ಇಡ್ಕಿದು: ಸ್ನೇಹಿತನನ್ನು ಕರೆತರಲು ತೆರಳಿದ ವೇಳೆ ನಾಲ್ವರಿಂದ ಹಲ್ಲೆ ಆರೋಪ – ಪ್ರಕರಣ ದಾಖಲು

0

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಹೇಮಾಜೆ ಎಂಬಲ್ಲಿ ಸ್ನೇಹಿತನನ್ನು ಬಿಟ್ಟು ಬಂದು ಮರಳಿ ಆತನನ್ನು ಕರೆತರುವ ಸಲುವಾಗಿ  ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ನಾಲ್ವರ ತಂಡ ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಯುವಕನೋರ್ವ ವಿಟ್ಲ ಪೊಲೀಸ್ ಠಾಣೆಗೆ‌ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ನಿವಾಸಿ ಮಹಮ್ಮದ್ ರವರ ಪುತ್ರ ಅಬ್ದುಲ್ ಆಶಿಕ್ ದೂರು‌ ದಾರರಾಗಿದ್ದು, ಬಾಪುಂಞ , ಹಕೀಂ, ಹಂಝ್‌, ಅಶ್ರಫ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ನಾನು ಜ.17ರಂದು  ಮದ್ಯಾಹ್ನದ ವೇಳೆಗೆ ನನ್ನ ಗೆಳೆಯ ಶಮೀರನನ್ನು ನನ್ನ ಸ್ಕೂಟರನಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಹೇಮಾಜೆ ಎಂಬಲ್ಲಿಗೆ ಬಿಟ್ಟು ವಾಪಾಸು ಕರೆದುಕೊಂಡು ಹೋಗಲೆಂದು ಅಲ್ಲಿಯೇ ರಸ್ತೆಯ ಬದಿಯಲ್ಲಿ ಆತನ ಬರುವಿಕೆಯ ದಾರಿಗಾಗಿ ಕಾಯುತ್ತಾ ನಿಂತಿದ್ದೆ. ಈ  ವೇಳೆ  ಬಿಳಿ ಬಣ್ಣದ ಬೊಲೆರೋ ವಾಹನದಲ್ಲಿ ಬಂದ ಬಾಪುಂಞ , ಹಕೀಂ, ಹಂಝ್‌, ಅಶ್ರಫ್‌ ರವರು ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ಮಾಡಿ ಜೀವಬೆದರಿಕೆ ಒಡ್ಡಿದ್ದಾರೆ  ಎಂದು  ಅಬ್ದುಲ್ ಆಶಿಕ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here