದಿ ಭಾಗವಹಿಸಿದರು.