ಶಿವಂ ಕಂಪ್ಯೂಟರ್‍ಸ್, ಸೆಕ್ಯೂರಿಟಿ ಸಿಸ್ಟಮ್ಸ್ ಸಂಸ್ಥೆಯ ವಿಸ್ತೃತ ಮಳಿಗೆ ದರ್ಬೆಯಲ್ಲಿ ಶುಭಾರಂಭ

0

ಪುತ್ತೂರು: ಗುಣಮಟ್ಟ ಮತ್ತು ಉತ್ತಮ ಸೇವೆಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಂ ಕಂಪ್ಯೂಟರ್‍ಸ್ ಮತ್ತು ಸೆಕ್ಯೂರಿಟಿ ಸಿಸ್ಟಮ್ಸ್ ಸಂಸ್ಥೆಯ ವಿಸ್ತ್ರತ ಮಳಿಗೆಯು ಸ್ಥಳಾಂತರಗೊಂಡು ಜ.20ರಂದು ದರ್ಬೆ ವೃತ್ತದ ಬಳಿಯ ಶ್ರೀ ಮಹಾಲಿಂಗೇಶ್ವರ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತ್ತು. ಹಿರಿಯರಾದ ಲೀಲಾವತಿ ಜಿ ರೈ ಡೆಂಬಾಳೆ ಅವರು ದೀಪಪ್ರಜ್ವಲಿಸಿದರು.


ಆಧುನಿಕ ಯುಗಕ್ಕೆ ಅಗತ್ಯದ ಸೇವೆ ಶಿವಂ ಮಾದರಿ:
ಸಂಸ್ಥೆಯ ವಿಸ್ತೃತ ಮಳಿಗೆಯನ್ನು ಉದ್ಘಾಟಿಸಿದ ಈಶ್ವಮಂಗಲ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತ ಮೂಡೆತ್ತಾಯ ಅವರು ಮಾತನಾಡಿ ಆಧುನಿಕ ಯುಗಕ್ಕೆ ತಕ್ಕಂತೆ ಅಗತ್ಯ ಸೇವೆಯನ್ನು ಶಿವಂ ಕಂಪ್ಯೂಟರ್‍ಸ್, ಸೆಕ್ಯೂರಿಟಿ ಸಿಸ್ಟಮ್ಸ್ ಸುದರ್ಶನ್ ರೈ ಅವರು ಪೂರೈಸುತ್ತಿದ್ದಾರೆ. ನಮ್ಮ ಕಾವಿನ ಸೊಸೈಟಿ ಮತ್ತು ಗಜಾನನ ಶಾಲೆಯಲ್ಲಿ ಕಂಪ್ಯೂರ್ ಸಿಸ್ಟಮ್‌ಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ತೋಟದ ಕೃಷಿಯನ್ನು ದೂರ ಊರಿನಿಂದ ಕೂತು ಕೇವಲ ಮೊಬೈಲ್‌ನಲ್ಲೇ ನಿರ್ವಹಣೆ ಮಾಡುವಂತಹ ಕಾಲಗಟ್ಟದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರಿನ ಗ್ರಾಹಕರು ಕೂಡಾ ಇವರ ಸಂಸ್ಥೆಯಿಂದ ಸೇವೆ ಪಡೆಯುತ್ತಿರುವುದು ಮಾದರಿ ಎಂದರು.

 

ಗುಣಮಟ್ಟದ ಸೇವೆಗೆ ಮಾದರಿ:
ರೋಟರಿ ಯುವ ಅಧ್ಯಕ್ಷ ಭರತ್ ಪೈ ಅವರು ಮಾತನಾಡಿ ಗುಣಮಟ್ಟ, ಶ್ರಮ, ಕರ್ತವ್ಯ ನಿಷ್ಠೆಯಿಂದಾಗಿ ಸಂಸ್ಥೆ ಅಭಿವೃದ್ಧಿಗೆ ಕಾರಣ. ಮುಂದೆ ಸಂಸ್ಥೆಯು ಒಂದು ವರ್ಷದಲ್ಲಿ ಹಲವು ಶಾಖೆಗಳನ್ನು ಆರಂಭಿಸುವಂತಾಗಲಿ ಎಂದು ಹೇಳಿದರು.

