ವಿಟ್ಲ ಸಿಟಿಗೊಂದು `ಸ್ಮಾರ್ಟ್ ಸಿಟಿ’ ಶಾಪಿಂಗ್ ಸೆಂಟರ್ ಫ್ಲ್ಯಾಟ್, ಶಾಪ್‌ಗಳ ಬುಕ್ಕಿಂಗ್ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಪೇಟೆ ಪಟ್ಟಣಗಳು ಬೆಳೆಯುತ್ತಾ ಹೋದಂತೆ ಆಧುನಿಕ ವ್ಯಾಪಾರ ವ್ಯವಹಾರದ ವಿಧಾನಗಳು ಒಂದೊಂದಾಗಿ ಆರಂಭಗೊಳ್ಳುತ್ತಾ ಹೋಗುವುದರಿಂದ ನಗರದ ಅಭಿವೃದ್ಧಿ ತೀವ್ರಗತಿಯ ವೇಗವನ್ನು ಪಡೆಯುತ್ತವೆ. ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯೂ ಇದರಿಂದ ಹೊರತಾಗಿಲ್ಲ. ಭವಿಷ್ಯದಲ್ಲಿ ಶೀಘ್ರದಲ್ಲಿಯೇ ತಾಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪಟ್ಟಣಗಳಲ್ಲಿ ಒಂದಾಗಿದೆ. ಈ ಪೇಟೆಯ ಹೃದಯ ಭಾಗದ ವಿಟ್ಲ ಪುತ್ತೂರು ರಸ್ತೆಯ ಬದಿಯಲ್ಲಿ ಬಹು ಮಹಡಿಯ ಸುಂದರ ಶಾಪಿಂಗ್ ಕಾಂಪ್ಲೆಕ್ಸ್ ಒಂದು ತಲೆ ಎತ್ತಿದೆ. ಬಸ್ಸು ನಿಲ್ದಾಣದಿಂದ ಕೇವಲ 100 ಮೀ ಅಂತರದಲ್ಲಿ ಸ್ಮಾರ್ಟ್ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್ ವೈವಿಧ್ಯಮಯ ವ್ಯಾಪಾರ ವ್ಯವಹಾರ ಸೇವೆಗೆ ಸಜ್ಜಾಗಿದೆ. ಬೇಸ್‌ಮೆಂಟ್, ಗ್ರೌಂಡ್, ಫಸ್ಟ್ ಹಾಗೂ ಸೆಕೆಂಡ್ ಫ್ಲೋರ್ ಗಳಲ್ಲಿ ಮಾಲ್ ವಿಸ್ತಾರಗೊಂಡಿದೆ.


ಸಂಸ್ಥೆಯ ಬಗ್ಗೆ: ಮಂಗಳೂರಿನ ಹೆಸರಾಂತ ಬಿಲ್ಡರ್ ಗಳಲ್ಲಿ ಒಂದಾದ ಎಸಿಇ ಪ್ರಮೋಟರ್ಸ್ & ಡೆವಲಪರ್ಸ್ ನ ನಿರ್ದೇಶಕರಾದ ಜಿತೇಶ್ ಜೈನ್ ಹಾಗೂ ದರ್ಶನ್ ಜೈನ್ ರವರ ಇದರ ರೂವಾರಿಗಳು. ಸಂಸ್ಥೆಯು 2010ರಲ್ಲಿ ಆರಂಭವಾಗಿದ್ದು, ಈಗಾಗಲೇ ಸುಮಾರು 11 ಪ್ರಾಜೆಕ್ಟ್ ಗಳು ಪೂರ್ಣಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಎರಡೂ ಕಡೆ ರಸ್ತೆ ಸಂಪರ್ಕ: ವಿಟ್ಲ – ಪುತ್ತೂರು ರಸ್ತೆ ಗ್ರೌಂಡ್ ಫ್ಲೋರ್ ಗೆ ಸಂಪರ್ಕ ಕಲ್ಪಿಸಿದರೆ, ಸಂತೆ ಮಾರುಕಟ್ಟೆ ರಸ್ತೆಯು ಪ್ರಥಮ ಮಹಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಗ್ರಾಹರಿಗೆ ಹಾಗೂ ಶಾಪ್ ಮಾಲಕರಿಗೆ ಇನ್ನಷ್ಟು ಪ್ರಯೋಜನವಾಗಿದೆ.

15 ಲಕ್ಷ ರೂ.ನಿಂದ ಶಾಪ್ ಗಳು ಲಭ್ಯ: ಫ್ಲ್ಯಾಟ್ ಹಾಗೂ ಶಾಪ್ ಗಳು ಸೇರಿ ಒಟ್ಟು 80 ಕೋಣೆಗಳು ಇದರಲ್ಲಿ ಲಭ್ಯವಿದೆ.

80 ಕಾರ್ ಪಾರ್ಕಿಂಗ್ ವ್ಯವಸ್ಥೆ: ವಿಟ್ಲ ಪೇಟೆ ಬೆಳಗ್ಗಿನಿಂದ ರಾತ್ರಿ ವರೆಗೆ ವಾಹನದಟ್ಟಣೆಯಿಂದ ಕೂಡಿರುವ ಪಟ್ಟಣವಾಗಿದೆ. ಇಲ್ಲಿನ ಯಾವೊಂದು ಅಂಗಡಿಗೆ ತೆರಳಬೇಕಾದರೂ ಇಲ್ಲಿ ವಾಹನ ಸವಾರರಿಗೆ ಪಾರ್ಕಿಂಗ್ ಸಮಸ್ಯೆ ಸದಾ ತಲೆನೋವಾಗಿ ಪರಿಣಮಿಸಿದೆ. ಆದರೆ ಈ ಕಾಂಪ್ಲೆಕ್ಸ್ ಈ ನಿಟ್ಟಿನಲ್ಲಿ ವಿಸ್ತೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಯೇ ನಿರ್ಮಿಸಲಾಗಿದೆ. ಏಕಕಾಲದಲ್ಲಿ 80 ರಷ್ಟು ಕಾರ್‌ಗಳನ್ನು ಪಾರ್ಕ್ ಮಾಡಬಹುದಾಗಿದೆ.

