ಆಲಂಕಾರು: ರಾಮಕುಂಜ ಗ್ರಾಮದ ಸಂಪ್ಯಾಡಿ ಪಟ್ಟೆ ಅಂಗಾರ ಗೌಡ (74.ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.20 ರಂದು ನಿಧನರಾದರು.ಮೃತರು ಪ್ರಗತಿಪರ ಕೃಷಿಕರಾಗಿದ್ದು ಉತ್ತಮ ಹೈನುಗಾರಗಿದ್ದು ಶ್ರೀ ರಾಮ ಅಶ್ವಥ ಕಟ್ಟೆ ಪೂಜಾ ಸಮಿತಿ ಸಂಪ್ಯಾಡಿ ರಾಮಕುಂಜದ ಸಮಿತಿಯ ಸ್ಥಾಪಕ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಲವು ವರ್ಷ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ ಯಶೋದ, ಮಗ ಬಾಲಕೃಷ್ಣ ಗೌಡ, ಮಗಳಾಂದಿರಾದ ಭವಾನಿ, ಜಯಂತಿ, ಭಾರತಿ, ನಾಗವೇಣಿ ಹಾಗೂ ಸೊಸೆ ಸುಜಾತ ಬಾಲಕೃಷ್ಣ ಗೌಡ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.