3 ವರ್ಷ ವೃತಾಚರಣೆಯಲ್ಲಿ ಮಹಾಲಿಂಗೇಶ್ವರ ದೇವರ ಆರಾಟದೊಂದಿಗೆ ಹೋಗಿ ದೇವಳಕ್ಕೆ ಬಂದ ಭಕ್ತರು ಪಾನಕ ಪ್ರಸಾದ ಸ್ವೀಕರಿಸಿದರೆ ವಾಕ್‌ಸಿದ್ಧಿ ಲಭಿಸುತ್ತದೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸತತವಾಗಿ ಮೂರು ವರ್ಷ ವೃತಾಚರಣೆಯೊಂದಿಗೆ ಮಹಾಲಿಂಗೇಶ್ವರ ದೇವರ ಆರಾಟ(ಅವಭೃತ ಸ್ನಾನ)ಕ್ಕೆ ತೆರಳಿ ಉತ್ಸವದೊಂದಿಗೆ ದೇವಳಕ್ಕೆ ವಾಪಸಾಗುವ ಭಕ್ತರು ದೇವರ ನೈವೇದ್ಯದ ಬಳಿಕ ಪ್ರಸಾದ ರೂಪದಲ್ಲಿ ಪಾನಕ ಸ್ವೀಕಾರ ಮಾಡಿದರೆ ಮಾತಿನ ವಿಕಾರಗಳೆಲ್ಲಾ ಪರಿಹಾರ ಆಗಿ ವಾಕ್‌ಸಿದ್ಧಿ ಲಭಿಸಲಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.


ನಾಡಿನ ಖ್ಯಾತ ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ಮತ್ತು ಡಾ|ವಳಕ್ಕುಂಜ ಮುರಳಿಕೃಷ್ಣ ಭಟ್ ನೇತೃತ್ವದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜ.19ರಂದು ಮುಂದುವರಿದ ಅಷ್ಟಮಂಗಲ ಪ್ರಶ್ನೆಯಲ್ಲಿ ವಿಮರ್ಶೆಗಳು ನಡೆಯಿತು.ಪುತ್ತೂರಿನ ಅವಭೃತ ಬಹಳ ಪ್ರಸಿದ್ದಿ ಪಡೆದಿದೆ.ಅವಭೃತ ಸ್ನಾನಕ್ಕೆ ಹೋಗಿ ದೇವಸ್ಥಾನಕ್ಕೆ ವಾಪಸಾದ ಭಕ್ತರ ಆಯಾಸಕ್ಕೆ ಕೊಡುವ ಪಾನಕವನ್ನು ಮೊದಲು ದೇವರ ನೈವೇದ್ಯಕ್ಕೆ ಬಳಸುವ ಕುರಿತು ವಿಮರ್ಶೆ ನಡೆಯಿತು.ದೈವಜ್ಞರು ಮಾತನಾಡಿ ಸತತವಾಗಿ ಮೂರು ವರ್ಷ ಶ್ರೀ ದೇವರ ಜೊತೆ ಅವಭೃತ ಸ್ನಾನಕ್ಕೆ ತೆರಳಿ ಅಲ್ಲಿ ಸ್ನಾನ ಮಾಡಿ ದೇವರ ಜೊತೆಯಲ್ಲೇ ಬಂದು ದೇವರಿಗೆ ನೈವೇದ್ಯದ ಬಳಿಕ ದೇವರ ಪ್ರಸಾದ ರೂಪದಲ್ಲಿ ಪಾನಕವನ್ನು ಯಾರು ಸ್ವೀಕಾರ ಮಾಡುತ್ತಾರೋ ಅವರಿಗೆ ಮಾತಿನಲ್ಲಿ ತೊದಲ್ನುಡಿ ಇದ್ದಲ್ಲಿ, ಮಾತಿನಲ್ಲಿ ಅಸ್ಪಷ್ಟತೆ ಇದ್ದಲ್ಲಿ, ಅಸ್ಪಷ್ಟತೆ, ಮಾತಿನ ವಿಕಾರಗಳೆಲ್ಲಾ ಪರಿಹಾರ ಆಗುತ್ತದೆ ಎಂದು ನುಡಿದರು.

