ರಾಮಕುಂಜ: ವಾರ್ಷಿಕ ಜಾತ್ರೆ-ನೇಮೋತ್ಸವ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೈವಗಳ ನೇಮೋತ್ಸವ ಜ.19  ಹಾಗೂ ಜ.20ರಂದು ನಡೆಯಿತು.

ಜ.18ರಂದು ಸಂಜೆ ದೇವರ ಅವಭೃತದ ಬಳಿಕ ರಾತ್ರಿ ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು. ಜ.19ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ನಾಗಾರಾಧನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಿತು. ಜ.20ರಂದು ಬೆಳಿಗ್ಗೆ ಶ್ರೀ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವದ ನೇಮ ನಡೆಯಿತು. ವಿಶ್ವನಾಥ ಪರವ ಹಳೆನೇರೆಂಕಿ( ಕಲೆಂಬಿತ್ತಾಯ), ಪುರುಷೋತ್ತಮ ವಿಟ್ಲ(ಕಲ್ಲುರ್ಟಿ), ಡೀಕಯ್ಯ ಹಳೆನೇರೆಂಕಿ( ಅಂಗಣ ಪಂಜುರ್ಲಿ), ಓಬಯ್ಯ ಹಳೆನೇರೆಂಕಿ(ರುದ್ರಚಾಮುಂಡಿ), ರಾಮಣ್ಣ ಶರವೂರು( ಶಿರಾಡಿ), ಗಂಗಾಧರ ಕೆಮ್ಮಾರ(ಗುಳಿಗ)ರವರು ನರ್ತನ ಸೇವೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ಪ್ರಧಾನ ಅರ್ಚಕ ಅನಂತ ಉಡುಪ, ಸಮಿತಿ ಸದಸ್ಯರಾದ ರಮೇಶ ರೈ ರಾಮಜಾಲು, ಯೋಗೀಶ್ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಶೈಲಜಾ ಆಳ್ವ ಗುತ್ತು, ವಿಮಲಾ ಕರುಣಾಕರ ಆರಿಂಜ, ಉತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here