ರಾಮಕುಂಜ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

0

ರಾಮಕುಂಜ: ಯಾವುದೇ ಗುರಿಯನ್ನು ಸಾಧಿಸಲು ನಾವು ಸಂಘಟಿತರಾಗಬೇಕು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ. ಈ ರೀತಿಯ ತತ್ವದ ಮುಖೇನ ನಾಯಕನಾದವ ಕಾರ್ಯನಿರ್ವಹಿಸಬೇಕು ಎಂದು ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ ಹೇಳಿದರು.


ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ಅಭ್ಯಾಗತರಾಗಿದ್ದ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ನಾಯಕನಾದವನಿಗೆ ತ್ಯಾಗಮಾಡುವ, ಜವಾಬ್ದಾರಿ ತೆಗೆದುಕೊಳ್ಳುವ, ಮಾನವೀಯ ಮನೋಭಾವವಿರಬೇಕು. ಈ ರೀತಿಯ ಗುಣ ವಿದ್ದವನು ಮಾತ್ರ ಯಶಸ್ವಿ ನಾಯಕನಾಗಲು ಸಾಧ್ಯ ಎಂದರು. ಇನ್ನೋರ್ವ ಅತಿಥಿ ದ್ವಾರಕ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್‌ರವರು ಮಾತನಾಡಿ, ಗುರುವೆಂದರೆ ಶ್ರೇಷ್ಠತ್ವ. ಇಂತಹ ಗುರುಗಳನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಕೆ.ಲಕ್ಷ್ಮೀನಾರಾಯಣ ರಾವ್‌ರವರು ಮಾತನಾಡಿ, ನಾಯಕತ್ವದಲ್ಲಿ ಮುಂದಾಳತ್ವವಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಇಎಲ್‌ಸಿ ನೋಡಲ್ ಅಧಿಕಾರಿ ಲತನ್ ಜಿ.ಎಸ್., ವಿದ್ಯಾರ್ಥಿ ಸಂಘದ ನಾಯಕ ಭರತ್, ಕಾರ್ಯದರ್ಶಿ ಶೃತನ್, ಜೊತೆ ಕಾರ್ಯದರ್ಶಿ ಸ್ವಪ್ನ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕ ಭರತ್ ಸ್ವಾಗತಿಸಿ, ಯೋಗೀಶ್ ತೃತೀಯ ಬಿ.ಕಾಂ ವಂದಿಸಿದರು. ಕುಮಾರಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here