24ಗಂಟೆ ಜನರೇಟರ್, ಲಿಫ್ಟ್ ವ್ಯವಸ್ಥೆ: ನಿರಂತರ ವಿದ್ಯುತ್ ಸಂಪರ್ಕ ಇರುವುದು ಗ್ರಾಹಕರಿಗೆ ಮತ್ತಷ್ಟು ಖುಷಿ ನೀಡಲಿದೆ. 24 ಗಂಟೆ ಸಮಯ ವಿದ್ಯುತ್ ಜನರೇಟರ್ ವ್ಯವಸ್ಥೆ, ಹತ್ತಿ ಇಳಿಯಲು ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಫ್ಲ್ಯಾಟ್ 35 ಲಕ್ಷದಿಂದ ಲಭ್ಯ: ಇದರಲ್ಲಿರುವ   ಫ್ಲಾö್ಯಟ್‌ಗಳಿಗೆ ಅತ್ಯಂತ ಸ್ಪರ್ಧಾತ್ಮಕ ದರವಾದ ರೂ. 35 ಲಕ್ಷದಿಂದ ಆರಂಭಗೊಂಡು ವಿವಿಧ ಶ್ರೇಣಿಗಳಲ್ಲಿ ಲಭ್ಯವಿದ್ದು, ವಿಟ್ಲ ಪೇಟೆ ಮಧ್ಯಭಾಗದಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ.

ಭಾರೀ ಬೇಡಿಕೆ: ಸಂಸ್ಥೆಯ ಶಾಪಿಂಗ್ ಕಾಂಪ್ಲೆಕ್ಸ್ ಗೆ ವ್ಯಾಪಕ ಬೇಡಿಕೆ ಇದೆ. ಬೆಳೆಯುತ್ತಿರುವ ಪಟ್ಟಣಗಳಲ್ಲೊಂದಾದ ವಿಟ್ಲ ಪೇಟೆಯಲ್ಲಿ ಸಕಲ ವ್ಯವಸ್ಥೆಗಳನ್ನು ಹೊಂದಿರುವ ಶಾಪಿಂಗ್ ಮಹಲ್ ನಿರ್ಮಾಣಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಆದ್ದರಿಂದ ಆರಂಭದ ದಿನಗಳಿಂದಲೇ ಈ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಶಾಪ್ ಕೊಂಡುಕೊಳ್ಳಲು ಜನ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬ್ಯಾಂಕ್, ಸೂಪರ್ ಮಾರ್ಕೇಟ್, ಚಿನ್ನಾಭರಣದ ಅಂಗಡಿ, ಎಟಿಎಂ, ಎಲೆಕ್ಟ್ರಾನಿಕ್ ಅಂಗಡಿಗಳಿಂದ ವ್ಯಾಪಕ ಬೇಡಿಕೆ ಬಂದಿದೆ. ಕಾಂಪ್ಲೆಕ್ಸ್ ನ 60% ಕೆಲಸ ಪೂರ್ಣಗೊಂಡಿದ್ದು, ಉಳಿದಂತೆ ಶೀಘ್ರದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಹೆಸರೇ ಸೂಚಿಸುವಂತೆ ವಿಟ್ಲ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಹೊಂದುವಲ್ಲಿ ಸ್ಮಾರ್ಟ್ ಸಿಟಿ ಶಾಪಿಂಗ್ ಸೆಂಟರ್ ಅಮೋಘ ಕೊಡುಗೆ ನೀಡಲಿದೆ ಎಂದು ಹೇಳಬಹುದಾಗಿದೆ.

ಫ್ಲ್ಯಾಟ್ ಮತ್ತು ಶಾಪ್‌ಗಳ ವಿಚಾರಣೆ ಮತ್ತು ಬುಕ್ಕಿಂಗ್‌ಗಾಗಿ9620380777/9845304044 ಗೆ ಕರೆಮಾಡಬಹುದಾಗಿದೆ. ಅಥವಾ ವಿಟ್ಲ ಶ್ರೀ ಚಂದ್ರನಾಥ ದೇವರ ಬಸದಿಯ ಮುಂಭಾಗದಲ್ಲಿರುವ ಸೆಂಟರ್‌ನ ಬುಕ್ಕಿಂಗ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಸೆಂಟರ್‌ನ ವಿಶೇಷತೆಗಳು:
80 ಕಾರ್ ಪಾರ್ಕಿಂಗ್ ವ್ಯವಸ್ಥೆ
24 ಗಂಟೆ ವಿದ್ಯುತ್ ಜನರೇಟರ್, ಲಿಫ್ಟ್ ವ್ಯವಸ್ಥೆ
ವಿಟ್ಲ ಬಸ್ ನಿಲ್ದಾಣಕ್ಕೆ ಅತೀ ಸಾಮಿಪ್ಯದಲ್ಲಿರುವ ಸೆಂಟರ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.