ಕುಂಬ್ರ: ರಸ್ತೆಯಲ್ಲಿ ಡೀಸೆಲ್ ಸೋರಿಕೆ-ಹಲವು ದ್ವಿಚಕ್ರ ವಾಹನಗಳು ಪಲ್ಟಿ

0

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಹಂಪ್ಸ್ ಬಳಿ ರಸ್ತೆಯಲ್ಲಿ ಆಯಿಲ್ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯವಾಗಿರುವ ಘಟನೆ ಜ.21ರಂದು ಮದ್ಯಾಹ್ನ ನಡೆದಿದೆ.


ಯಾವುದೋ ವಾಹನದ ಡೀಸೆಲ್ ಲೀಕೇಜ್ ಆಗಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಇಲ್ಲಿ ಆಯಿಲ್ ಸೋರಕೆಯಾಗಿರುವುದು ತಕ್ಷಣಕ್ಕೆ ಯಾರ ಗಮನಕ್ಕೂ ಬಂದಿರಲಿಲ್ಲ. ಪರಿಣಾಮ ಐದು ದ್ವಿಚಕ್ರ ವಾಹನಗಳು ಇದೇ ಸ್ಥಳದಲ್ಲಿ ಪಲ್ಟಿಯಾಗಿದ್ದು ಸವಾರರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವುದಾಗಿ ತಿಳಿದು ಬಂದಿದೆ. ಸ್ಥಳೀಯರು ರಸ್ತೆಯ ಒಂದು ಭಾಗದಲ್ಲಿ ಕಲ್ಲುಗಳನ್ನು ಇಟ್ಟು ಬಂದ್ ಮಾಡುವ ಮೂಲಕ ಹೆಚ್ಚಿನ ಅಪಾಯ ಉಂಟಾಗದಂತೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here