ನಿತ್ಯ ತಾಯಿಯ ಸೇವೆ ಮಾಡಿದರೆ ವರ್ಷದೊಳಗೆ ಫಲ ಸಿಗಲಿದೆ – ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರ ಬ್ರಹ್ಮಕಲಶೋತ್ಸವದಲ್ಲಿ ಮಾಣಿಲ ಶ್ರೀಗಳು

0

  • ಬ್ರಹ್ಮಕಲಶದ ಉತ್ಸಾಹ ನಿತ್ಯಮಯವಾಗಲಿ – ಕೆ.ಜೀವಂಧರ್ ಜೈನ್
  • ಅರ್ಪಿತ ಭಾವನೆಯಿಂದ ಧರ್ಮ ಜಾಗೃತಿ – ಅರುಣ್ ಕುಮಾರ್ ಪುತ್ತಿಲ
  • ತಾಯಿಯ ಸೇವೆ ಮಾಡೋಣ – ಗೌರಿ ಬನ್ನೂರು
  • ಸರೋಜಿನಿ ಅಮ್ಮನವರ ಆಸೆ ಈಡೇರಿತು – ಉದಯ ಕುಮಾರ್
  • ಎಲ್ಲರ ಸಹಕಾರದೊಂದಿಗೆ ಬ್ರಹ್ಮಕಲಶ ನೆರವೇರಿದೆ – ವಿಶ್ವನಾಥ ಗೌಡ

ಪುತ್ತೂರು: ಬನ್ನೂರು ಮಹಾಲಕ್ಷ್ಮೀ ಕೇತ್ರದಲ್ಲಿ ಮಹಿಮೆ ಇದೆ. ನಿತ್ಯ ಇಲ್ಲಿ ಸೇವಾ ಚಟುವಟಿಕೆ ನಡೆದರೆ ವರ್ಷದೊಳಗೆ ಫಲ ಸಿಗಲಿದೆ ಎಂದು ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.


ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಜ.21 ರಂದು ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀವಚನ ನೀಡಿದರು. ಸಾಧಕರ ತಪ್ಪಸ್ಸಿನ ಬಗ್ಗೆ ಅವರಿರುವಾಗ ಗೊತ್ತಿರುವುದಿಲ್ಲ. ಅವರು ಹೋದ ಮೇಲೆ ಬೆಳಕಿಗೆ ಬರುತ್ತದೆ. ಅದು ಇಲ್ಲಿಯೂ ನಡೆದಿದೆ. ಸಾಧಕಿ ಸರೋಜಿನಿ ಅಮ್ಮನವರ ತಪ್ಪಸಿನ ಮಹತ್ವ ಏನು ಎಂದು ಇವತ್ತು ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಮಹಿಮೆಯಿದೆ. ಮಹಾಲಕ್ಷ್ಮೀ ಮಹಿಳಾ ಸಮಿತಿ ಮಾಡಿಕೊಂಡು ನಿರಂತರ ಮಹಿಳೆಯರ ಸೇವೆ ಇಲ್ಲಿ ನಡೆಯಬೇಕು. ತಾಯಿಯ ಸಾನಿಧ್ಯದಲ್ಲಿ ಭಜನೆ ಮಾಡುವ ತಂಡ ನಿತ್ಯ ಸೇವೆ ಮಾಡಿದಾಗ ಮುಂದಿನ ವರ್ಷದ ನಿಮಗೆ ಅದರ ಫಲ ಗೋಚರಿಸುತ್ತದೆ ಎಂದರು.

 


