ಸಿಂಹವನದಲ್ಲಿ ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ-ಯಶಸ್ವಿ ಸಂಪನ್ನ

0

ಪುತ್ತೂರು: ಆರ್ಯಾಪು ಗ್ರಾಮದ ಸಿಂಹವನ ಇಲ್ಲಿನ ಸಿಂಹವನದ ಮಾಯ್ಕಾರ ಶ್ರೀ ಸ್ವಾಮಿ ಕೊರಗ ತನಿಯ ಅಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದಲ್ಲಿ ಜ.17ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಕೊರಗಜ್ಜ ದೈವದ ಮೂಲನೆಲೆ ಕುತ್ತಾರುಪದವಿನ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜರವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆಯು ಯಶಸ್ವಿ ಸಂಪನ್ನಗೊಂಡಿದೆ.


ರಾತ್ರಿ ಕೊರಗಜ್ಜ ತನಿಯ ಕೋಲವು ವಿಜ್ರಂಭಣೆಯಿಂದ ಜರಗಿತು. ಆರ್ಯಾಪು ಗ್ರಾಮದ ಸಿಂಹವನ ಪರಿಸರದ ಭಕ್ತರಲ್ಲದೆ ವಿವಿಧೆಡೆಗಳಿಂದ ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತರು ಈ ಧಾರ್ಮಿಕ ವಿಧಿವಿಧಾನದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಈ ಕ್ಷೇತ್ರದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು ಹಾಗೂ ಅವರ ಪತ್ನಿ ಅಮಿತಾ ಆರ್.ಶೆಟ್ಟಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸಮಾಜ ಸೇವಕ ಪ್ರಸನ್ನ ಕುಮಾರ್ ಮಾರ್ತ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎಸ್ ಚಂದ್ರ ಸಿಂಹವನ, ಕಾರ್ಯದರ್ಶಿ ಚಂದ್ರಶೇಖರ ಪಾಪೆಮಜಲು, ಜೊತೆ ಕಾರ್ಯದರ್ಶಿ ರಾಮ ಸಾಮೆತ್ತಡ್ಕ, ಟ್ರಸ್ಟ್ ಸದಸ್ಯ ಬಾಬುರಾಜ್, ದೈವದ ಪ್ರಧಾನ ಅರ್ಚಕ ಈಶ್ವರ ಸಿಂಹವನ, ಉತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಿಂಹವನ, ಕಾರ್ಯಾಧ್ಯಕ್ಷರಾದ ನಾರಾಯಣ ನಾಕ್ ಪಂಜಳ ಹಾಗೂ ಟಿ.ಜಯರಾಮ ಪಂಜಳ, ಕೋಶಾಧಿಕಾರಿ ದಿನೇಶ್ ಸಿಂಹವನ, ಯಮುನಾ ಬೋರ್‌ವೆಲ್ಸ್ ಮಾಲಕಿ ದಿವ್ಯ ಕೆ.ಶೆಟ್ಟಿ, ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ವೇಣುಗೋಪಾಲ್ ರೈ ಹಾಗೂ ಊರ ಸಮಸ್ತರು ಪಾಲ್ಗೊಂಡರು. ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಬೆಳಿಗ್ಗೆ ಮತ್ತು ಸಂಜೆ ಉಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಸಿಂಗಾರಗೊಂಡ ಶ್ರೀ ಕ್ಷೇತ್ರ:
ಸಿಂಹವನ ಪರಿಸರದಲ್ಲಿ ಸುಮಾರು ೪೫ ಕುಟುಂಬಗಳು ಮಾತ್ರ ವಾಸ್ತವ್ಯವಿದ್ದು, ಪ್ರತಿಯೋರ್ವರು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎಸ್ ಚಂದ್ರ ಸಿಂಹವನ, ಉತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಿಂಹವನ ಹಾಗೂ ಸಮಿತಿಯ ಸದಸ್ಯರೊಂದಿಗೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಸಾಥ್ ನೀಡಿದ್ದಾರೆ. ಕಮ್ಮಾಡಿ ಫ್ಲೈವುಡ್ ಎದುರು, ಸಿಂಹವನ ಪ್ರವೇಶವಾಗುವ ದ್ವಾರದಲ್ಲಿ ಸ್ಥಳೀಯ ಯುವಕರ ದಂಡು ಬಿದಿರಿನ ಸಲಾಖೆಗಳಿಂದ ನಿರ್ಮಿಸಿದ ಬೃಹತ್ ದ್ವಾರ ಕಣ್ಮನ ಸೆಳೆಯುತ್ತಿತ್ತು. ಜೊತೆಗೆ ಪ್ರವೇಶದ್ವಾರದಿಂದ ಹಿಡಿದು ಕೊರಗಜ್ಜನ ಪ್ರತಿಷ್ಠೆ ನಡೆಯುವ ಸಾನಿಧ್ಯದುದ್ದಕ್ಕೂ ಕೇಸರಿ ಬಂಟಿಂಗ್ಸ್, ಲೈಟಿಂಗ್ಸ್, ಶ್ರೀ ಕ್ಷೇತ್ರದಲ್ಲಿ ಹಸಿರು ತೋರಣ, ವಿದ್ಯುದ್ದೀಪಲಂಕಾರದಿಂದ ಸಿಂಗಾರಗೊಂಡು ಶ್ರೀ ಕ್ಷೇತ್ರವು ಶೋಭಿಸುತ್ತಿತ್ತು. ಕಾರ್ಯಕ್ರಮದ ನಡುನಡುವೆ ಸುಡುಮದ್ದುಗಳ ಪ್ರದರ್ಶನವೂ ಇತ್ತು.

