ಅರಂತೋಡು : ಪದವಿ ವ್ಯಾಸಂಗಕ್ಕೆ ಲಂಡನ್ ಗೆ ತೆರಳಲಿರುವ ಟಿ.ಎಂ ಶಾಝ್ ತೆಕ್ಕಿಲ್ ರವರಿಗೆ ಬೀಳ್ಕೊಡುಗೆ

0

 

ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು ಹಾಗು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ನ ಗೌರವಾಧ್ಯಕ್ಷರಾದ ಟಿ.ಎಂ ಶಾಹೀದ್ ತೆಕ್ಕಿಲ್ ರವರ ಸುಪುತ್ರ ಹಾಗು ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿ ಟಿ.ಎಂ ಶಾಝ್ ತೆಕ್ಕಿಲ್ ರವರು ಪದವಿ ವ್ಯಾಸಂಗಕ್ಕೆ ಲಂಡನ್ ಗೆ ತೆರಳಲಿರುವ ಸಂದರ್ಭದಲ್ಲಿ ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಅರಂತೋಡು ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ದುವಾ ನೆರವೇರಿಸಿ ಟಿ.ಎಂ ಶಾಝ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸದರ್ ಬಹು|ಸಹದ್ ಫೈಝಿ, ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ ಹರಿ, ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಖಾದರ್ ಪಟೇಲ್, ಕೆ.ಎಂ. ಅಬೂಬಕರ್ ಪಾರೆಕ್ಕಲ್, ಎ.ಹನೀಪ್ ಆಶಿಕ್ ಅರಂತೋಡು, ತಾಜುದ್ದೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here