ಅವಭೃತ ಸ್ನಾನಕ್ಕೆ ವೃತಶೀಲತೆಯನ್ನು ಪಾಲಿಸಿ: ಅವಭೃತ ಸ್ನಾನಕ್ಕೆ ಭಕ್ತರು ತೆರಳುವಾಗ ಸೀಯರು ಹೋಗುವ ವಿಚಾರದಲ್ಲೂ ವಿಮರ್ಶೆಗಳು ನಡೆಯಿತು.ಈ ವೇಳೆ ದೈವಜ್ಞರು ಮಾತನಾಡಿ ಹಿಂದಿನ ಸಂಪ್ರದಾಯ ಆಚರಣೆಗಳು ಮಾಡಿಕೊಂಡು ಬರಬೇಕೆಂಬುದು ನಮ್ಮ ಅಭಿಪ್ರಾಯ.ದೇವಸ್ಥಾನದಲ್ಲಿ ಹೊಸದಾಗಿ ಉತ್ತೇಜನ ಬೇಡ.ಇಲ್ಲಿ ಗುರು ಮೂರರಲ್ಲಿ ಇರುವುದರಿಂದ ಎಷ್ಟೋ ಸಂಪ್ರದಾಯಗಳು ವ್ಯತ್ಯಾಸ ಆಗಿದೆ. ಹಾಗಾಗಿ ಯಾರು ಹೋಗಬಾರದು, ಯಾರು ಹೋಗಬೇಕೆಂಬ ಸಂದೇಹ ಬೇಡ.ವೃತ ಶುದ್ದಿಯಲ್ಲಿದ್ದು ಹೋಗಬಹುದೆಂದರಲ್ಲದೆ, ಇಲ್ಲಿ ಉತ್ತೆಜನ ಬೇಡ, ತಿರಸ್ಕಾರವೂ ಬೇಡ. ವಿರೋಧವೂ ಬೇಡ.ಅವರವರ ಬುದ್ದಿಚಿಂತನೆಗೆ ಯಾವ ರೀತಿ ತೋರುತ್ತದೆ ಆ ರೀತಿಯಾಗಿ ತೀರ್ಮಾನ ಮಾಡಲು ಪರಿಪೂರ್ಣ ಸ್ವಾತಂತ್ರವಿದೆ.ಅದರೆ ವೃತಶೀಲರಾಗಿರಬೇಕು ಎಂದರು.

ಆಡಳಿತ ಸಮಿತಿ ಸಂಗಮ ಕ್ಷೇತ್ರದಲ್ಲಿ ಸ್ನಾನ: ಮಹಾಲಿಂಗೇಶ್ವರ ದೇವರು ಹಿಂದೆ ಉಪ್ಪಿನಂಗಡಿ ಸಂಗಮಕ್ಷೇತ್ರದಲ್ಲಿ ಅವಭೃತ ಸ್ನಾನಕ್ಕೆ ಹೋಗುತ್ತಿದ್ದರೆಂಬ ವಿಚಾರಕ್ಕೆ ಸಂಬಂಧಿಸಿ ಅಲ್ಲಿಂದ ವೀರಮಂಗಲಕ್ಕೆ ಅವಭೃತಕ್ಕೆ ಹೋಗಲು ಕಾರಣವೇನು ಎಂಬ ವಿಮರ್ಶೆಯ ಸಂದರ್ಭ, ಉಪ್ಪಿನಂಗಡಿಯಿಂದ ವೀರಮಂಗಲಕ್ಕೆ ಬಲಪ್ರಯೋಗವಾಗಿದೆಯೋ, ವಿರೋಧದ ವ್ಯವಸ್ಥೆಯಲ್ಲಾದ ಬದಲಾವಣೆಯೋ, ಉಪ್ಪಿನಂಗಡಿ ದಾರಿಯಲ್ಲಿ ಘೋರವಾದ ದರೋಡೆ ತೊಂದರೆಯೋ, ಇಲ್ಲಿನ ಆಡಳಿತ ಮಾಡಿಕೊಂಡವರ ಒತ್ತಡವೋ ಎಂದು ದೈವಜ್ಞರು ವಿಚಾರ ಮಂಡಿಸಿದರು.ಆದರೂ ಉಪ್ಪಿನಂಗಡಿಗೆ ಹೋಗಬೇಕೆಂದು ಮಹಾಲಿಂಗೇಶ್ವರ ದೀಕ್ಷೆಯಲ್ಲಿದ್ದಾರೋ ಎಂಬ ವಿಚಾರ ಪ್ರಸ್ತಾಪ ಆದಾಗ ಕಳೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಂತೆ ದೇವಳದ ವತಿಯಿಂದ ಪುತ್ತೂರು ಉತ್ಸವ ಸಂದರ್ಭ ಉಪ್ಪಿನಂಗಡಿ ದೇವಸ್ಥಾನಲ್ಲಿ ಸೇವೆ ಮಾಡಿಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದರು.ಹಾಗಿದ್ದಲ್ಲಿ ಮುಂದಿನ ದಿನ ಇಲ್ಲಿನ ಆಡಳಿತ ಮಂಡಳಿ ಉತ್ಸವದ ಮೊದಲು ಉಪ್ಪಿನಂಗಡಿ ಸಂಗಮಕ್ಷೇತ್ರದಲ್ಲಿ ಸಂಕಲ್ಪ ಸ್ನಾನ ಮಾಡಬೇಕೆಂದು ದೈವಜ್ಞರು ನುಡಿದರು.

