ಪುತ್ತೂರು: ದರ್ಬೆಯಲ್ಲಿರುವ ಹಿತ ಆಸ್ಪತ್ರೆ ಮತ್ತು ರಾಜೇಶ್ ಪವರ್ ಪ್ರೆಸ್ ಎದುರುಗಡೆ ಇರುವ ಕಟ್ಟಡದಲ್ಲಿ ಜ. 17ರಂದು ಬ್ರಾಂಡೆಡ್ ಪಾದರಕ್ಷೆಗಳ ಮಳಿಗೆ ‘ವೈಟ್ ಶೂ’ ಮಳಿಗೆ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಕಟ್ಟಡದ ಮಾಲಕ ಅರುಣ್ ಕುಮಾರ್ ರೈ ಉದ್ಘಾಟಿಸಿದರು. ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆ ಕಾಲಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿ ಅವರು ಶುಭ ಹಾರೈಸಿದರು.
ಗಣೇಶ್ ಟ್ರೇಡರ್ಸ್ ಮಾಲಕ ವಾಮನ್ ಪೈ ಮೊದಲ ಖರೀದಿ ಮಾಡಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಯಂ.ಜಿ. ರಿಯಾಜ್ ದುವಾ ಆಶೀರ್ವಚನಗೈದರು. ಡಾ.ಭಾಸ್ಕರ್, ಡಾ.ಎ.ಕೆ ರೈ, ದರ್ಬೆ ಚಪ್ಪಲ್ ಬಜಾರ್ ಮಾಲಕ ಯಂ.ಜಿ ರಫೀಕ್, ವಿಷ್ಣುಪ್ರಸಾದ್ ಅಟೋ ಮೊಬೈಲ್ ಮಾಲಕ ವಿಷ್ಣು ಪ್ರಸಾದ್, ಮಂಗಳೂರು ಫರ್ನಿಚರ್ ಮಾಲಕ ಜಬ್ಬಾರ್ ಕೂರ್ನಡ್ಕ, ಉಪ್ಪಿನಂಗಡಿ ಶೂ ಬಜಾರ್ ಮಾಲಕ ಜಬ್ಬಾರ್ ಉಪ್ಪಿನಂಗಡಿ, ಬುಶ್ರಾ ಟವರ್ ಮಾಲಕ ಶಂಶುದ್ದಿನ್, ಇಬ್ರಾಹಿಂ, ಗಣೇಶ್ ಶೆಟ್ಟಿ, ಹರಿಪ್ರಸಾದ್, ಶಿವಪ್ರಸಾದ್ ದಂಪತಿ, ಝೇವಿಯರ್ ಡಿಸೋಜ, ಎ.ಜೆ ರೈ, ಸದಾನಂದ, ಜಯರಾಜ್ ಭಂಡಾರಿ, ಬೂಟ್ ಕ್ಯಾಂಪ್ ಮಾಲಕ ಮಜೀದ್, ಇಸ್ರಾ ಡ್ರೆಸ್ ಮಾಲಕ ಸಿನಾನ್, ಯಂ.ಜಿ ರಹೀಮ್ ಮತ್ತಿತರರು ಭೇಟಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಅಥಿತಿ ಗಳನ್ನು ಸ್ವಾಗತಿಸಿ ಮಾತನಾಡಿದ ಸಂಸ್ಥೆಯ ಮಾಲಕ, ಹಿರಿಯ ಉದ್ಯಮಿ ರಜಾಕ್ ಮಠ ಕಳೆದ ಹನ್ನೆರಡು ವರ್ಷಗಳ ಮೊದಲು ಯಂ.ಟಿ ರಸ್ತೆಯಲ್ಲಿರುವ ದಿನೇಶ್ ಭವನ ಕಟ್ಟಡದಲ್ಲಿ ವೈಟ್ ಶೂ ಮಳಿಗೆ ಎಲ್ಲಾ ಬ್ರಾಂಡೆಡ್ ಕಂಪನಿಗಳ ಪಾದರಕ್ಷೆಗಳನ್ನು ಒಂದೇ ಸೂರಿನಡಿಯಲ್ಲಿ ಮಾರಾಟ ಮಾಡಿದ್ದ ಸಂಸ್ಥೆ ಎಂದು ಹೆಗ್ಗಳಿಕೆ ಗಳಿಸಿತ್ತು. ಇದೀಗ ದರ್ಬೆಯಲ್ಲಿ ಗ್ರಾಹಕರ ವಿಶ್ವಾಸಾರ್ಹ ಸೇವೆಗೆ ಸಿದ್ಧಗೊಂಡಿರುವ ವೈಟ್ ಶೂ ಎಲ್ಲಾ ಬ್ರಾಂಡೆಡ್ ಕಂಪನಿಗಳ ಚಪ್ಪಲಿಗಳು ಮಹಿಳೆಯರ, ಮಕ್ಕಳ ಮತ್ತು ಪುರುಷರ ಎಲ್ಲಾ ಸೈಜ್ ಪಾದರಕ್ಷೆಗಳು ನಮ್ಮಲ್ಲಿ ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.