ದೋಷವು ವ್ಯವಾಹರಿಕ ವಾಗದಿದಲಿ:
ದೋಷವು ವ್ಯವಾಹರಿಕ ಪ್ರಪಂಚದಲ್ಲಿ ಬೆಳೆಯುತ್ತಿದೆ. ಆದರೆ ಭಗವಂತನಿಗೆ ಭಕ್ತಿ ಮತ್ತು ಪ್ರಾರ್ಥನೆಯೆ ಮುಖ್ಯ ಎಂದು ಹೇಳಿದ ಮಾಣಿಲ ಶ್ರೀಗಳು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಚಿಂತನೆ ಪ್ರಶ್ನೆಯಲ್ಲಿ ಕೆಲವ ಭಾವನೆಗೆ ವ್ಯತ್ಯಾಸ ಕಂಡಿರಬಹುದು. ಆದರೆ ಅದು ಗೊಂದಲದ ವೇದಿಕೆ ಆಗಬಾರದು. ಇವತ್ತು ದೋಷ ವ್ಯವಹಾರಿಕ ಪ್ರಪಂಚದಲ್ಲಿ ಬೆಳೆಯುತ್ತಿದೆ. ಆದರೆ ಭಗವಂತನ ಆರಾಧನೆಗೆ ಭಕ್ತಿ ಮತ್ತು ಪ್ರಾರ್ಥನೆ ಮುಖ್ಯ. ದೋಷ ಕಂಡು ಬಂದರೂ ದೇವರು ಕೃಪಾಮಯಿ. ಭಕ್ತರು ತಪ್ಪು ಮಾಡಿದರೂ ಅನುಗ್ರಹ ಮತ್ತು ಜ್ಞಾನವನ್ನು ಕೊಡುವ ಶಕ್ತಿ ದೇವರಿಗಿದೆ ಎಂದರು.

ಬ್ರಹ್ಮಕಲಶದ ಉತ್ಸಾಹ ನಿತ್ಯಮಯವಾಗಲಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಬಹಳ ಉತ್ಸಾಹದಲ್ಲಿ ಎಲ್ಲರು ಸೇರುತ್ತಾರೆ. ಇದೇ ಉತ್ಸಾಹ ನಿತ್ಯಮವಾಗಿರಲಿ. ಮುಂದೆ ಅದು ಕುಂಠಿತವಾಗದಂತೆ ನೋಡಿಕೊಳ್ಳಬೇಕು. ಭಾರತೀಯ ಧರ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕೆಂದು ಅವರು ಹೇಳಿದರು.

ಸಮಾಜದಲ್ಲಿ ಅರ್ಪಿತ ಭಾವನೆಯಿಂದ ಮಾಡುವ ಕೆಲಸದಿಂದ ಧರ್ಮ ಜಾಗೃತಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಇವತ್ತು ಹಿಂದು ಸಮಾಜದ ಮುಂದೆ ಸಾವಿರಾರು ಸವಾಲುಗಳಿವೆ. ಮಠ ಮಂದಿರ ಮೇಲೆ ನಡೆದ ಅನೇಕ ಘಟನೆಗಳಿಗೆ ಸಂಬಂಧಿಸಿ ಸಮಾಜದ ಶ್ರದ್ದಾ ಕೇಂದ್ರಗಳ ಮೂಲಕ ಸಂಸ್ಕಾರ, ಮೌಲ್ಯಗಳನ್ನು ಉಳಿಸಲು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಧರ್ಮ ಧರ್ಮಗಳ ನಡುವೆ ಅನೇಕ ಘಟನೆಗಳು ಸಾಮಾಜಿಕ ಬದ್ದತೆಯ ವಿದ್ಯಾಮಾನವನ್ನು ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಅರ್ಪಿತ ಭಾವನೆಯಿಂದ ಕೆಲಸ ಮಾಡಬೇಕು. ಆಗ ಧರ್ಮ ಜಾಗೃತಿ ಆಗುತ್ತದೆ. ನಾವೆಲ್ಲ ಅತ್ಯಂತ ಶ್ರದ್ದೆಯಿಂದ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ತಾಯಿಯ ಸೇವೆ ಮಾಡೋಣ
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಅವರು ಮಾತನಾಡಿ ನಾವು ಈ ಪರಿಸರದಲ್ಲಿ ಬೆಳೆದವರು. ಹಿಂದೆ ಮಂದಿರದಲ್ಲಿ ಅಕ್ಕೆಯ ಧಾರ್ಮಿಕ ಕಾರ್ಯಕ್ಕೆ ನಾವು ಕೈ ಜೋಡಿತಿ ತಾಯಿಯ ಸೇವೆ ಮಾಡುತ್ತಿದ್ದೆವು. ಅವರು ಕೊಟ್ಟಂತಹ ಬೆಲ್ಲದ ರುಚಿ ಇವತ್ತಿಗೂ ನನ್ನ ಮುಂದಿದೆ. ಚಿನ್ನದ ಚೈನ್ ಕಾಣೆಯಾದಾಗ ಅದನ್ನು ಮಹಾಲಕ್ಷ್ಮೀಯ ಪ್ರಾರ್ಥನೆಯಿಂದ ಸಿಕ್ಕಿತ್ತು. ಹಾಗಾಗಿ ಕ್ಷೇತ್ರದಲ್ಲಿ ಕಾರಣಿಕ ಶಕ್ತಿಯಿದೆ. ಮುಂದಿನ ದಿನ ತಾಯಿ ಸೇವೆಂiiನ್ನು ನಾವೆಲ್ಲ ಸೇರಿಕೊಂಡು ಮಾಡೋಣ ಎಂದರು.

