ಬೆಳ್ಳಾರೆ ಜೇಸೀ ಸಪ್ತಾಹದಲ್ಲಿ ಡಾ.ನಾರಾಯಣ ಶೇಖ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ

0

 

ಜೇಸಿ ಸಪ್ತಾಹದ ಅಂಗವಾಗಿ ಎರಡನೇ ದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಡಾ. ನಾರಾಯಣ ಶೇಖ ಟ್ರಸ್ಟ್ ವತಿಯಿಂದ ನೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಮಕ್ಕಳಿಗೆ ಚಿಂತಕರು ಶಿಕ್ಷಕರು ಅರವಿಂದ ಚೊಕ್ಕಾಡಿಯವರು ಶಿಕ್ಷಣ ಮತ್ತು ನೀತಿಯ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ನಾರಾಯಣ್ ಶೇಖ ಟ್ರಸ್ಟ್ ನ ಡಾ .ಜಯಶಂಕರ ಶೇಖ ಮತ್ತು ಅವರ ಧರ್ಮಪತ್ನಿಗೆ ಜೆಸೀ ಮತ್ತು ಶಾಲೆಯ ಪರವಾಗಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಭಾಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷೆ ನಿರ್ಮಲಾ ಜಯರಾಮ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ನಾರಾಯಣ್ ಶೇಖ ಟ್ರಸ್ಟನ ಜಯಶಂಕರ್ ಶೇಖ ಮತ್ತು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀನಾಥ್ ಬಾಳಿಲ ಹಾಗೂ ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಕೆಪಿಎಸ್ ಸ್ಕೂಲಿನ ಮುಖ್ಯ ಗುರುಗಳಾದ ಮಾಯಿಲಪ್ಪ, ಜೆ ಸಿ ಬಂಧುಗಳು ಅಧ್ಯಾಪಕರ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here