ಗಣರಾಜ್ಯೋತ್ಸವ ಪೆರೇಡ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರ ಸೇರಿಸುವಂತೆ ಕಡಬ ಬಿಲ್ಲವ ಸಂಘದಿಂದ ಸರಕಾರಕ್ಕೆ ಮನವಿ

0

ಕಡಬ: ಗಣರಾಜ್ಯೋತ್ಸವ ಪೆರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಸೇರಿಸುವಂತೆ ಕಡಬ ಯುವವಾಹಿನಿ ಘಟಕ ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಕಡಬ ತಹಸೀಲ್ದಾರ್ ಮೂಲಕ ಜ.21ರಂದು ಮನವಿ ಸಲ್ಲಿಸಿದೆ.

ಕಡಬ ತಾಲೂಕಿನ ಮರ್ದಾಳ, ಕಡಬ, ಆಲಂಕಾರು ವಲಯ ಬಿಲ್ಲವ ಸಂಘ, ಯುವವಾಹಿನಿ ಘಟಕ ಕಡಬ, ಕೋಟಿ ಚೆನ್ನಯ್ಯ ಮಿತ್ರವೃಂದ ಆಲಂಕಾರು, ಬ್ರಹ್ಮಶ್ರಿ ನಾರಾಯಣ ಗುರುಮಂದಿರ ಗೋಳಿಯಡ್ಕ, ಕಟ್ಟತ್ತಡ್ಕ, ನೆಟ್ಟಣ, ಹಾಊ ಬಿಎಸ್‌ಎನ್ ಡಿಪಿ ತಾಲೂಕು ಸಮಿತಿ ಸಂಚಾಲಕರುಗಳು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಸಭೆ ಸೇರಿ ಬಳಿಕ ಕಡಬ ತಹಸೀಲ್ದಾರ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಮನವಿ ನೀಡಿದ ಬಿಲ್ಲವ ಮುಖಂಡರು ಮಾತನಾಡಿ ಗಣರಾಜ್ಯೋತ್ಸವ ದಿನದಂದು ನಡೆಯುವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇರಳ ಸರಕಾರ ಕಳುಹಿಸಿದ್ದು ಇದನ್ನು ಕೇಂದ್ರ ಸರಕಾರವು ತಿರಸ್ಕರಿಸಿದೆ, ಮೇಲು-ಕೀಳು, ಜಾತಿ-ಮತ, ದ್ವೇಷ ಇರುವ ಸಮಾಜದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸರ್ವ ಸಮಾನತೆಯ ಜ್ಞಾನದ ಬೆಳಕಾಗಿ ಅವತರಿಸಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಜಗತ್ತಿಗೆ ಸಾರಿದವರು. ಗುರುಗಳ ಕೋಟ್ಯಾಂತರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಅಗೌರವ ತೋರಿಸಿರುವುದು ವಿಷಾಧನೀಯ, ಈ ಬಗ್ಗೆ ಕೇಂದ್ರ ಸರಕಾರ ಪುನರ್ ಪರಿಶೀಲನೆ ಮಾಡಿ ಜ.೨೬ರಂದು ನಡೆಯುವ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ದ ಚಿತ್ರ ಇರುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಲ್ಲವ ಪ್ರಮುಖರಾದ ವಿಜಯ ಕುಮಾರ್ ಸೊರಕೆ, ಸತೀಶ್ ಕೆ ಐತ್ತೂರು, ಜಯಪ್ರಕಾಶ್ ದೋಳ, ಉದಯ ಸಾಲ್ಯಾನ್ ಆಲಂಕಾರು, ವಸಂತ ಬದಿಬಾಗಿಲು, ಪ್ರವೀಣ್ ಓಂಕಲ್, ಸಂತೋಷ್ ಗುಂಡ್ಯ, ಗಣರಾಜ್, ದಯಾನಂದ ಕರ್ಕೇರ, ಗೀತಾ ಉಂಡಿಲ, ಶಿವಪ್ರಸಾದ್ ನೂಚಿಲ, ದೀಕ್ಷಿತ್ ಪಣೆಮಜಲು, ಸರಿತಾ, ನಯನ ಕುಮಾರಿ, ಅಭಿಲಾಷ್ ಪಿ.ಕೆ, ರವಿಚಂದ್ರ, ಕುಮಾರಿ ವಾಸುದೇವನ್,ರವಿ ಮಾಯಿಲ್ಗ, ಲಿಂಗಪ್ಪ ಪೂಜಾರಿ, ವಿನಯ್ ಕಡಬ, ಲೋಹಿತ್ ಮಾಯಿಲ್ಗ, ಮೋನಪ್ಪ, ಸದಾನಂದ ಕುಮಾರ್, ಜಯಂತ ಪೂಜಾರಿ ಆಲಂಕಾರು, ಸುರೇಶ್ ಪಾಲಪ್ಪೆ, ರಮೇಶ್, ಮನೋಹರ ಆಲಂಕಾರ್, ಸುಂದರ ಪೂಜಾರಿ ಅಂಙಣ, ನಯನ, ಹರ್ಷಿತ್ ಮೊದಲಾದವರು ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಕಡಬ ತಹಸೀಲ್ದಾರ್ ಅನಂತ ಶಂಕರ್ ರವರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

LEAVE A REPLY

Please enter your comment!
Please enter your name here