ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪ್ರೇರಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶಿಕ್ಷಕನಿಗೆ ಸಂವೇದನೆಗಳು ಬಹಳ ಮುಖ್ಯ – ಕೊಂಕೋಡಿ ಕೃಷ್ಣ ಭಟ್

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ಒಂದು ದಿನದ ಪುನಶ್ಚೇತನಾ ಶಿಬಿರವನ್ನು ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿತ್ತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ  ಕೆ.ಎಂ. ಕೃಷ್ಣ ಭಟ್ ಕೊಂಕೋಡಿಯವರು ಪುನಶ್ಚೇತನಾ ಶಿಬಿರದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಒಬ್ಬ ಶಿಕ್ಷಕ, ತನ್ನ ವೃತ್ತಿ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಆ ಸಂಸ್ಥೆಯು ಪ್ರಬಲವಾಗಿ ಬೆಳೆಯುತ್ತದೆ ಎಂದರು. ಒಬ್ಬ ಉತ್ತಮ ಶಿಕ್ಷಕರ ಕಾರ್‍ಯ, ವಿದ್ಯಾರ್ಥಿಗಳೊಡನೆ ಅರ ನಡವಳಿಕೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಶಿಕ್ಷಕರ ಜವಾಬ್ದಾರಿ ಹಾಗೂ ಸಕ್ರಿಯ ಭಾಗವಹಿಸುವಿಕೆ ಬಗ್ಗೆ ಕಿವಿಮಾತು ಹೇಳಿದರು

ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ  ವಿಶ್ವೇಶ್ವರ ಭಟ್, ಬಂಗಾರಡ್ಕ ಇವರು ಕಾಲೇಜಿನ ಉನ್ನತಿಗಾಗಿ ಹೊಸ ಯೋಜನೆಗಳ ಕುರಿತು ಚರ್ಚಿಸಿದರು. ಸಂಚಾಲಕರಾದ  ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು. ಸದಸ್ಯರುಗಳಾದ  ರವಿ ಮುಂಗ್ಳಿಮನೆ,  ನರಸಿಂಹ ಪೈ, ಉಷಾ ಭಟ್ ಮುಳಿಯ,  ಜಯಂತಿ ನಾಯಕ್,  ಸನತ್ ಕುಮಾರ್ ರೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಗ್ರಂಥಾಲಯಕ್ಕೆ ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರೀಯ ವಿಭಾಗದ ನಿವೃತ್ತ ಅಭಿಯಂತರರಾದ  ಚಂದ್ರಶೇಖರ್ ಭಟ್‌ರವರು ಸಿವಿಲ್ ವಿಭಾಗಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ  ಎಂ. ಗೋಪಿನಾಥ ಶೆಟ್ಟಿ ನಡೆಸಿಕೊಟ್ಟರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.