ಸರೋಜಿನಿ ಅಮ್ಮನವರ ಆಸೆ ಈಡೇರಿತು:
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ಅವರು ಮಾತನಾಡಿ ಶ್ರೀ ಮಹಾಲಕ್ಷ್ಮೀ ಮಂದಿರದ ಸ್ಥಾಪನೆ ಮಾಡಿದ ದಿ ಸರೋಜಿನಿ ಅಮ್ಮನವರಿಗೆ ಮಂದಿರ ಜೀರ್ಣೋದ್ಧಾರ ಆಗಬೇಕೆಂಬ ಕನಸಿತ್ತು. ಅವರ ಆಸೆ ಇವತ್ತು ಊರಿನವರು ಮತ್ತು ಪರಿಸರದವರು ಈಡೇರಿಸಿದ್ದಾರೆ ಎಂದರು.

ಎಲ್ಲರ ಸಹಕಾರದೊಂದಿಗೆ ಬ್ರಹ್ಮಕಲಶ ನೆರವೇರಿದೆ:
ಶ್ರೀ ಮಹಾಲಕ್ಷ್ಮೀ ಮಂದಿರ ಬ್ರಹ್ಮಕಲಶೋತ್ಸವ ಸಮಿತ ಅಧ್ಯಕ್ಷ ವಿಶ್ವನಾಥ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಂದಿರ ಜೀರ್ಣಾವ್ಯವಸ್ಥೆಯಲ್ಲಿದ್ದಾಗ ಅದರ ಜೀರ್ಣೋದ್ಧಾರಕ್ಕೆ ಶ್ರೀ ಶಿವಪಾರ್ವತಿ ಮಂದಿರದ ನೇತೃತ್ವದಲ್ಲಿ ಮಾಡುವುದೆಂದು ನಿರ್ಣಯಿಸಿದಂತೆ ಮಂದಿರದ ಬನ್ನೂರು ಗುತ್ತಿನ ಮನೆಯವರಾದ ಸುದೇಶ್ ಪೂಂಜಾ ಅವರು ನಮ್ಮ ಮೇಲುಸ್ತುವಾರಿಗೆ ಬಿಟ್ಟು ಕೊಟ್ಟರು. ಅದಾದ ಬಳಿಕ ನಾವು ೨ ವರ್ಷದ ಹಿಂದೆ ಅನುಜ್ಞಾ ಕಲಶ ನೆರವೇರಿಸಿ ಜೀರ್ಣೋದ್ಧಾರಕ್ಕೆ ಮುಂದಡಿಯಿಟ್ಟಾಗ ಕೋವಿಡ್ ಸೋಂಕಿನಿಂದಾಗಿ ಸಮಸ್ಯೆ ಆದರೂ ತಾಯಿಯ ಅನುಗ್ರಹ ಮತ್ತು ಎಲ್ಲರ ಸಹಕಾರದೊಂದಿಗೆ ಮಂದಿರದ ಜೀರ್ಣೋದ್ದಾರ ಆಗಿ ಇವತ್ತು ಬ್ರಹ್ಮಕಲಶೋತ್ಸವ ಆಗಿದೆ ಎಂದರು.