ದೊಡ್ಡ ಸಂಸ್ಥೆಯಾಗಿ ಮೂಡಿ ಬರಲಿ:
ಸರ್ವಿಸ್ ಸೆಂಟರ್ ಅನ್ನು ಉದ್ಘಾಟಿಸಿದ ನರಿಮೊಗರು ಶೆಟ್ಟಿಮಜಲಿನ ವರ್ಧಮಾನ್ ಜೈನ್ ಅವರು ಮಾತನಾಡಿ ಎಲ್ಲಾ ರೀತಿಯ ಸೇವಾ ವ್ಯವಸ್ಥೆಗಳನ್ನು ಹೊಂದಿರುವ ಸಂಸ್ಥೆ ಮುಂದೆ ಇನ್ನೂ ಉನ್ನತ ಮಟ್ಟದ ದೊಡ್ಡ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಹಾರೈಸಿದರು

ಗ್ರಾಹಕರ ಮನಸ್ಸು ಗೆದ್ದ ಸಂಸ್ಥೆ:
ಸೆಕ್ಯೂರಿಟಿ ಸಿಸ್ಟಮ್ ಉದ್ಘಾಟಿಸಿದ ಉದ್ಯಮಿ ಸಹಜ್ ರೈ ಬಳಜ್ಜ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಬೆಳೆಯುತ್ತಿರುವ ಸಂದರ್ಭದಲ್ಲಿ ಆಧುನಿಕ ವ್ಯವಸ್ಥೆಯ ಸೇವಾ ಸಂಸ್ಥೆ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಂಸ್ಥೆ ಜನತೆಯ ಮನಸ್ಸನ್ನು ಗೆದ್ದಿದೆ ಎಂದರು.

ಸದಾ ಗ್ರಾಹಕರ ಸೇವೆಯಲ್ಲಿ

ಸಂಸ್ಥೆಯ ಮಾಲಕ ಸುದರ್ಶನ್ ರೈ ನೀರ್ಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೦ ವರ್ಷಗಳಿಂದ ಗ್ರಾಹಕರಿಗೆ ಸಂತೃಪ್ತಿದಾಯಕ ಸೇವೆ ನೀಡುತ್ತಾ ಬಂದಿದೆ. ತ್ವರಿತಗತಿಯಲ್ಲಿ ಕಂಪ್ಯೂಟರ್ ದುರಸ್ತಿ ಮಾಡಿಕೊಡುವ ವ್ಯವಸ್ಥೆ ಇಲ್ಲಿದೆ ಅಲ್ಲದೆ ಕಛೇರಿ, ಮನೆಗಳಿಗೆ ಸಿಸಿ ಕ್ಯಾಮರಾ ಮತ್ತು ಕಂಪ್ಯೂಟರ್ ಅಳವಡಿಕೆ ಮಾಡಿಕೊಡುವ ವ್ಯವಸ್ಥೆ ಇದೆ. ಇಎಂಐ ಮೂಲಕ ಕಂಪ್ಯೂಟರ್, ಲ್ಯಾಪ್‌ಟಾಪ್ ಖರೀದಿಸುವ ಅವಕಾಶ ಗ್ರಾಹಕರಿಗೆ ನೀಡಲಾಗಿದೆ ಎಂದು ಹೇಳಿದರು.

ಗೌರವ: ವಿಸ್ತೃತ ಸಂಸ್ಥೆಯ ಕೆಲಸ ಕಾರ್ಯ ಮಾಡಿದ ಇಂಜಿನಿಯರ್ ಶ್ರವಣ್ ರೈ, ಇಲೆಕ್ಟ್ರಿಕ್ ಉದ್ಯಮಿ ಬ್ರಿಜೇಶ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಉದ್ಯಮಿ ಸಂತೋಷ್ ಕುಮಾರ್ ರೈ ಕೈಕಾರ, ವಾಮನ್ ಪೈ, ದೇವಾ ಟ್ರೇಡರ್‍ಸ್‌ನ ರವೀಂದ್ರನ್, ಸುದ್ದಿ ಮೀಡಿಯಾದ ವರದಿಗಾರ ದಾಮೋದರ್ ದುಂಡೋಲೆ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here