ಸಹಕರಿಸಿದ ಸಂಘ-ಸಂಸ್ಥೆಗಳು, ಸಮಿತಿಗಳು:
ಕಾರ್ಯಕ್ರಮಕ್ಕೆ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀರಾಮನಗರ ನವಚೇತನ ಯುವಕ ಮಂಡಲ, ಕಾರ್ಪಾಡಿ ಸುಬ್ರಹ್ಮಣ್ಯ ಯುವಕ ಮಂಡಲ, ಮುಕ್ರಂಪಾಡಿ ಸುಭದ್ರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮೊಟ್ಟೆತ್ತಡ್ಕ ಸನ್ನಿಧಿ ಯುವಕ ಮಂಡಲ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರ, ಸಂಪ್ಯ ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರ, ಬ್ರಹ್ಮನಗರ ಶ್ರೀ ದುರ್ಗಾ ಮಾರಿಯಮ್ಮ ದೇವಸ್ಥಾನ, ಪುತ್ತೂರು ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್, ಕೌಡಿಚ್ಚಾರು ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನ, ಸಿ.ಆರ್.ಸಿ ಕಾಲೋನಿ(ಎಂ.ಆರ್.ಫ್ರೆಂಡ್ಸ್ ಕ್ಲಬ್) ಮತ್ತು ಶ್ರೀ ಕ್ಷೇತ್ರದ ನೇಮೋತ್ಸವ ಸಮಿತಿ, ನೀರಾವರಿ ಸಮಿತಿ, ಸತ್ಯನಾರಾಯಣ ಪೂಜಾ ಸಮಿತಿ, ಅನ್ನಸಂತರ್ಪಣೆ ಸಮಿತಿ, ಪ್ರಚಾರ ಸಮಿತಿ, ಅಲಂಕಾರ ಸಮಿತಿ ಸಮಿತಿ, ಸ್ವಚ್ಛತಾ ಸಮಿತಿ, ಲೈಟಿಂಗ್ಸ್ ಸಮಿತಿ, ಆರ್ಥಿಕ ಸಮಿತಿ, ಸ್ವಾಗತ ಸಮಿತಿ, ಛಾಯಾಚಿತ್ರ ಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳು ಸಹಕರಿಸಿದ್ದಾರೆ.

-ಪ್ರತಿ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಗೇಲು ಒಂದರ ಬಾಬ್ತು ರೂ.1250/-
-ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ನುಳಿಯಾಲು ಸಭಾಭವನ ಉಚಿತ, ಕೇವಲ ನಿರ್ವಹಣೆ ವೆಚ್ಚ ಮಾತ್ರ
-ಹೆಚ್ಚಿನ ಮಾಹಿತಿಗಾಗಿ 9611411347 ನಂಬರಿಗೆ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here