ಪುತ್ತೂರು: ಕಳೆದ ಹತ್ತು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಂ ಕಂಪ್ಯೂಟರ್ಸ್ ಮತ್ತು ಸೆಕ್ಯೂರಿಟಿ ಸಿಸ್ಟಮ್ಸ್ ಸಂಸ್ಥೆಯ ವಿಸ್ತ್ರತ ಮಳಿಗೆಯು ಸ್ಥಳಾಂತರಗೊಂಡು ಜ.20 ರಂದು ದರ್ಬೆ ವೃತ್ತದ ಬಳಿಯ ಶ್ರೀ ಮಹಾಲಿಂಗೇಶ್ವರ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ಅತ್ಯುತ್ತಮ ಗುಣಮಟ್ಟದ ಕಂಪ್ಯೂಟರ್ಗಳು, ಲ್ಯಾಪ್ ಟಾಪ್ ಮತ್ತು ಸಿಸಿ ಕ್ಯಾಮರಾ, ಪ್ರಿಂಟರ್ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ್ ಐಟಮ್ಸ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಸರ್ವಿಸ್ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಸುದರ್ಶನ್ ರೈ ನೀರ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದಾ ಗ್ರಾಹಕರ ಸೇವೆಯಲ್ಲಿ
ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದೇ ಶಿವಂ ಕಂಪ್ಯೂಟರ್ಸ್ನ ಧ್ಯೇಯವಾಗಿದ್ದು ಕಳೆದ 10 ವರ್ಷಗಳಿಂದ ಗ್ರಾಹಕರಿಗೆ ಸಂತೃಪ್ತಿದಾಯಕ ಸೇವೆ ನೀಡುತ್ತಾ ಬಂದಿದೆ. ತ್ವರಿತಗತಿಯಲ್ಲಿ ಕಂಪ್ಯೂಟರ್ ದುರಸ್ತಿ ಮಾಡಿಕೊಡುವ ವ್ಯವಸ್ಥೆ ಇಲ್ಲಿದೆ ಅಲ್ಲದೆ ಕಛೇರಿ, ಮನೆಗಳಿಗೆ ಸಿಸಿ ಕ್ಯಾಮರಾ ಮತ್ತು ಕಂಪ್ಯೂಟರ್ ಅಳವಡಿಕೆ ಮಾಡಿಕೊಡುವ ವ್ಯವಸ್ಥೆ ಇದೆ. ಇಎಂಐ ಮೂಲಕ ಕಂಪ್ಯೂಟರ್, ಲ್ಯಾಪ್ಟಾಪ್ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.9482744404ಗೆ ಕರೆ ಮಾಡಬಹುದು ಎಂದು ಮಾಲಕರು ತಿಳಿಸಿದ್ದಾರೆ.