ಮರ್ಕಂಜ: ಮೂವರ್ ದೈವಸ್ಥಾನದಲ್ಲಿ ನಾಟ್ಯ ತರಬೇತಿ ಉದ್ಘಾಟನೆ ಮತ್ತು ತಾಳಮದ್ದಳೆ

0

 

ಮರ್ಕಂಜ ಗ್ರಾಮದ ಬೊಮ್ಮಾರು ಶ್ರೀ ಮೂವರ್ ದೈವಸ್ಥಾನದಲ್ಲಿ ಸೆ.೪ ರಂದು ನಾಟ್ಯ ತರಬೇತಿ ಉದ್ಘಾಟನೆ ಮತ್ತು ಜಾಂಬವತಿ ಕಲ್ಯಾಣ ತಾಳಮದ್ದಳೆ ಊರಿನ ಹಿರಿಯ ಕಲಾವಿದರಿಂದ ನಡೆಯಿತು.


ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಳಮದ್ದಳೆಯ ಭಾಗವತರಾಗಿ ದಾಮೋದರ ಪಾಟಾಳಿ ಮಿತ್ತಡ್ಕ, ಶಶಾಂಕ್ ಎಲಿಮಲೆ, ಶ್ಯಾಂಪ್ರಸಾದ್ ಗುಂಡಿ, ಚೆಂಡೆ ಮದ್ದಳೆಯಲ್ಲಿ ಬಾಲಕೃಷ್ಣ ನಾಕ ಬೊಮ್ಮಾರು, ಸುಪ್ರೀತ್ ಗುಂಡಿ ಹಾಗೂ ಅರ್ಥದಾರಿಗಳಾಗಿ ರಾಮಕೃಷ್ಣರಾವ್ ರೆಂಜಾಳ, ನಾರಾಯಣಗೌಡ ಕಬ್ಬಿನಡ್ಕ, ಶ್ರೀನಿವಾಸರಾವ್ ದೇಶಕೋಡಿ, ಜಯಪ್ರಕಾಶ್ ಗುಂಡಿ, ಐತಪ್ಪಗೌಡ ಬೊಮ್ಮಾರು, ಚಕ್ರತಾಳದಲ್ಲಿ ಭವಿತ್ ಕುಮಾರ್ ಬಿ. ಭಾಗವಹಿಸಿದ್ದರು.


ಎಡಮಂಗಲದ ಲಕ್ಷ್ಮಣ ಆಚಾರ್ಯ ಅವರಿಂದ ನಾಟ್ಯ ತರಬೇತಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಊರವರು, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here