ಸ್ಮಶಾನದಾವರಣದಲ್ಲಿನ ಬಿಲ್ವಪತ್ರೆಗೆ ಪ್ರಾಶಸ್ತ್ಯವಿದೆ: ದೇವಳದಲ್ಲಿನ ಉದ್ಯಾನವನ ನಾಶ ಮಾಡಿದ್ದು ಸರಿಯಲ್ಲ.ತುಳಸಿಗಿಡ, ಕೇದಗೆ, ಬಿಲ್ವ ಮರದ ನಾಶವಾಗಿದೆ.ಹಾಗಿದ್ದರೂ ಸ್ಮಶಾನದ ಒಳಗೆ ಪುರಾತನವಾದ ಬಿಲ್ವಪತ್ರೆ ಮರವಿದೆ.ಅಲ್ಲಿ ಒಂದಲ್ಲ ಎರಡು ಇದೆ ಎಂದು ಪ್ರಶ್ನೆಯಲ್ಲಿ ಕಂಡು ಬಂತು. ಈ ಕುರಿತು ವಿಮರ್ಶೆ ನಡೆದಾಗ ಸ್ಮಶಾನದ ಆವರಣದಲ್ಲಿ ಬಿಲ್ವಪತ್ರೆ ಮರ ಇರುವುದು ಗಮನಕ್ಕೆ ಬಂತು.

ದೇವಳದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಬೇಕು: ಮಹಾಶಕ್ತಿ ಪಾರ್ವತಿ ಮಹಾಕಾಳಿ ಸ್ವರೂಪದಲ್ಲಿದ್ದಾರೆ.ಈ ನಿಟ್ಟನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸಂತಕಾಲದಲ್ಲಿ ಗಿರಿಜಾ ಕಲ್ಯಾಣೋತ್ಸವ ವಿಜ್ರಂಭಣೆಯಿಂದ ನಡೆಯಬೇಕು. ಆ ದಿವಸ ಭಕ್ತರಿಗೆ ಅನ್ನಸಂತರ್ಪಣೆ ನಡೆಯಬೇಕು.ಗಿರಿಜಾ ಕಲ್ಯಾಣೋತ್ಸವ ಜನಮಾನಸಕ್ಕೆ ತಲುಪಬೇಕು ಎಂದು ದೈವಜ್ಞರು ನುಡಿದರು.

ದೇವರ ಸೇವಾ ವ್ಯವಸ್ಥೆಯಲ್ಲಿರುವ ಪರಂಪರೆ ಒಟ್ಟಾಗಬೇಕು: ದೇವರ ಬೇರೆ ಬೇರೆ ಸೇವಾ ವ್ಯವಸ್ಥೆಯಲ್ಲಿರುವ ಅರ್ಚಕರು, ಚಾಕ್ರಿಯವರು, ಮಾರಾರಿಗಳು, ಜೈನ ಪರಂಪರೆಯವರು, ಗಾಣಿಗ ಸಮುದಾಯದವರು, ಏಳು ಪ್ರಧಾನವಾದ ಗುತ್ತುಗಳು ಸೇರಿದಂತೆ ವಿವಿಧ ಸೇವಾ ಪರಂಪರೆಯಲ್ಲಿರುವ ಎಲ್ಲರಿಗೂ ಪ್ರತ್ಯೇಕವಾದ ಸೇವಾ ವ್ಯವಸ್ಥೆ ಪರಂಪರೆಯಲ್ಲಿತ್ತು.ಇವತ್ತು ಪ್ರತಿಯೊಂದು ಪರಿಚಾರಕ ವೃತ್ತಿಯೂ ಕೂಡಾ ಅಧಪತನ ದಾರಿಯಲ್ಲಿ ಹೋಗುತ್ತಿದೆ.ಎಲ್ಲರು ಕೂಡಾ ಅವರವರ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಕಲಿತುಕೊಂಡು ಅವರಲ್ಲಿರುವ ದೌರ್ಬಲ್ಯಗಳೇನು, ಸಮಸ್ಯೆಗಳೇನು?, ಅವರ ಆರಾಧನೆ ಸಂಪ್ರದಾಯದ ವೈಪರೀತ್ಯಗಳೇನು?, ಅವರಲ್ಲಿ ಪೂರ್ವಜರಿಂದ ಬಂದ ಪಾರಂಪರ್‍ಯ ಏನು ಎಂದು ಸರಿಯಾಗಿ ಚಿಂತನೆ ಮಾಡಿಕೊಂಡು ತದನಂತರ ದೇವತಾ ಕೆಲಸ ಮಾಡಿದರೆ ಕ್ಷೇಮವಿದೆ.ಈ ನಿಟ್ಟಿನಲ್ಲಿ ಛಿದ್ರವಾಗಿರುವ ಸಮುದಾಯಗಳು ಒಟ್ಟಾಗಬೇಕು.