ಮಹಾಲಕ್ಷ್ಮೀ ಯುವಕರ ತಂಡದಿಂದ ಸನ್ಮಾನ: ಶ್ರೀ ಮಹಾಲಕ್ಷ್ಮೀ ಮಂದಿರದ ಜೀರ್ಣೋದ್ದಾರಕ್ಕೆ ಪ್ರಮುಖ ಕಾರಣಕರ್ತರಾದ ಮತ್ತು ಎಲ್ಲಾ ರೀತಿಯಲ್ಲೂ ಯುವಕರಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ದಂಪತಿ ಮತ್ತು ಮೋಹನ್ ಜೈನ್ ಅವರಿಗೆ ಬನ್ನೂರು ಮಹಾಲಕ್ಷ್ಮಿ ಯುವಕರ ತಂಡದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರಚಾರ ಸಮಿತಿಯ ಅಶೋಕ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬನ್ನೂರು ಗುತ್ತು ಮನೆತನ ಮತ್ತು ಸರೋಜಿನಿ ಅಮ್ಮನವರ ಸಂಬಂಧಿ ಸುಧೀರ್ ಶೆಟ್ಟಿ, ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ವಿವಿಧ ಜವಾಬ್ದಾರಿ ವಹಿಸಿದ ಭುಜಂಗ ಆಚಾರ್ಯ, ಮಹೇಶ್ ಹೆಗ್ಡೆ, ಪ್ರದೀಪ್, ಮಹಾಬಲ ಪೂಜಾರಿ, ರಕ್ಷಿತ್ ಶೆಟ್ಟಿ, ಶಾಲಿನಿ, ಭುವನಶ್ರೀ, ಅಶೋಕ್ ಬನ್ನೂರು, ರತ್ನಾಕರ ರೈ, ಹರ್ಷಾ ಬನ್ನೂರು, ರಾಜೇಶ ಆಚಾರ್ಯ, ಸರೋಜ, ದೀಪಿಕಾ ಪ್ರಕಾಶ್ ಅತಿಥಿಗಳನ್ನು ಗೌರವಿಸಿದರು. ಆರ್ಥಿಕ ಸಮಿತಿ ಅಧ್ಯಕ್ಷ ಶೇಖರ್ ಬಿರ್‍ವ ವಂದಿಸಿದರು. ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಿವ ಪಾರ್ವತಿ ಮಂದಿರದ ಕಾರ್ಯದರ್ಶಿ ದಯಾನಂದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಬಿಂಬ ಪ್ರತಿಷ್ಟೆ, ಬ್ರಹ್ಮಕಲಶಾಭಿಷೇಕದಲ್ಲಿ ಪವಾಡ
ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಶಿಖರ ಪ್ರತಿಷ್ಠೆ, ಮಹಾಲಕ್ಷ್ಮೀ ದೇವರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಈ ನಡುವೆ ಬ್ರಹ್ಮಶ್ರೀ ವೇ ಮೂ ಸುಬ್ರಹ್ಮಣ್ಯ ಬಳ್ಳಕುರಾಯ ಅವರ ನೇತೃತ್ವದಲ್ಲಿ ಬನ್ನೂರು ಶ್ರೀಮಹಾಲಕ್ಷ್ಮೀ ಮಂದಿರದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ವೇಳೆ ಪ್ರತಿಷ್ಠಾ ಜಪ ಮಾಡುತ್ತಿದ್ದ ಸಂದರ್ಭ ಅಮ್ಮನವರ ಶಿಲಾ ಬಿಂಬದ ಪಾದದಲ್ಲಿದ್ದ ಹಿಂಗಾರವು ಪ್ರಸಾದ ರೂಪದಲ್ಲಿ ಜಾರಿದೆ. ಅದಾದ ಬಳಿಕ ಬಿಂಬಕ್ಕೆಕಲಶ ಅಭಿಷೇಕ ಮಾಡುವ ಮೊದಲು ಅಮ್ಮನ ಶಿರದಲ್ಲಿದ್ದ ಪುಷ್ಪ ಜಾರಿ ಪಾದವನ್ನು ಸ್ಪರ್ಶಿಸಿದ ಘಟನೆ ಭಕ್ತರ ಕಣ್ಣು ಮುಂದೆ ನಡೆದಿದೆ. ಇದೇ ರೀತಿ ಜ.೨೦ ರಂದು ಮಂದಿರದ ಸುತ್ತ ನಾಗರ ಹಾವೊಂದು ಮಂದಿರಕ್ಕೆ ಕೂಗಲತೆ ದೂರದಿಂದು ಸುತ್ತು ಹಾಕಿ ಹೋಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಬನ್ನೂರು ಮಹಾಲಕ್ಷ್ಮೀ ಕ್ಷೇತ್ರ ಕಾರ್ಣಿಕ ಶಕ್ತಿಯಾಗಿ ಇಲ್ಲಿ ನೆಲೆಸಿದ್ದಾರೆ ಎಂದು ಭಕ್ತರ ನಂಬಿಕೆಯಾಗಿದೆ.

LEAVE A REPLY

Please enter your comment!
Please enter your name here