ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಮಹೇಶ್ ಕಜೆ ನೇಮಕ

0

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಪುತ್ತೂರಿನ ಖ್ಯಾತ ವಕೀಲ ಮಹೇಶ್ ಕಜೆ ನೇಮಕಗೊಂಡಿದ್ದಾರೆ. ಸಮುದಾಯಕ್ಕೆ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಮಹೇಶ್ ಕಜೆಯವರನ್ನು 2022-23ರ ಅವಧಿಗೆ ಉಪಾಧ್ಯಕ್ಷರನ್ನಾಗಿ ಅಖಿಲ‌ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಾಸಭಾಧ್ಯಕ್ಷ ಅಶೋಕ ಹಾರನಕಳ್ಳಿ ನೇಮಕಗೊಳಿಸಿದ್ದಾರೆ.


ಉಪ್ಪಿನಂಗಡಿ ಸಮೀಪದ ‘ಕೇದಾರ’ ನಿವಾಸಿಯಾಗಿರುವ ಮಹೇಶ್ ಕಜೆಯವರು ಬೊಳುವಾರು ಕಜೆ ಲಾ ಛೇಂಬರ್ಸ್ ನ ಮುಖ್ಯಸ್ಥರಾಗಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯರೂ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಮಹೇಶ್ ಕಜೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.‌

LEAVE A REPLY

Please enter your comment!
Please enter your name here