ಕರ್ಮದಲ್ಲಿ ಅಽಕಾರ ಮಾಡಿಕೊಂಡು -ಲಾಪೇಕ್ಷೆ ಇಲ್ಲದೆ ಪ್ರವರ್ತನೆ ಮಾಡಬೇಕು.ಶಕ್ತಿಗೆ ಯಾವುದೂ ಅಸಾಧ್ಯವೆಂಬುದು ಇಲ್ಲ.ನಮ್ಮ ಪ್ರವೃತ್ತಿಯಲ್ಲಿ ಬಲ ಮತ್ತು ವಿಶ್ವಾಸ ಪ್ರವೃತ್ತಿಯೇ ನಮ್ಮ ಪ್ರಧಾನವಾದ ಧರ್ಮ ಎಂದು ಸೇವೆ ಮಾಡಿದಾಗ ಎಲ್ಲಾ ವ್ಯವಸ್ಥೆಗಳು ಒಂದೊಂದೇ ನಮ್ಮ ಸಮೀಪಕ್ಕೆ ಬಂದೀತು ಎಂದ ದೈವಜ್ಞರು, ದೇವಳದ ವ್ಯವಸ್ಥೇಯಲ್ಲಿ ವರ್ತಮಾನ ಕಾಲದಲ್ಲಿ ಸರಕಾರ ಎಷ್ಟು ಜವಾಬ್ದಾರಿ, ಕರ್ತವ್ಯವನ್ನು ಮಾಡುತ್ತಿವೆಯೋ ಅಷ್ಟೇ ಕರ್ತವ್ಯಗಳನ್ನು ಒಂದು ಕಾಲದಲ್ಲಿ ಗುತ್ತಿನ ಮನೆತನಗಳು ಮಾಡುತ್ತಿತ್ತು.ಆ ರೀತಿಯ ಗುತ್ತಿನ ಮನೆತನಗಳು ಅವರ ಆರಾಧನೆಯೂ ಅವನತಿಯ ದಾರಿಯಲ್ಲಿ ಉಂಟು. ದೇವತಾರಾಧನೆಯನ್ನು ಸರಿಪಡಿಸಿ ಒಂದು ದಾರಿಯಲ್ಲಿ ಹೋದರೆ ಕ್ಷೇಮ, ದೇವತಾರಾಧನೆಗೆ ಸಂಬಂಽಸಿ ದುರಿತಗಳು ನಿವಾರಣೆಯಾಗಿ ಕುಟುಂಬಗಳು ಮೇಲೆ ಬಂದ ವಿಚಾರವೂ ಇದೆ ಎಂದು ಹೇಳಿದರು.ಪ್ರಶ್ನಾ ಚಿಂತನೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸದಸ್ಯರು, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ವಿದ್ವಾನ್ ಪಂಜ ಭಾಸ್ಕರ್ ಭಟ್, ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್, ಗೋಪಾಲಕೃಷ್ಣ ಭಟ್, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮಶ್ರೀ ಕುಂಟಾರು ಶ್ರೀಧರ ತಂತ್ರಿ, ಪ್ರಧಾನ ಅರ್ಚಕರಾದ ವೇ.ಮೂ.ವಿ.ಎಸ್ ಭಟ್, ವೇ.ಮೂ.ವಸಂತ ಕೆದಿಲಾಯ, ಬ್ರಹ್ಮವಾಹಕ ಪ್ರೀತಂ ಪುತ್ತೂರಾಯ, ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಗಿರೀಶ್ ತಂತ್ರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅಸ್ರಣ್ಣ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಟ್ಟೋಜ ಮನೆತನದ ಸುಬ್ರಹ್ಮಣ್ಯ ನಟ್ಟೋಜ, ಹಿರಿಯರಾದ ಕಿಟ್ಟಣ್ಣ ಗೌಡ,ಗುತ್ತು ಮನೆತನದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.