ಕಬಕ: ಅಕ್ರಮ ಮಧ್ಯ ಮಾರಾಟದ ಬಗ್ಗೆ ದೂರು ನೀಡಿದರೆಂದು ಶಂಕಿಸಿ – ಹಾರ್ಡ್ ವೇರ್ ಅಂಗಡಿಯ ಮುಂಭಾಗದಲ್ಲಿರಿಸಿದ್ದ ಗ್ಲಾಸ್ ಗೆ ಹಾನಿ – ಠಾಣೆಗೆ ದೂರು

0

ವಿಟ್ಲ:ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದೇವೆಂದು ಆರೋಪಿಸಿ ಬಾರ್ ಮಾಲಕರ ನೇತೃತ್ವದಲ್ಲಿ ಸಿಬ್ಬಂದಿಗಳು ಗ್ಲಾಸ್&ಹಾಡ್೯ವೇರ್ ಅಂಗಡಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿ ಮೌಲ್ಯದ ಗ್ಲಾಸ್ ಗೆ ಹಾನಿ ಮಾಡಿದ್ದಾರೆಂದು ಆರೋಪಿಸಿ ಹಾಡ್೯ವೇರ್ ಅಂಗಡಿಯ ಮಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಡ್ಕಿದು ಗ್ರಾಮದ ಕಬಕದ ಮಹಾದೇವಿ ಗ್ಲಾಸ್&ಹಾಡ್೯ವೇರ್ ಮಾಲಕ ರಮೇಶ್ ಗೌಡರವರು ದೂರುದಾರರಾಗಿದ್ದಾರೆ.

ನಾನು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬಕದಲ್ಲಿ ಶ್ರೀ ಮಹಾದೇವಿ ಗ್ಲಾಸ್&ಹಾಡ್೯ವೇರ್ ಅಂಗಡಿಯನ್ನು ನಡೆಸುತ್ತಿದ್ದು,ನನ್ನ ಅಂಗಡಿಯ ಪಕ್ಕದಲ್ಲಿ ರಾಮಣ್ಣ ಪೂಜಾರಿ ಎಂಬವರ ಮಾಲಕತ್ವದ ಬಾರ್ ಇದ್ದು. ಬಾರ್ ಹೊರಗಡೆ ಮದ್ಯ ಕುಡಿಯಲೆಂದು ಅಕ್ರಮವಾಗಿ ಕೌಂಟರ್ ತೆರೆದಿದ್ದರು. ಇಲ್ಲಿ ಮದ್ಯ ಕುಡಿಯಲು ಬರುವವರು ನಮ್ಮ ಗೋಡೌನ್ ಮುಂಭಾಗದಲ್ಲೇ ಉಗುಳಿಕೊಂಡು ಹೋಗುತ್ತಿದ್ದಾರೆ.


ಈ ಬಗ್ಗೆ ನಾನು ಇಡ್ಕಿದು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದೆ. ಕೆಳದಿನಗಳ ಹಿಂದೆ ಕಫ್ರ್ಯೂ೯ ಸಂದರ್ಭದಲ್ಲಿ ಬಾರ್ ಬಂದಾಗಿದ್ದರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಯಾರೋ ದೂರು ನೀಡಿದ್ದರು. ಮಾಹಿತಿ ಅರಿತ ಅಧಿಕಾರಿಗಳು ಬಾರ್ ಗೆ ದಾಳಿ ನಡೆಸಿದ್ದರು.

ಇದನ್ನು ನಾನೇ ಮಾಡಿರುವುದಾಗಿ ಸಂಶಯಿಸಿ ನನ್ನ ಅಂಗಡಿ ಮುಂಭಾಗದಲ್ಲಿ ಮಾರಾಟ ಮಾಡಲೆಂದು ಇರಿಸಿದ 75,000 ರೂ ಮೌಲ್ಯದ ಗ್ಲಾಸ್ ಗಳನ್ನು ಯಾವುದೋ ಗಟ್ಟಿ ವಸ್ತುವಿನಿಂದ ಒಡೆದು ಹಾನಿಗೊಳಿಸಿರುತ್ತಾರೆ. ಈ ಕೃತ್ಯವನ್ನು ಬಾರ್ ಮಾಲಕರ ಕುಮ್ಮಕ್ಕಿನಿಂದ ನಡೆಸಲಾಗಿದೆ ಎಂದು ಮಹಾದೇವಿ ಗ್ಲಾಸ್&ಹಾಡ್೯ವೇರ್ ಮಾಲಕ ರಮೇಶ್ ಗೌಡ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here