ಪಟ್ಟಣ ಪಂಚಾಯತ್ ಸಿಬ್ಬಂದಿ ಮೇಲೆ ಲಂಚದ ಆರೋಪ ಮಾಡುವ ಮೂಲಕ ದಲಿತರನ್ನು ಎತ್ತಿಕಟ್ಟುವ ಕೆಲಸವಾಗುತ್ತಿದೆ : ಸೇಸಪ್ಪ ಬೆದ್ರಕ್ಕಾಡು

0

 

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ರವರು ಪಂಚಾಯತ್ ಸಿಬ್ಬಂದಿ ಮೇಲೆ ಲಂಚದ ಆರೋಪ ಮಾಡುವ ಮೂಲಕ ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದು ಇದು ಖಂಡನೀಯ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ತಿಳಿಸಿದರು.

 

ವಿಟ್ಲದಲ್ಲಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಮತ್ತು‌ ದ.ಕ ಜಿಲ್ಲಾ ಪೌರಕಾರ್ಮಿಕ ಸಂಘ  ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಕರೆದ ಜಂಟಿ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು ರಾಜೇಶ್ ಅವರು ಲಂಚ ಕೇಳಿದ್ದರೆ ನೇರವಾಗಿ ಎಸಿಬಿಗೆ ದೂರ ನೀಡಬಹುದಿತ್ತು. ಅದನ್ನು ಬಿಟ್ಟು ವಿವಿಧ ಇಲಾಖೆಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ಮತ್ತು ಅಪಪ್ರಚಾರ ಮಾಡುವ ಅವಶ್ಯಕತೆ ಇರಲಿಲ್ಲ.‌ ಭಾಸ್ಕರ್ ಎಂಬ ಮುಗ್ಧನನ್ನು ಬಳಸಿಕೊಂಡು ಆರೋಪಿ ಶ್ರೀಕೃಷ್ಣ ಇಲ್ಲಸಲ್ಲದ ಆರೋಪ ಮಾಡಿರುವ ಘಟನೆಯನ್ನು ಖಂಡಿಸುತ್ತೇವೆ. ತಕ್ಷಣವೇ ಶ್ರೀಕೃಷ್ಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.‌

 ದ.ಕ ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷ ಬಿ.ಕೆ ಅಣ್ಣು ಕರೆಕಾಡು ಮಾತನಾಡಿ ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ. ತಕ್ಷಣ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ರಾಜೇಶ್ ಅವರಿಗೆ ನ್ಯಾಯ ಒದಗಿಸಬೇಕು ಎಂದರು.

ಈ ಸಂದರ್ಭ ದ.ಕ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು, ಅಶೋಕ್ ಚಂದಳಿಕೆ, ಸೋಮಪ್ಪ ಸುರುಳಿಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here