ಜಯನಗರ : ಉಚಿತ ಆರೋಗ್ಯ ತಪಾಸಣಾ ಶಿಬಿರ

0

 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ರೋಟರಾಕ್ಟ್ ಕ್ಲಬ್ ಸುಳ್ಯ
ವಿಕ್ರಮ ಯುವಕ ಮಂಡಲ ಜಯನಗರ,ಹಳೆಗೇಟು ಮಿಲಿಟರಿ ಗ್ರೌಂಡ್ ನಿವಾಸಿಗಳು
ಇವರ ಸಹಯೋಗದೊಂದಿಗೆ
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಿಲಿಟರಿ ಗ್ರೌಂಡ್ ಪರಿಸರದಲ್ಲಿ ಸೆ. 11ರಂದು ನಡೆಸಲಾಯಿತು.

 

ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿದರು.
ಹಿಂಡ್ ಲ್ಯಾಬ್ ವೈದ್ಯಾಧಿಕಾರಿಯಾದ ಡಾ.ರಾಜಿಕ್ ರವರು ತಪಾಸಣೆಯನ್ನು ಮಾಡಿದರು. ತಜ್ಞರುಗಳಾಗಿ ಅಭಿಜಿತ್, ಪದ್ಮಶ್ರೀ,ನಳಿನಿ,ಸಂಕೇತ್,ಸ್ವಪ್ನ,ಶಾಳಿನಿ,ಪುರ್ಣಿಮಾ ರವರು ಸಹಕರಿಸಿದರು.
ರೋಟರಾಕ್ಟ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಪುವೇಂದ್ರನ್ ಕೂಟೇಲು ಉಪಸ್ಥಿತರಿದ್ದರು. ಹಿಂಡ್ ಲ್ಯಾಬ್ ನ
ಜಿಲ್ಲಾ ಸಂಯೋಜಕ ಪಿ.ವಿ.ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು.
ಶ್ರೀಮತಿ ವೀಣಾ ಯು., ಶ್ರೀಮತಿ ವೀಣಾ ನಂಬಿಯಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here